ಬ್ರೇಕಿಂಗ್ ನ್ಯೂಸ್
21-01-21 07:29 pm Mangaluru Correspondent ಕರಾವಳಿ
ಮಂಗಳೂರು, ಜ.21: ಬಸ್ಸಿನಲ್ಲಿ ಕಿರುಕುಳ ನೀಡಿದ ಯುವಕನ ಬಗ್ಗೆ ಜಾಲತಾಣದಲ್ಲಿ ಹೇಳಿಕೊಂಡು ಆರೋಪಿ ಸಿಕ್ಕಿಬೀಳುವಂತೆ ಮಾಡಿದ ನಸೀಮಾ ಅಝ್ಲೀನಾ ಎನ್ನುವ ಯುವತಿ ಈಗ ಮಂಗಳೂರಿನಲ್ಲಿ ಹೀರೋ ಆಗಿದ್ದಾಳೆ. ಆಕೆಯ ಧೈರ್ಯ ಪೊಲೀಸರಿಗೂ ಸ್ಫೂರ್ತಿ ನೀಡಿದ್ದು, ಯುವತಿಯ ಕಾರ್ಯವನ್ನು ಮೆಚ್ಚಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.
ಕಮಿಷನರ್ ಸುದ್ದಿಗೋಷ್ಠಿ ಕರೆದು ಪ್ರಕರಣದ ವಿವರ ನೀಡಿದ್ದಲ್ಲದೆ, ಪೊಲೀಸ್ ಕಮಿಷನರ್ ಹಾಲ್ ನಲ್ಲೇ ಆಕೆಯನ್ನೂ ಮಾಧ್ಯಮದವರ ಜೊತೆ ಮಾತನಾಡಲು ವೇದಿಕೆ ಕಲ್ಪಿಸಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗೆಸ್ಟ್ ಫ್ಯಾಕಲ್ಟಿ ಆಗಿರುವ ತಸ್ಲಿಮಾ ನಸ್ರಿನ್, ಘಟನೆಯ ಬಗ್ಗೆ ವಿವರ ನೀಡಿದರು. ಅಲ್ಲದೆ, ಕಿರುಕುಳದ ಬಗ್ಗೆ ಹೇಳಿಕೊಂಡರೂ, ಬಸ್ ಸಿಬಂದಿ ಸಹಾಯಕ್ಕೆ ಬರದ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬಸ್ಸಿನಲ್ಲಿ ಸಾರ್ವಜನಿಕರೆಲ್ಲ ಪ್ರಯಾಣಿಸುತ್ತಾರೆ. ಅದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಯಾವುದೇ ಭಯ ಪಡಬೇಕಿಲ್ಲ ಎಂದು ನಂಬಿ ಮನೆಯವರು ಬಸ್ಸಿನಲ್ಲಿ ಕಳುಹಿಸುತ್ತಾರೆ. ಆದರೆ, ಮಂಗಳೂರಿನ ಬಸ್ ಗಳಲ್ಲಿ 99 ಶೇ. ಮಂದಿಗೆ ಕಿರುಕುಳದ ಅನುಭವ ಆಗುತ್ತಿದೆ. ಯುವತಿಯರು, ಮಹಿಳೆಯರು, ಶಾಲಾ ಮಕ್ಕಳು, ಬಾಲಕರು ಹೀಗೆ ಬಹುತೇಕ ಮಂದಿ ಇಂಥವರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದು ಹೇಳಿದರು.
ಮಂಗಳೂರಿನ ಬಸ್ ಕಂಡಕ್ಟರ್ ಗಳಿಗೆ, ಉಲಾಯಿ ಪೋಯಿ, ಕಂಬಡ್ ದಾದೊಂಡು.. (ಒಳಗೆ ಹೋಗ್ರಿ, ಕಂಬದಲ್ಲೇನಿದೆ) ಅನ್ನುವುದಷ್ಟೇ ಗೊತ್ತು. ಬಸ್ಸಿನಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿಲ್ಲ. ನಾವು ಬಸ್ಸಿಗೆ ಹಣ ಕೊಟ್ಟು ಹೋಗುತ್ತೇವೆ. ಬಸ್ಸಿನಲ್ಲಿ ನಾವು ಇರುವಷ್ಟು ಹೊತ್ತು ಪೂರ್ತಿ ಹೊಣೆ ಬಸ್ ಸಿಬಂದಿಗಳದ್ದಾಗಿರುತ್ತದೆ. ಆದರೆ ಮಂಗಳೂರಿನ ಸಿಟಿ ಬಸ್ ಗಳಲ್ಲಿ ಯಾವುದೇ ಕೇರ್ ವಹಿಸುವುದಿಲ್ಲ. ಅವರಿಗೆ ಬಸ್ಸಿಗೆ ತುಂಬಿಸುವುದಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಬಸ್ ಗಳಲ್ಲಿ ಪ್ರಯಾಣಿಸುವ ಮಂದಿಗೆ ಜಾಗೃತಿ ಮೂಡಬೇಕು ಎಂಬ ದೃಷ್ಟಿಯಿಂದ ನಾನು ಈ ಪೋಸ್ಟ್ ಹಾಕಿದ್ದೆ. ಪೊಲೀಸ್ ದೂರು ನೀಡಬೇಕೆಂಬ ಉದ್ದೇಶ ಇರಲಿಲ್ಲ. ಆದರೆ, ನಾನು ಪೊಸ್ಟ್ ಮಾಡಿದ ಬಳಿಕ ಪೊಲೀಸರು ಸಹಾಯಕ್ಕೆ ಬಂದರು. ಬಹಳಷ್ಟು ಜನ ಜಾಲತಾಣದಲ್ಲಿ ಬೆಂಬಲ ನೀಡಿದರು. ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ತಸ್ಲಿಮಾ ಹೇಳಿದರು.
ಇದೇ ವೇಳೆ, ತಸ್ಲಿಮಾಗೆ ಪೊಲೀಸ್ ದೂರು ನೀಡಲು ಸಹಕಾರ ನೀಡಿದ್ದ ಸಾಮಾಜಿಕ ಕಾರ್ಯಕರ್ತೆ ಡಾ.ವಿದ್ಯಾ ಡಿಸೋಜ ಮಾತನಾಡಿ, ತಸ್ಲಿಮಾ ಪೋಸ್ಟ್ ಮಾಡಿದ್ದನ್ನು ನಾನು ಗಮನಿಸುವಾಗ ಅದಾಗಲೇ 70 ಸಾವಿರ ಮಂದಿ ಆಕೆಯ ಪೋಸ್ಟ್ ಷೇರ್ ಮಾಡಿದ್ದರು. ಆಬಳಿಕ ನಾನು ಈಕೆಯನ್ನು ಸಂಪರ್ಕಿಸಿ, ಪೊಲೀಸ್ ದೂರು ನೀಡುವಂತೆ ಮನವೊಲಿಸಿದೆ. ಅಲ್ಲದೆ, ನಮ್ಮ ಮ್ಯಾಮ್ಸ್ ಗ್ರೂಪಿನಲ್ಲಿ ಷೇರ್ ಮಾಡಿ ಪೊಲೀಸರಿಗೆ ಒತ್ತಡ ಹಾಕಿದ್ದೆವು ಎಂದು ಹೇಳಿದರು. ಅಸಹಾಯಕ ಯುವತಿ, ಮಹಿಳೆಯರಿಗೆ ನೆರವು ನೀಡುವುದಕ್ಕಾಗಿ ಮ್ಯಾಮ್ಸ್ ಎನ್ನುವ ಫೇಸ್ಬುಕ್ ಪೇಜ್ ಮಾಡಿದ್ದೇವೆ. ಅದರಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿಯಿದ್ದು, ಎಲ್ಲ ರೀತಿಯ ಸಲಹೆ, ನೆರವುಗಳನ್ನು ನೀಡುತ್ತೇವೆ ಎಂದು ಹೇಳಿದರು.
ಇಬ್ರು ಹೆಣ್ಮಕ್ಕಳಿದ್ದಾರೆ, ಇಂಥದ್ದು ಆಗಿಲ್ಲ !
ಮಾಧ್ಯಮ ಗೋಷ್ಠಿಯ ವೇಳೆ ಆರೋಪಿ ಹುಸೇನ್ ಹೊರಭಾಗದಲ್ಲಿ ಪೊಲೀಸರ ಜೊತೆಗೆ ನಿಂತಿದ್ದ. ಆತನಲ್ಲಿ ಮಾಹಿತಿ ಬಯಸಿದಾಗ, ತನಗೆ ಮದುವೆಯಾಗಿದ್ದು 14 ಮತ್ತು 9 ವರ್ಷದ ಇಬ್ಬರು ಹೆಣ್ಮಕ್ಕಳಿದ್ದಾರೆ. ಊರಿನಲ್ಲಿ ತೋಟದ ಕೆಲಸಕ್ಕೆ ಹೋಗುತ್ತೇನೆ. ಬೇರೆ ಕೂಲಿ ಕೆಲಸ ಮಾಡುತ್ತೇನೆ. 41 ವರ್ಷದಲ್ಲಿ ಈವರೆಗೂ ಪೊಲೀಸ್ ಕೇಸು ದಾಖಲಿಸಿಕೊಂಡಿಲ್ಲ. ಇದೇ ಮೊದಲು ಇಂಥ ಪ್ರಕರಣ ಎದುರಿಸುತ್ತಿದ್ದೇನೆ, ಏನಾಯ್ತೋ ಏನೋ ಅಂತ ಹೇಳಿ ಅತ್ತುಬಿಟ್ಟ. ನೀನು ದೇರಳಕಟ್ಟೆಗೆ ಯಾಕೆ ಬಂದಿದ್ದೆ ಎಂದು ಕೇಳಿದ್ದಕ್ಕೆ, ದೋಸ್ತಿಯನ್ನು ನೋಡಲು ಬಂದಿದ್ದೆ ಎಂದು ಹೇಳಿದ.
ಮಂಗಳೂರಿನ ಬಸ್ಸಿನಲ್ಲಿ ಕಿರುಕುಳ ಕಾಮನ್ !
ಇದೇನೇ ಇದ್ದರೂ, ಮಂಗಳೂರಿನ ಬಸ್ ಗಳಲ್ಲಿ ಕಾಮುಕರು ಕಿರುಕುಳ ನೀಡುತ್ತಿರುವುದು ಇದು ಮೊದಲೇನಲ್ಲ. ಬೆಳಗ್ಗೆ ಮತ್ತು ಸಂಜೆ ರಶ್ ಇರುವ ಬಸ್ ಗಳಲ್ಲಿ ದುರುಳರ ಕಿತಾಪತಿ ಕಾಮನ್ ಎಂಬಂತಿರುತ್ತದೆ. ಕಾಲೇಜು ಯುವತಿಯರ ಮೈಮುಟ್ಟುವುದು, ಬೇಕಂತಲೇ ಮುಂದಿನ ಭಾಗದಲ್ಲಿ ನಿಂತು ಮಹಿಳೆಯರ ಮೈಗೆ ಬೀಳುವುದನ್ನು ಮಾಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಮುಂದಿನ ಬಾಗಿಲಲ್ಲಿ ಗಂಡಸರು ಬಸ್ ಹತ್ತಬಾರದು ಎಂಬ ನಿಯಮ ತರಲಾಗಿತ್ತು. ಆದರೆ, ಅದರಿಂದ ಹೆಚ್ಚು ಪ್ರಯೋಜನ ಆಗಿರಲಿಲ್ಲ. ಸಿಸಿಟಿವಿಯ ಜೊತೆಗೆ ಬಸ್ ಸಿಬಂದಿಯಲ್ಲಿ ಆ ರೀತಿಯ ಜಾಗೃತಿ ಇದ್ದರಷ್ಟೇ ಕಾಮುಕರನ್ನು ನಿಯಂತ್ರಣಕ್ಕೆ ತರಬಹುದು.
112 ನಂಬರಿಗೆ ಕರೆ ಮಾಡಿ, ದೂರು ಕೊಡಿ
ಇದೇ ವೇಳೆ, ಸಾರ್ವಜನಿಕರಲ್ಲಿ ಯಾವುದೇ ಘಟನೆಗಳಾದರೂ 112 ನಂಬರಿಗೆ ಫೋನ್ ಮಾಡಿ ದೂರು ಕೊಡುವಂತೆ ಕಮಿಷನರ್ ಸಲಹೆ ನೀಡಿದರು. ಬಸ್ ಇನ್ನಿತರ ಪ್ರದೇಶಗಳಲ್ಲಿ ಕಿರುಕುಳ ನಡೆದಲ್ಲಿ ಜನರು ದೂರು ನೀಡುವುದಕ್ಕೆ ಹಿಂದೆ ಮುಂದೆ ನೋಡಬಾರದು ಎಂದು ಹೇಳಿದರು.
Victim women who was Sexually Harassed in a private bus in Mangalore has also yelled at Bus conductors for their negligence during her briefing at the Police commissioner's office in Mangalore.
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm