ಬ್ರೇಕಿಂಗ್ ನ್ಯೂಸ್
20-01-21 09:57 pm Mangaluru Correspondent ಕರಾವಳಿ
ಮಂಗಳೂರು, ಜ.20: ನಗರದಲ್ಲಿ ಯುವ ಉದ್ಯಮಿಯಾಗಿದ್ದ ಗುರುಪುರ ಮೂಲದ ಚಂದ್ರಶೇಖರ್ ಶೆಟ್ಟಿ (38) ಎಂಬವರು ತನ್ನ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಎಸ್.ರಾವ್ ರಸ್ತೆಯಲ್ಲಿರುವ ಪೂಂಜಾ ಆರ್ಕೇಡ್ ನಲ್ಲಿ ಎರಡನೇ ಅಂತಸ್ತಿನಲ್ಲಿ ಇವರು ಕಚೇರಿ ಹೊಂದಿದ್ದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ವಿಚಾರ ಅರಿತ ಅವರ ತಮ್ಮ ಕೂಡಲೇ ಅಲ್ಲಿಗೆ ಆಗಮಿಸಿದ್ದು ನೇಣು ಹಗ್ಗದಿಂದ ಬಿಡಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಷ್ಟರಲ್ಲಿ ಚಂದ್ರಶೇಖರ್ ಸಾವು ಕಂಡಿದ್ದರು.
ಪೂಂಜಾ ಆರ್ಕೇಡ್ ಬಳಿಯ ಗೋಕುಲ್ ಮಾರ್ಕೆಟ್ ಸಂಕೀರ್ಣದಲ್ಲಿ ನಿರಂತರ ಪಬ್ಲಿಸಿಟಿ ಎನ್ನುವ ಹೆಸರಲ್ಲಿ ಶಾಪ್ ಹೊಂದಿದ್ದು ಗ್ರೀಟಿಂಗ್ಸ್, ಕಾರ್ಡ್, ಫ್ಲೆಕ್ಸ್ ವರ್ಕ್, ಡಿಸೈನಿಂಗ್ ಇನ್ನಿತರ ಕೆಲಸಗಳನ್ನು ಮಾಡಿಕೊಂಡಿದ್ದರು. ಪಾಲುದಾರಿಕೆಯಲ್ಲಿ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದ್ದು ಕಳೆದ ಒಂದು ವರ್ಷದಲ್ಲಿ ನಷ್ಟ ಹೊಂದಿದ್ದರು.
ಸಂಜೆ ನಾಲ್ಕು ಗಂಟೆ ಸುಮಾರಿಗೆ ವಾಟ್ಸಪ್ ಸ್ಟೇಟಸ್ ನಲ್ಲಿ ಸಜ್ಜನರನ್ನು ನೋಯಿಸಬೇಡಿ, ನೋಯಿಸಿದರೆ ನಿಮ್ಮ ಜೀವನದಿಂದ ದೂರವಾಗುತ್ತಾರೆ ಎನ್ನುವ ಅರ್ಥದಲ್ಲಿ ವಾಕ್ಯಗಳನ್ನು ಹಾಕಿದ್ದರಂತೆ. ಇದರಿಂದಾಗಿ ಚಂದ್ರಶೇಖರ್ ಶೆಟ್ಟಿ ಯಾರಿಂದಲೋ ತೀವ್ರ ನೊಂದಿದ್ದರು ಅನ್ನುವ ಮಾತು ಕೇಳಿಬರುತ್ತಿದೆ. ಅವಿವಾಹಿತರಾಗಿದ್ದ ಚಂದ್ರಶೇಖರ್ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A 38-year-old businessman Chandrashekar Shetty, proprietor of Niranthara Publicity in Mangalore has committed suicide at his own office here on Wednesday, January 20.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm