ಬ್ರೇಕಿಂಗ್ ನ್ಯೂಸ್
21-01-21 04:02 pm Mangaluru Correspondent ಕರಾವಳಿ
ಮಂಗಳೂರು, ಜ.21: ಖಾಸಗಿ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಕಟ್ಟತ್ತಡ್ಕ ನಿವಾಸಿ ಹುಸೈನ್ (41) ಆರೋಪಿಯಾಗಿದ್ದಾನೆ.
ಜ.14ರಂದು ದೇರಳಕಟ್ಟೆಯ ಅಸೈಗೋಳಿಯಿಂದ ಮಂಗಳೂರಿಗೆ ಮಹೇಶ್ ಬಸ್ಸಿನಲ್ಲಿ ಬರುತ್ತಿದ್ದ ವೇಳೆ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಿದ್ದ ಯುವಕನೊಬ್ಬ ತನಗೆ ಕಿರುಕುಳ ನೀಡಿದ್ದಾಗಿ ತಸ್ಲಿಮಾ ನಸ್ರೀನ್ ಎಂಬ ಯುವತಿ ತನ್ನ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಬರೆದು ಆತನ ಫೋಟೋ ಅಪ್ಲೋಡ್ ಮಾಡಿದ್ದಳು. ಬಸ್ಸಿನಲ್ಲಿ ನಿರಂತರ ಕಿರುಕುಳ ನೀಡಿದ್ದು ಆ ಬಗ್ಗೆ ಕಿರುಚಾಡಿದರೂ ಬಸ್ ಸಿಬಂದಿಯಾಗಲೀ, ಇತರೇ ಪ್ರಯಾಣಿಕರಾಗಲೀ ಸ್ಪಂದನೆ ನೀಡಿರಲಿಲ್ಲ ಎಂದು ನೋವು ತೋಡಿಕೊಂಡಿದ್ದಳು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಆಬಳಿಕ ಸ್ವತಃ ಮಂಗಳೂರು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್, ಆಕೆಯನ್ನು ಸಂಪರ್ಕಿಸಿ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಲ್ಲದೆ, ಈ ಬಗ್ಗೆ ಪೊಲೀಸ್ ದೂರು ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ, ಯುವತಿ ತನ್ನ ಆಪ್ತರ ಜೊತೆ ಮಂಗಳೂರಿನ ಮಹಿಳಾ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದರು. ಯುವತಿ ಆರೋಪಿಯ ಫೋಟೋ ಷೇರ್ ಮಾಡಿದ್ದರಿಂದ, ಪೊಲೀಸರು ಸುಲಭದಲ್ಲಿ ಟ್ರೇಸ್ ಮಾಡಿದ್ದಾರೆ.
ಆರೋಪಿ ಹುಸೈನ್ ನನ್ನು ಹಿಡಿದು ಕಮಿಷನರ್ ಕಚೇರಿಗೆ ತಂದಿದ್ದ ಪೊಲೀಸರು, ಬಳಿಕ ಸಂತ್ರಸ್ತ ಯುವತಿಯನ್ನೂ ಕರೆಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಬಳಿಕ ಸುದ್ದಿಗೋಷ್ಠಿ ಕರೆದು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ ಆರೋಪಿಯನ್ನು ಮಾಧ್ಯಮದ ಮುಂದೆ ತೋರಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್ ಶಶಿಕುಮಾರ್, ಇಂಥ ಪ್ರಕರಣದಲ್ಲಿ ಯುವತಿಯೇ ಆರೋಪಿಯ ಫೋಟೋ ತೆಗೆದು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರಿಂದ ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗಿದೆ. ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಯುವತಿಯನ್ನು ಅಭಿನಂದಿಸುವುದಾಗಿ ಹೇಳಿದರು. ಅಲ್ಲದೆ, ಸಮಾಜಕ್ಕೆ ಪ್ರೇರಣೆಯಾಗುವಂತೆ ವರ್ತಿಸಿದ ಯುವತಿಯನ್ನು ಶಾಲು ಹೊದಿಸಿ ಸನ್ಮಾನಿಸಿದರು.
ನಿರ್ಭಯಾ ಪ್ರಕರಣದ ಬಳಿಕ ಸಾರ್ವಜನಿಕ ಸಾರಿಗೆ ಬಸ್ ಗಳಲ್ಲಿ ಸಿಸಿಟಿವಿ ಹಾಕುವಂತೆ ನಿರ್ದೇಶನ ನೀಡಲಾಗಿದೆ. ಆದರೆ, ಅದಿನ್ನೂ ನಮ್ಮಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಬೆಂಗಳೂರಿನ ಕೆಲವು ಬಸ್ ಗಳಲ್ಲಿ ಮತ್ತು ಕಾಲೇಜು, ಶಾಲಾ ಬಸ್ ಗಳಲ್ಲಿ ಮಾತ್ರ ಸಿಸಿಟಿವಿ ಅಳವಡಿಸಲಾಗಿದೆ. ಮಂಗಳೂರಿನಲ್ಲಿಯೂ ಎಲ್ಲ ಬಸ್ ಗಳಿಗೂ ಸಿಸಿಟಿವಿ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಯ ಜೊತೆ ಮಾತನಾಡುತ್ತೇನೆ ಎಂದು ಕಮಿಷನರ್ ತಿಳಿಸಿದರು.
ಅಲ್ಲದೆ, ಯುವತಿಗೆ ಕಿರುಕುಳ ನೀಡಿದ ಸಂದರ್ಭದಲ್ಲಿ ಬಸ್ ಸಿಬಂದಿ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಶಿಕುಮಾರ್, ಈ ಬಗ್ಗೆ ಬಸ್ ಸಿಬಂದಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯ ಬಳಿಕ ಆರೋಪಿ ಹುಸೈನನ್ನು ಮಾಧ್ಯಮದ ಮುಂದೆ ಕರೆಸಿದಾಗ, ಅಲ್ಲಿಯೇ ಕುಳಿತಿದ್ದ ಯುವತಿ ಸಿಟ್ಟಿನಲ್ಲಿ ಪೊಲೀಸರ ಎದುರೇ ಆತನ ಕಪಾಳಕ್ಕೆ ಒಂದೇಟು ಹೊಡೆದಿದ್ದು ವಿಶೇಷವಾಗಿತ್ತು. ಯುವತಿಗೆ ಪೊಲೀಸ್ ದೂರು ನೀಡಲು ನೆರವಾಗಿದ್ದ ಅಲೋಶಿಯಸ್ ಕಾಲೇಜಿನ ಉದ್ಯೋಗಿ, ಸಾಮಾಜಿಕ ಕಾರ್ಯಕರ್ತೆ ಡಾ.ವಿದ್ಯಾ ಡಿಸೋಜ ಉಪಸ್ಥಿತರಿದ್ದರು.
Read: ಖಾಸಗಿ ಬಸ್ಸಿನಲ್ಲಿ ಕಿಡಿಗೇಡಿಯ ಕಿರುಕುಳ ; ಮುಸ್ಲಿಂ ಯುವತಿಯ ಪೋಸ್ಟ್ ವೈರಲ್ !!
Video:
Police have arrested Hussain from Kasargod in connection to sexual harassment of Muslim women on a bus in Mangalore on her way from KS Hegde to Pumpwell. The Woman also slapped the accused before the officers.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm