ಬ್ರೇಕಿಂಗ್ ನ್ಯೂಸ್
22-01-21 02:03 pm Mangalore Correspondent ಕರಾವಳಿ
ಮಂಗಳೂರು, ಜ.22 : ಉಳ್ಳಾಲ ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಮಂಗಳೂರು ವಿಧಾನಸಭಾ ಇಂಟಕ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿ ನೀಡಲಾಯಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷ ಹರೀಶ್ ರಾವ್ ಮಾತನಾಡಿ ಮಂಗಳೂರು ಕ್ಷೇತ್ರ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿಯ ಶಾಂತಿಗೆ ಧಕ್ಕೆ ತರುವಂತಹ ಷಡ್ಯಂತ್ರವನ್ನು ಹೂಡಿ ಕೊರಗಜ್ಜನ ಕಟ್ಟೆಯ ಹುಂಡಿಯಲ್ಲಿ ವಿಕೃತ ಮನಸ್ಸಿನವರು ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವ ಯತ್ನ ಮಾಡಿದ್ದಾರೆ. ಇದು ಈ ಭಾಗದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ ಕಿಡಿಗೇಡಿ ಪ್ರಯತ್ನವಾಗಿದೆ. ಇದರಿಂದ ಸಹಸ್ರಾರು ಕೊರಗಜ್ಜ ಭಕ್ತರ ಮನಸ್ಸಿಗೆ ನೋವು ಉಂಟು ಮಾಡಿದೆ. ಅಲ್ಲದೆ, ಹಿಂದು ಧರ್ಮೀಯರಿಗೆ ಮಾಡಿದ ಅವಮಾನ ಎಂದು ಹೇಳಿದರು.
ಕೊಣಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಬಳಿ ಇದ್ದ ಧ್ವಜ ತೆಗೆದು ಅದಕ್ಕೆ ಮೂತ್ರ ಮಾಡಿ ವಿಕೃತ ಮನಸ್ಸನ್ನು ತೋರಿಸಿರುತ್ತಾರೆ. ಇದರ ಹಿಂದೆ ವಿಕೃತ ಮನಸ್ಸಿನ ಹುಡುಗರ ಷಡ್ಯಂತ್ರ ಇರುವುದು ಖಾತರಿಯಾಗುತ್ತದೆ. ಜಿಲ್ಲೆಯಲ್ಲಿ ಗಲಭೆ ಎಬ್ಬಿಸಲು ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ. ದುಷ್ಕರ್ಮಿಗಳನ್ನ ಕೂಡಲೇ ಬಂಧಿಸಬೇಕು, ಇಲ್ಲವಾದಲ್ಲಿ ಉಳ್ಳಾಲ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೊರಗಜ್ಜ ಭಕ್ತ ರೋಹಿತ್ ಉಳ್ಳಾಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯೂತ್ ಇಂಟಕ್ ಅಧ್ಯಕ್ಷ ಸಿದ್ದೀಕ್ ಹಸನ್, ಉಳ್ಳಾಲ ಕೊರಗಜ್ಜ ಗುಳಿಗಜ್ಜ ಸಮಿತಿಯ ಅಧ್ಯಕ್ಷ ಸುನೀಲ್, ಯುವ ಇಂಟಕ್ ನಾಯಕರಾದ ದೀಕ್ಷಿತ್ ವಿ.ಶೆಟ್ಟಿ, ಸಿರಾಜುದ್ದೀನ್, ಮುನೀರ್ ಬಾವ, ಬಾಸ್ಕರ್ ಮಡ್ಯಾರ್, ಅಬ್ದುಲ್ ಅಝೀಝ್ ಹಕ್, ಅಮಿತ್ ರಾಜ್ ಬೇಕಲ್, ವಿಶಾಲ್ ಕೊಲ್ಯ, ಮನೋಜ್ ಶೆಟ್ಟಿ, ಸೃಜನ್ ಶೆಟ್ಟಿ, ನಝೀರ್ ಬೆಳ್ಳಾರೆ, ರಾಜೇಂದ್ರ ಭಂಡಸಾಲೆ, ಪ್ರಶಾಂತ್ ಬಜಾಲ್, ವಿಶ್ವತ್ ಕೊಲ್ಯ, ವಿಶ್ವನಾಥ್ ಪೂಜಾರಿ, ನಿಯಾಝ್, ಕಿಶೋರ್ ತೊಕ್ಕೊಟ್ಟು, ಕೆ.ಎಂ.ಅಬ್ದುರ್ರಹ್ಮಾನ್ ಕೋಡಿಜಾಲ್, ಮುನ್ನೂರು ಗ್ರಾಮ ಇಂಟಕ್ ಅಧ್ಯಕ್ಷ ನಿಸಾರ್ ಮೊದಲಾದವರಿದ್ದರು.
ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್, ಸಿಎಂ ಬಿಎಸ್ವೈ ಭಾವಚಿತ್ರಕ್ಕೆ ಶಿಲುಬೆ ಹಾರ !! ಉಳ್ಳಾಲದಲ್ಲಿ ಕಿಡಿಗೇಡಿ ಕೃತ್ಯ
ಉಳ್ಳಾಲಕ್ಕೆ ಕಮಿಷನರ್ ತಂಡ ಭೇಟಿ ; ಧಾರ್ಮಿಕ ಭಾವನೆಗೆ ಧಕ್ಕೆ ತರೋರನ್ನ ಸುಮ್ನೆ ಬಿಡಲ್ಲ ; ಸ್ಥಳದಲ್ಲೇ ವಾರ್ನ್ !
Miscreants Dirty act in temples of Ullal and Konaje Intec demands from quick arrest by submitting memorandum to Police Station
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm