ವಿದ್ಯುತ್ ಸ್ಪರ್ಶ ಕೃಷಿ ಕಾರ್ಮಿಕ ಸ್ಥಳದಲ್ಲೇ ಸಾವು

17-01-21 06:08 pm       Mangalore Correspondent   ಕರಾವಳಿ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ವಿದ್ಯುತ್ ತಂತಿ ಸ್ಪರ್ಷಗೊಂಡು ಕೂಲಿಕಾರ್ಮಿಕರೊಬ್ಬ ಮೃತಪಟ್ಟ ಘಟನೆ ಬಲ್ನಾಡು ಎಂಬಲ್ಲಿ  ನಡೆದಿದೆ. 

ಪುತ್ತೂರು, ಜ.17: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ವಿದ್ಯುತ್ ತಂತಿ ಸ್ಪರ್ಷಗೊಂಡು ಕೂಲಿಕಾರ್ಮಿಕರೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ನಡೆದಿದೆ. 

ಪೆರ್ಲಂಪಾಡಿ ಗ್ರಾಮದ ಏಣಿತಡ್ಕ ನಿವಾಸಿ ಕೃಷಿ ಕೂಲಿ ಕಾರ್ಮಿಕ ಅಶ್ರಫ್ ಅಲಿ (51) ಮೃತಪಟ್ಟ ವ್ಯಕ್ತಿ. ಅಶ್ರಫ್ ಅವರು ಉಜ್ರುಪಾದೆ ನಿವಾಸಿ ಗಣೇಶ್ ಎಂಬವರ ತೋಟದಲ್ಲಿ ಕರಿಮೆಣಸು ಕೊಯ್ಯಲೆಂದು ಅಲ್ಯುಮೀನಿಯಂ ಏಣಿಯನ್ನು ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ತೋಟದ ನಡುವೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಷಗೊಂಡು ವಿದ್ಯುತ್ ಪ್ರವಹಿಸಿ ಅಶ್ರಫ್ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. 

ಮೂಲತ: ಕೇರಳ ನಿವಾಸಿಯಾಗಿರುವ ಅಶ್ರಫ್ ಅವರು ಪೆರ್ಲಂಪಾಡಿಯಿಂದ ವಿವಾಹವಾಗಿ ಮಾವನ ಮನೆಯಲ್ಲಿಯೇ ವಾಸವಾಗಿದ್ದರು. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

A farmer died after he was electrocuted in his land at Puttur. The sampya police have registered the case.