ಬ್ರೇಕಿಂಗ್ ನ್ಯೂಸ್
22-01-21 02:23 pm Mangalore Correspondent ಕರಾವಳಿ
ಮಂಗಳೂರು, ಜ.22: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಕಾನೂನನ್ನು ದೇಶದ ಪ್ರತಿ ಮನೆಯವರು ವಿರೋಧಿಸಬೇಕು. ಇದರಿಂದ ಬಡವರ ಹೊಟ್ಟೆಗೆ ಹೊಡೆಯುವ ಹುನ್ನಾರ ಇದೆ. ಈ ಕಾನೂನು ಜಾರಿಗೆ ಬಂದರೆ ಕೇಂದ್ರ ಸರಕಾರದ ಫುಡ್ ಕಾರ್ಪೊರೇಷನ್ನಿಗೆ ಭತ್ತ ಸಿಗುವುದಿಲ್ಲ. ರೈತರಿಂದ ಭತ್ತ ಸಿಗದಿದ್ದರೆ ದೇಶಾದ್ಯಂತ ರಾಜ್ಯಗಳಿಗೆ, ಅಮೂಲಕ ರೇಷನ್ ಅಂಗಡಿಗಳಿಗೆ ಅಕ್ಕಿ ನೀಡುವ ವಿಧಾನವೇ ಬುಡಮೇಲಾಗಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಯು.ಟಿ.ಖಾದರ್, ಯುಪಿಎ ಸರಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯಡಿ ಎಲ್ಲ ರಾಜ್ಯಗಳಿಗೆ ಫುಡ್ ಕಾರ್ಪೊರೇಶನ್ನಿಂದ 3 ರೂ.ಗೆ ಅಕ್ಕಿ ನೀಡಲಾಗುತ್ತದೆ. ಅದನ್ನು ಆಯಾ ರಾಜ್ಯಗಳು 3 ರೂ. ಅಥವಾ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತವೆ. ಪ್ರಸ್ತಾವಿತ ಕಾನೂನು ಜಾರಿಯಾದಲ್ಲಿ ರೈತರು ಸರಕಾರದ ಎಪಿಎಂಸಿಗೆ ಅಥವಾ ಫುಡ್ ಕಾರ್ಪೊರೇಶನ್ನಿಗೆ ಭತ್ತ ನೀಡಬೇಕೆಂಬ ನಿಯಮ ಇರುವುದಿಲ್ಲ. ಕಂಪನಿಗಳಿಗೆ ಹೆಚ್ಚು ಕ್ರಯಕ್ಕೆ ಮಾರಾಟ ಮಾಡಬಹುದು. ಮುಂದೆ ದೇಶದ ಬಡವರಿಗೆ ಅಕ್ಕಿ ಸಿಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಕಳೆದ ಮೂರು ತಿಂಗಳಿಂದ ಚಳಿ, ಗಾಳಿಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯ ಸರಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಜನಸಾಮಾನ್ಯರನ್ನು ಯಾವಾಗ ಆಡಳಿತ ಕಡೆಗಣಿಸುತ್ತದೋ ಆವತ್ತೇ ಅಲ್ಲಿನ ಆಡಳಿತದ ಅವನತಿ ಶುರುವಾಗುತ್ತದೆ ಎಂದು ವಿವೇಕಾನಂದರು ಹೇಳಿದ್ದರು. ಬಿಜೆಪಿ ಸರಕಾರದ ಪಾಲಿಗೆ ವಿವೇಕಾನಂದರ ಮಾತು ನಿಜವಾಗುತ್ತಿದೆ. ಬಿಜೆಪಿ ಸರಕಾರದ ಪತನ, ವನತಿ ಶುರುವಾಗಿದೆ. ಕೇಂದ್ರದ ಕೃಷಿ ಕಾನೂನು ವಿರುದ್ಧ ದೇಶಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಶಾಲೆ, ಕಾಲೇಜಿನ ಬಗ್ಗೆ ರಾಜ್ಯ ಸರಕಾರ ಸ್ಪಷ್ಟ ನೀತಿ ರೂಪಿಸಲು ವಿಫಲವಾಗಿದೆ. ಗೊಂದಲ ನಿರ್ಮಿಸುತ್ತಿದ್ದಾರೆ. ಇನ್ನು ನಾಲ್ಕು ತಿಂಗಳು ಇರುವಾಗ ಪೋರ್ಷನ್ ಕಟ್ ಮಾಡಿ ಶಿಕ್ಷಣ ವರ್ಷ ಪೂರ್ತಿಗೊಳಿಸಲು ಹೊರಟಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದಿಲ್ಲವೇ.. ಹತ್ತನೇ ಕ್ಲಾಸಿನ ವಿದ್ಯಾರ್ಥಿಗಳು ಏನು ಮಾಡಬೇಕು. ಅವರಿಗೆ ಪೂರ್ತಿ ಸಿಲೆಬಸ್ ಸಿಗದಿದ್ದರೆ, ಪರೀಕ್ಷೆ ಹೇಗೆ ಬರೆಯುತ್ತಾರೆ. ಇದೇ ವೇಳೆ, ಇನ್ನೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲ. 80 ಶೇ. ಸರಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯಬೇಕಿದ್ದರೆ, ಅವರಿಲ್ಲದೆ ಕಾಲೇಜು ಹೇಗೆ ನಡೆಯಬೇಕು ಎಂದು ಪ್ರಶ್ನೆ ಮಾಡಿದರು.
ಉಳ್ಳಾಲದಲ್ಲಿ ದೈವಸ್ಥಾನ, ಭಜನಾ ಮಂದಿರದ ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು. ಮಂಗಳೂರಿನಲ್ಲಿ ಕೊಟ್ಟಾರ ಮತ್ತು ಅತ್ತಾವರದಲ್ಲಿ ಇಂಥ ಕೃತ್ಯಗಳಾದಾಗ ಯಾಕೆ ಆರೋಪಿಗಳನ್ನು ಪತ್ತೆ ಮಾಡುವ ಕೆಲಸ ಆಗಿಲ್ಲ. ಪೊಲೀಸರು ವಿಫಲರಾದರೆ, ಸಮಾಜದಲ್ಲಿ ಪೊಲೀಸರ ಬಗ್ಗೆ ಭಯ ಇಲ್ಲದಿದ್ದರೆ ಇಂಥ ಕೃತ್ಯ ಮರುಕಳಿಸುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶುಭೋದಯ ಆಳ್ವ ಮತ್ತಿತರರು ಇದ್ದರು.
Congress UT Khader slams at Central Government over Ration to people at the press meet held at congress office in Mangalore.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm