ಬ್ರೇಕಿಂಗ್ ನ್ಯೂಸ್
20-01-21 05:46 pm Mangalore Correspondent ಕರಾವಳಿ
ಉಳ್ಳಾಲ, ಜ.19: ಮರಳು ದಂಧೆಕೋರರು ಸುಳ್ಳು ದಾಖಲೆ ಸೃಷ್ಟಿಸಿ ನಿತ್ಯವೂ ರಾತ್ರಿ, ಹಗಲೆನ್ನದೆ ಮುಖ್ಯ ರಸ್ತೆ ತಪ್ಪಿಸಿ ತಲಪಾಡಿ ಸಮೀಪದ ಕೆ.ಸಿ. ರೋಡ್, ಕೊಂಡಾಣ ಒಳರಸ್ತೆ ಮೂಲಕ ಲೋಡ್ ಗಟ್ಟಲೆ ಮರಳನ್ನು ಸ್ಥಳೀಯರಿಗೆ ಪೂರೈಸುತ್ತಿರುವ ವಿಚಾರ ಬಯಲಾಗಿದೆ.
ನಿನ್ನೆ ಸಂಜೆ ಸುಮಾರು 4.30ರ ಸುಮಾರಿಗೆ ನಾಟೆಕಲ್ ಸಮೀಪದ ನಡುಕುಮೇರು, ಪಡುವಳ್ ಫಾರ್ಮ್ಸ್ ಬಳಿ ಮರಳು ತುಂಬಿದ ಟಿಪ್ಪರ್ ಲಾರಿಯ ಧಾವಂತಕ್ಕೆ ಓಮ್ನಿ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿತ್ತು. ಘಟನೆಯಲ್ಲಿ ಕಾರು ಸವಾರರಿಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರು. ಟಿಪ್ಪರ್ ಚಾಲಕ ತನ್ನಲ್ಲಿ ಮರಳು ಪರವಾನಿಗೆ ಇದೆಯೆಂದು ಪೊಲೀಸರಲ್ಲಿ ತೋರಿಸಿದ್ದು ಪರವಾನಿಗೆ ಪ್ರತಿ ಹೆಡ್ ಲೈನ್ ಕರ್ನಾಟಕಕ್ಕೆ ಲಭಿಸಿದೆ.
ನಿಯಮ ಪ್ರಕಾರ, ಮರಳು ಪೂರೈಕೆ ಮಾಡಲು ಅಧಿಕಾರಿಗಳಿಂದ ಪ್ರತಿ ಬಾರಿ ಪರವಾನಿಗೆ ಪಡೆಯಬೇಕಿದೆ. ನಿನ್ನೆ ಸಂಜೆ ಮರಳು ಸಾಗಿಸುತ್ತಿದ್ದ ಪರವಾನಿಗೆ ಅಲ್ಬನ್ ಮೊಂತೇರೋ ಎಂಬವರ ಹೆಸರಲ್ಲಿದ್ದು ಖರೀದಿದಾರ ನೌಷದ್ (ವಿಳಾಸ ನಮೂದಿಸಿಲ್ಲ) ಎಂಬ ಹೆಸರಿದೆ. 10 ಮೆಟ್ರಿಕ್ ಟನ್ ಮರಳು ಸಾಗಿಸಲು ಸಂಜೆ 3.41 ರಿಂದ 5.41 ರ ನಡುವಿನ ಸಮಯ ನೀಡಲಾಗಿದೆ. ಮಂಗಳೂರು ಹೊರವಲಯದ ಜಪ್ಪಿನಮೊಗರು ನೇತ್ರಾವತಿ ನದಿಯಿಂದ ಮರಳು ಲೋಡ್ ಮಾಡಲಾಗಿದ್ದು, ಮಂಜನಾಡಿಗೆ ಸಾಗಿಸುವುದರ ಬಗ್ಗೆ ಪರವಾನಿಗೆಯಲ್ಲಿ ಉಲ್ಲೇಖಿಸಲಾಗಿದೆ.
ನೇತ್ರಾವತಿ ನದಿಯಿಂದ ಮಂಜನಾಡಿಗೆ ಮರಳು ಸಾಗಿಸುವುದಾದರೆ ತೊಕ್ಕೊಟ್ಟು - ದೇರಳಕಟ್ಟೆ - ನಾಟೆಕಲ್ ಮುಖ್ಯರಸ್ತೆಯಿಂದ ಟಿಪ್ಪರ್ ಸಾಗಬೇಕಿತ್ತು. ಆದರೆ ಟಿಪ್ಪರ್ ಕೆ.ಸಿ ರೋಡ್, ಕೊಂಡಾಣ ರಸ್ತೆಯಾಗಿ ಸಾಗಿದ್ದು ಸಂಶಯ ಮೂಡಿಸಿದೆ. ಮರಳು ಮಾಫಿಯಾದವರು ಸುಳ್ಳು ದಾಖಲೆಗಳನ್ನು ಪಡೆದು ತಲಪಾಡಿ ನದಿ ತೀರ ಮತ್ತು ಸೋಮೇಶ್ವರ ಕಡಲ ಕಿನಾರೆಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ, ಸಾಗಾಟ ನಡೆಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ಟಿಪ್ಪರ್ ಲಾರಿ ಬೆಳಗ್ಗಿನ ಅವಧಿಯಲ್ಲಿ ಮರಳು ಸಾಗಿಸಿದ ಬಗ್ಗೆಯೂ ಪರವಾನಿಗೆ ಲಭಿಸಿದೆ. ಆ ಪರವಾನಿಗೆ ನಂದರಾಜ್ ಎಂಬವರ ಹೆಸರಲ್ಲಿದೆ. ವಿಶೇಷ ಅಂದ್ರೆ, ಅದರ ರೂಟ್ ನಮೂದಿಸಿದ್ದೇ ಅಕ್ರಮ ಮೇಲ್ನೋಟಕ್ಕೆ ಕಾಣುವಂತೆ ಮಾಡಿದೆ. ದೇರಳಕಟ್ಟೆ, ಮುಡಿಪು ಮಾರ್ಗವಾಗಿ ಸುಳ್ಯ ತಾಲೂಕಿನ ಏನೆಕಲ್ಲು ಮೂಲಕ ಎಂದು ನಮೂದಾಗಿದೆ.
ಖರೀದಿದಾರರ ಹೆಸರನ್ನು ಪರವಾನಗಿಯಲ್ಲಿ ಕೊಟ್ಟಿಲ್ಲ. 10 ಮೆಟ್ರಿಕ್ ಟನ್ ಮರಳನ್ನು ಜಪ್ಪಿನಮೊಗರು ನೇತ್ರಾವತಿ ನದಿಯಿಂದ ಸುಳ್ಯ , ಏನೆಕಲ್ಲು ಮಾರ್ಗವಾಗಿ ಬೆಳಿಗ್ಗೆ 9.28 ರಿಂದ ಮಧ್ಯಾಹ್ನ 1.28 ರ ಒಳಗಿನ 4 ಗಂಟೆಯ ಅವಧಿಯಲ್ಲಿ ಸಾಗಿಸಬೇಕೆಂದು ಉಲ್ಲೇಖವಿದೆ. ಇಲ್ಲಿ ಸಂಶಯ ಮೂಡುವುದು ಮಂಗಳೂರಿನ ಜಪ್ಪಿನಮೊಗರಿನಿಂದ ದೂರದ ಸುಳ್ಯಕ್ಕೆ ಮರಳು ಸಾಗಾಟ ಮಾಡುವ ಅನುಮತಿ ಕೊಡುತ್ತಿದ್ದಾರೆಯೇ..? ವಾಸ್ತವದಲ್ಲಿ ಹೀಗೆ ಮರಳು ಸಾಗಾಟ ಆಗುತ್ತಿದೆಯೇ..? ಸಾಗಾಟ ಮಾಡಿದ್ದರೆ, ಅಲ್ಲಿನ ಚೆಕ್ ಪೋಸ್ಟ್ ಮೂಲಕ ಸಾಗಿಸಿರುವ ಬಗ್ಗೆ ಮೊಹರನ್ನೇ ಹಾಕಿಲ್ಲ. ದ.ಕ. ಜಿಲ್ಲೆಯ ಒಳಗೆ ಮರಳು ಸಾಗಿಸಲು ಪರವಾನಗಿ ಎಂದಿದ್ದರೂ, ಈ ತೀರದಿಂದ ಆ ತೀರಕ್ಕೆ ಮರಳು ಸಾಗಿಸುವುದಿಲ್ಲ. ಸುಳ್ಯದ ಮಂದಿಗೆ ಅಲ್ಲಿಯೇ ಮರಳು ಲಭ್ಯತೆಯೂ ಇದೆ. ಇಲ್ಲಿಂದ ಪೂರೈಸುವ ಅಗತ್ಯ ಇರುವುದಿಲ್ಲ.
ಇದಕ್ಕಿಂತಲೂ ವಿಶೇಷ ಮತ್ತು ಅಚ್ಚರಿ ಮೂಡಿಸುವ ವಿಷ್ಯ ಏನಪ್ಪ ಅಂದ್ರೆ ಈ ಮರಳು ಸಾಗಾಟಕ್ಕೆ ಗಣಿ ಭೂವಿಜ್ಞಾನ ಇಲಾಖೆಯವರು ಕೇರಳ ನೋಂದಣಿಯ (KL13L 1550) ಲಾರಿಗೆ ಪರವಾನಗಿ ನೀಡಿದ್ದಾರೆ. ಕೇರಳದ ಲಾರಿ ಕರ್ನಾಟಕದಲ್ಲಿ ಸಾಗುವಂತಿಲ್ಲ ಎಂಬ ನಿಯಮ ಇಲ್ಲದಿದ್ದರೂ, ಮರಳು ಸಾಗಾಟಕ್ಕೆ ಕೇರಳದ ಲಾರಿಗೆ ಪರವಾನಗಿ ಕೊಟ್ಟಿದ್ದಾರೆ ಎನ್ನುವುದೇ ಅನುಮಾನ ಮೂಡಿಸುತ್ತದೆ.
ಕೇರಳ ನೋಂದಣಿಯ ಟಿಪ್ಪರ್ ಲಾರಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿಗೆ ಪರವಾನಿಗೆ ನೀಡಿದ್ದೇ ಆದರೆ, ಆ ಲಾರಿ ಗಡಿಭಾಗದಲ್ಲಿ ಸಂಚರಿಸುತ್ತಿರಬೇಕಾದರೆ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿಲ್ಲ ಎನ್ನಲು ಸಾಧ್ಯವೇ ? ಉಳ್ಳಾಲ ಪೊಲೀಸರು ಸದ್ಯಕ್ಕೆ ಲಾರಿ ಮತ್ತು ಚಾಲಕನನ್ನು ಬಂಧಿಸಿದ್ದಾರೆ. ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಗೆ ಕೇಸು ಜಡಿದಿದ್ದಾರೆ. ಆದರೆ, ಇಲ್ಲಿ ಸುಳ್ಳು ದಾಖಲೆ ಸೃಷ್ಟಿ ಮತ್ತು ಈ ದಂಧೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.
Sand Smugglers Formulate Fake documents to transport Sand illegally in Ullal and to city areas of Mangalore. The incident came to light after team Headline Karnataka went behind it.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm