ಬ್ರೇಕಿಂಗ್ ನ್ಯೂಸ್
22-01-21 10:51 pm Mangaluru Correspondent ಕರಾವಳಿ
ಮಂಗಳೂರು, ಜ.22: ಬಸ್ಸಿನಲ್ಲಿ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಸ್ ಸಿಬಂದಿಯನ್ನು ಕರೆದು ವಿಚಾರಣೆಯನ್ನೂ ನಡೆಸಿದ್ದಾರೆ. ಯುವತಿ ತನಗಾದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರಿಂದ ಭಾರೀ ಸುದ್ದಿಯಾಗಿದ್ದಲ್ಲದೆ, ಆಕೆಯ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಆದರೆ, ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದ ಪ್ರಶ್ನೆಗಳಿಗೆ ಉತ್ತರವಿಲ್ಲದಾಗಿದೆ. ಮಂಗಳೂರಿನ ಖಾಸಗಿ ಬಸ್ ಗಳ ಬಗ್ಗೆ ಅಪನಂಬಿಕೆಯೂ ಹುಟ್ಟುವಂತಾಗಿದೆ. ಈ ಬಗ್ಗೆ ಬಸ್ ಸಿಬಂದಿಯಲ್ಲಿ ಪ್ರಶ್ನೆ ಮಾಡಿದರೆ ಬೇರೆಯದ್ದೇ ಉತ್ತರಗಳು ಸಿಗುತ್ತಿವೆ.
ಘಟನೆ ನಡೆದಿತ್ತು ಎನ್ನಲಾದ ಜ.14ರಂದು ಮಕರ ಸಂಕ್ರಮಣ ಆಗಿರುವುದರಿಂದ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. 3.45ರ ಸುಮಾರಿಗೆ ಕೋಣಾಜೆಯಿಂದ ಬರುತ್ತಿದ್ದ ಮಹೇಶ್ ಬಸ್ಸಿನಲ್ಲಿ ಅಂದು 15ರಿಂದ 20 ಮಂದಿಯಷ್ಟೇ ಪ್ರಯಾಣಿಕರಿದ್ದರಂತೆ. ಸೀಟು ಕೂಡ ಭರ್ತಿ ಆಗಿರಲಿಲ್ಲ. ಅಂಥ ಸಂದರ್ಭದಲ್ಲಿ ಕಿರುಕುಳ ಘಟನೆ ನಡೆದು, ಯುವತಿ ಚೀರಾಡಿದ್ದೇ ಆಗಿದ್ದಲ್ಲಿ ಮಂಗಳೂರಿನ ಪ್ರಯಾಣಿಕರು ಆಕೆಯ ಸಹಾಯಕ್ಕೆ ಬಂದಿಲ್ಲ ಅಂದರೆ ನಂಬಲು ಸಾಧ್ಯವೇ ಎಂದು ಬಸ್ ಸಿಬಂದಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಬಸ್ ಕಂಡಕ್ಟರ್ ಅವರಲ್ಲಿ ಕೇಳಿದರೆ, ಅಂದು ಬಸ್ಸಿನಲ್ಲಿ ಅಂಥ ಘಟನೆ ಆಗಿದ್ದೇ ಗೊತ್ತಿಲ್ಲ. ಪ್ರಯಾಣಿಕರೇ ಇರಲಿಲ್ಲ. ಇಂಥ ಸಂದರ್ಭದಲ್ಲಿ ಯುವತಿ ಚೀರಾಡುತ್ತಿದ್ದರೆ, ನಮಗೆ ಗೊತ್ತಾಗಬೇಕಿತ್ತು. ಆದರೆ, ನಮಗೆ ಅಂಥ ವಿಚಾರವೇ ತಿಳಿದಿಲ್ಲ ಎಂದಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದಿದ್ದರು, ಇದನ್ನೇ ಹೇಳಿದ್ದೇವೆ. ಬೆಳಗ್ಗೆ ಮತ್ತು ಸಂಜೆಯಾದರೆ ಒಂದಷ್ಟು ಜನರು ಇರುತ್ತಾರೆ. ಆ ಸಂದರ್ಭದಲ್ಲಿಯೂ ಏನೇ ಘಟನೆಗಳಾದರೂ, ನಮ್ಮ ಗಮನಕ್ಕೆ ತಂದರೆ ಸ್ಪಂದಿಸುತ್ತೇವೆ. ಯುವತಿಗೆ ಪ್ರಯಾಣಿಕರು ಮತ್ತು ಬಸ್ ಸಿಬಂದಿ ಸ್ಪಂದಿಸಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ. ಇನ್ನು ಆರೋಪಿ ನಮ್ಮ ಬಸ್ ಬಿಟ್ಟು ಬಳಿಕ ಮೂರು ಸ್ಟಾಪ್ ಕಳೆದು ಮತ್ತೆ ಬಂದಿದ್ದಾನಂತೆ. ಮಧ್ಯಾಹ್ನ ವೇಳೆಗೆ ನಾವು ನೇರವಾಗಿ ಬರುತ್ತೇವೆ. ಯಾವುದೇ ಬೇರೆ ಬಸ್ ಓವರ್ ಟೇಕ್ ಮಾಡುವ ಸಾಧ್ಯತೆ ಇಲ್ಲ. ಹಾಗಿರುವಾಗ ಆತ ಬಸ್ ಇಳಿದು ಹೋಗಿ ಮತ್ತೆ ಬಂದಿದ್ದಾನೆ ಅನ್ನುವುದು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ಈ ಬಗ್ಗೆ ಮಹೇಶ್ ಬಸ್ಸಿನ ಮಾಲಕರಲ್ಲಿ ಕೇಳಿದರೆ, ನಮ್ಮ ಬಸ್ ಕಂಡಕ್ಟರ್ ಅದೇ ರೂಟಿನಲ್ಲಿ ಏಳೆಂಟು ವರ್ಷಗಳಿಂದ ಸರ್ವಿಸ್ ನಡೆಸುತ್ತಿದ್ದಾರೆ. ಮೇಲಾಗಿ 25 ವರ್ಷಗಳಿಂದ ಕಂಡಕ್ಟರ್ ಆಗಿ ಅನುಭವಿಯಾಗಿದ್ದಾರೆ. ಇಂಥ ಘಟನೆ ಆಗಿದ್ದರೆ, ತಕ್ಷಣ ಸ್ಪಂದಿಸುತ್ತಿದ್ದರು. ಯುವತಿ ಹೇಳಿಕೆಯಂತೆ, ಚೀರಾಡಿದರೂ ಸ್ಪಂದಿಸಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಏನೇ ಘಟನೆಗಳಾದರೂ ಮಂಗಳೂರಿನ ಪ್ರಯಾಣಿಕರು ಸಾರ್ವಜನಿಕವಾಗಿ ಉತ್ತಮ ಸ್ಪಂದನೆ ಹೊಂದಿದ್ದಾರೆ. ಯುವತಿಗೆ ಕಿರುಕಳದ ಬಗ್ಗೆ ಗೊತ್ತಾಗುತ್ತಿದ್ದರೆ ಆರೋಪಿಯನ್ನು ಹಣ್ಣುಗಾಯಿ ಮಾಡುತ್ತಿದ್ದರು ಎಂದು ಹೇಳುತ್ತಾರೆ.
ಬಸ್ಸಿನಲ್ಲಿ ಕಿರುಕುಳ ಘಟನೆಯಿಂದಾಗಿ ಮಂಗಳೂರಿನ ಖಾಸಗಿ ಬಸ್ ಗಳ ಬಗ್ಗೆ ಅಪನಂಬಿಕೆ ಉಂಟಾಗಿದೆ ಎಂಬ ನೆಲೆಯಲ್ಲಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯುವತಿ ಹೇಳಿಕೆಯಿಂದ ಮಂಗಳೂರಿನ ಬಸ್ ಮತ್ತು ಜನರ ಬಗ್ಗೆ ಹೊರಗಿನ ಜನ ಏನೆಂದುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಂಥ ಘಟನೆ ನಡೆದಿರುವ ಸಾಧ್ಯತೆ ತುಂಬ ಕಡಿಮೆ. ಬಸ್ಸಿನಲ್ಲಿ ಏನೇ ಘಟನೆಗಳಾದರೂ ಪ್ರಯಾಣಿಕರು ಮೊದಲು ಬಸ್ ಸಿಬಂದಿಗೆ ತಿಳಿಸಬೇಕು. ಬಸ್ ಸಿಬಂದಿಯಾಗಲೀ, ಪ್ರಯಾಣಿಕರಾಗಲೀ ಸ್ಪಂದಿಸಿಲ್ಲ ಎನ್ನಲು ಮಂಗಳೂರಿನ ಮಂದಿ ಅಷ್ಟು ಮೂರ್ಖರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೆ, ಯುವತಿ ನಿನ್ನೆ ಪೊಲೀಸ್ ಕಮಿಷನರ್ ಜೊತೆಗಿನ ಸುದ್ದಿಗೋಷ್ಠಿಯಲ್ಲೂ ತನಗಾದ ಕಿರುಕುಳದ ಬಗ್ಗೆ ಪುನರುಚ್ಚರಿಸಿದ್ದಾರೆ. ಅಲ್ಲದೆ, ತಾನು ಕಿರುಚಾಡಿದ್ದು ಬಸ್ ಸಿಬಂದಿ, ಸಹ ಪ್ರಯಾಣಿಕರು ನೋಡಿದ್ದರೂ ಕೇರ್ ಮಾಡಿಲ್ಲ ಎಂದಿದ್ದರು. ಮಂಗಳೂರಿನ ಬಸ್ ಗಳಲ್ಲಿ ಕಿರುಕುಳ ಆಗಲ್ಲ ಎನ್ನಲಾಗದು. ಕಿರುಕುಳದ ಬಗ್ಗೆ ಯುವತಿಯರು ಕೈ ಎತ್ತಿದರೆ, ಸ್ವರ ಏರಿಸಿದರೆ ಧ್ವನಿ ಸೇರಿಸದ ಮಂದಿ ಮಂಗಳೂರಿನವರಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಈ ಬಗ್ಗೆ ಹಿರಿಯ ವಕೀಲರಲ್ಲಿ ಕೇಳಿದರೆ, ಈಗ ಕಾನೂನು ಹೇಗಿದೆ ಅಂದ್ರೆ ಯುವತಿ ಮೇಲೆ ಕಿರುಕುಳದ ಆರೋಪ ಬಂದ ಕೂಡಲೇ ಆರೋಪಿಯನ್ನು ಬಂಧಿಸಬೇಕು. ಆನಂತರವಷ್ಟೇ ಆರೋಪದ ಬಗ್ಗೆ ಸಾಕ್ಷ್ಯ, ಇನ್ನಿತರ ಪೂರಕ ಮಾಹಿತಿಗಳನ್ನು ಕೇಳುತ್ತಾರೆ. ಈ ಪ್ರಕರಣದಲ್ಲಿಯೂ ಪೊಲೀಸರು ಅದನ್ನೇ ಮಾಡಿದ್ದಾರೆ. ಇನ್ನು ಬಸ್ ಸಿಬಂದಿ ಹಾಗೇ ಹೇಳುತ್ತಾರೆ, ನಮ್ಮಲ್ಲಿ ಆಗಿದೆ ಎಂದು ಹೇಳುವುದಿಲ್ಲ. ಆದರೆ, ಕೊನೆಗೆ ಏನಿದ್ದರೂ ಸಾಕ್ಷ್ಯಗಳಷ್ಟೇ ಕೋರ್ಟಿನಲ್ಲಿ ನಿಲ್ಲುವುದು ಎನ್ನುತ್ತಾರೆ.
ಇದೇನೇ ಇದ್ದರೂ, ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ. ದೂರು ದಾಖಲಾದ ದಿನವೇ ಬಸ್ಸನ್ನು ಸೀಜ್ ಮಾಡಿದ್ದು ಠಾಣೆಯಲ್ಲಿ ತಂದಿರಿಸಿದ್ದಾರೆ. ಯುವತಿಯ ಆರೋಪಕ್ಕೆ ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಬಸ್ ಸಿಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
Sexual Harassment in Moving bus in Mangalore, Bus crew members alleges that Women never asked for help nor shouted for help. The Bus has been seized by the city police.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm