ಬ್ರೇಕಿಂಗ್ ನ್ಯೂಸ್
20-01-21 02:28 pm Mangalore Correspondent ಕರಾವಳಿ
ಉಳ್ಳಾಲ, ಜ.20: ಕಿಡಿಗೇಡಿಗಳು ವಿಕೃತಿ ಮೆರೆದ ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ ಭಜನಾ ಮಂದಿರಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ಉದ್ರೇಕಿತ ಬರಹವುಳ್ಳ ಭಿತ್ತಿ ಪತ್ರವೊಂದನ್ನು ಹಾಕಿದ್ದು ನಿನ್ನೆ ರಾತ್ರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಬೆಳಗ್ಗೆ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ಕೊರಗಜ್ಜ, ಗುಳಿಗಜ್ಜ ಸನ್ನಿಧಿಯಲ್ಲಿ ಸಮಿತಿ ವತಿಯಿಂದ ಸಾಮೂಹಿಕ ಪ್ರಾರ್ಥನೆಯೂ ನಡೆದಿತ್ತು. ಇದೇ ವೇಳೆ ಕಿಡಿಗೇಡಿ ಕೃತ್ಯ ಹಿನ್ನೆಲೆಯಲ್ಲಿ ಕಮಿಷನರ್ ಶಶಿಕುಮಾರ್ ಉಳ್ಳಾಲಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ಸಲ್ಲದು. ಈ ಹಿಂದೆಯೂ ನಗರದಲ್ಲಿ ಈ ರೀತಿಯ ಎರಡು ಘಟನೆ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವ ಕಿಡಿಗೇಡಿಗಳು ಸಿಕ್ಕರೆ ಸುಮ್ನೆ ಬಿಡಲ್ಲ. ಕೊಣಾಜೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು ಡಿಸಿಪಿ ಹರಿರಾಂ ಶಂಕರ್ ಮತ್ತು ಎಸಿಪಿ ರಂಜಿತ್ ಬಂಡಾರು ನೇತೃತ್ವದ ವಿಶೇಷ ತಂಡ ಆದಷ್ಟು ಬೇಗನೆ ಕಿಡಿಗೇಡಿಗಳ ಪತ್ತೆ ಹಚ್ಚುವ ಕಾರ್ಯ ನಡೆಸುತ್ತದೆ. ಧಾರ್ಮಿಕ ಕ್ಷೇತ್ರದವರು ಎಲ್ಲರೂ ಸಿಸಿಟಿವಿ ಅಳವಡಿಸಲು ಸಲಹೆ ನೀಡಿದರು.
ಉಳ್ಳಾಲ ನಗರಸಭೆ ಕಟ್ಟಡದಲ್ಲೇ ಸಿಸಿಟಿವಿ ಇಲ್ಲ !
ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯಲ್ಲಿ ಸಿಸಿಟಿವಿ ಯಾಕೆ ಹಾಕಿಲ್ಲ ಎಂದು ಕಮೀಷನರ್ ಶಶಿಕುಮಾರ್ ಅವರು ಸಮಿತಿ ಅಧ್ಯಕ್ಷ ಸುನಿಲ್ ಅವರಲ್ಲಿ ಕೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕೊರಗಜ್ಜನ ಕಟ್ಟೆಯ ಎದುರಲ್ಲೇ ಇರುವ ನಗರಸಭೆಯ ಬೃಹತ್ ಸರಕಾರಿ ಕಟ್ಟಡದಲ್ಲೇ ಸಿಸಿಟಿವಿ ಅಳವಡಿಸಿಲ್ಲ ಎಂದು ಗಮನಕ್ಕೆ ತಂದರು. ನಗರಸಭೆಯ ಕಟ್ಟಡದಲ್ಲಿ ಸಿಸಿಟಿವಿ ಇರುತ್ತಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದರು. ಈ ವೇಳೆ ಬಿಜೆಪಿ ಕ್ಷೇತ್ರ ಸಮಿತಿಯಿಂದಲೂ ಕಮೀಷನರ್ ಅವರಿಗೆ ದೂರು ನೀಡಲಾಯಿತು. ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ ಹಾಕಿದ್ದಲ್ಲದೆ, ಭಿತ್ತಿ ಪತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಬಿಜೆಪಿ ಮುಖಂಡರ ಅವಹೇಳನ ಮಾಡಲಾಗಿದ್ದು, ಇದರಿಂದ ಸಾಮಾಜಿಕ ನೆಮ್ಮದಿ ಕೆಡುವ ಸಾಧ್ಯತೆ ಇದೆ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಚಂದ್ರಹಾಸ್ ಪಂಡಿತ್ ಹೌಸ್ ಅವರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದರು.
ನಗರಸಭೆ ಸದಸ್ಯೆಗೆ ಮಾಸ್ಕ್ ಹಾಕಲು ಕಮೀಷನರ್ ಸಲಹೆ
ಕಮೀಷನರ್ ಭೇಟಿ ವೇಳೆ ಸ್ಥಳೀಯ ನಗರಸಭೆ ಸದಸ್ಯೆಯೋರ್ವರು ಮಾಸ್ಕ್ ಹಾಕದೆ ಮಾತನಾಡುತ್ತಿದ್ದು , ಅವರಿಗೆ ಕಮೀಷನರ್ ಮಾಸ್ಕ್ ಹಾಕಲು ಸಲಹೆ ನೀಡಿದರು. ಉಳ್ಳಾಲದಲ್ಲಿ ನಾವೇ ಮಾಸ್ಕ್ ಹಾಕದಿದ್ದ ಸಮಯದಲ್ಲಿ ಹಿರಿಯರು ಬಂದು ಗದರಿಸಿದ್ದರೆಂದು ಸದಸ್ಯೆಯಲ್ಲಿ ಹೇಳಿದರು.
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
ಹಿಂದುಗಳನ್ನು ನಿಂದಿಸಿ ಬರಹ ; ಕಾಣಿಕೆ ಡಬ್ಬಿಯಲ್ಲಿ ಕಿಡಿಗೇಡಿ ಕೃತ್ಯ
Video:
Police commissioner N Shashi Kumar visited Koragajja temple in Ullal after some miscreants dropped condom and provocative message into the offering box.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm