ಬ್ರೇಕಿಂಗ್ ನ್ಯೂಸ್
24-01-21 03:55 pm Mangaluru Correspondent ಕರಾವಳಿ
ಉಳ್ಳಾಲ, ಜ.24: ಆಪರೇಶನ್ ಸುರಕ್ಷಾ ಹೆಸರಲ್ಲಿ ರಾತ್ರಿ ವೇಳೆ ಅಡ್ಡಾಡುವ ಮಂದಿಯನ್ನು ಪತ್ತೆ ಮಾಡಿ, ಜಾಗೃತಿ ಮೂಡಿಸುವ ಹೊಸ ಕಮಿಷನರ್ ಶಶಿಕುಮಾರ್ ಕೆಲಸದ ಬಗ್ಗೆ ಟೀಕೆ ಕೇಳಿಬಂದಿದೆ.
ಉಳ್ಳಾಲದಲ್ಲಿ ನಿನ್ನೆ ಪೊಲೀಸ್ ಕ್ರಮದ ಸೋಗಿನಲ್ಲಿ ಬೀದಿ ಬದಿ ನಿಂತಿದ್ದ ಅಮಾಯಕ ಯುವಕರನ್ನು ಹೊತ್ತೊಯ್ದು ಸಭಾಂಗಣವೊಂದರಲ್ಲಿ ಕೂಡಿ ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಸ್ಥಳಕ್ಕೆ ತೆರಳಿ, ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಂಜೆ ಪೊಲೀಸ್ ಕಮಿಷನರ್ ಸಾಹೇಬ್ರು ಕೊಣಾಜೆ, ಉಳ್ಳಾಲ, ಕಂಕನಾಡಿ ನಗರ, ದಕ್ಷಿಣ ಟ್ರಾಫಿಕ್ ಠಾಣೆಗಳಿಗೆ ಬೀದಿ ಬದಿ, ಬೀಚ್, ಗುಡ್ಡಗಳಲ್ಲಿ ನಿಂತ ತಲಾ 20 ಯುವಕರನ್ನು ಕರೆತಂದು ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಕೂಡಿ ಹಾಕುವಂತೆ ಟಾರ್ಗೆಟ್ ಕೊಟ್ಟಿದ್ದರಂತೆ. ಅದರಂತೆ, ತೊಕ್ಕೊಟ್ಟಿನ ಒಳಪೇಟೆ ನಿತ್ಯಾನಂದ ಯುವಕ ಮಂಡಲದ ಬಳಿ ರಿಕ್ಷಾದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಯುವಕರನ್ನು ಉಳ್ಳಾಲ ಪೊಲೀಸರು ರಾತ್ರಿ 9 ಗಂಟೆಗೆ ಎತ್ತಾಕಿ ತಾಜ್ ಮಹಲ್ ಸಭಾಂಗಣದಲ್ಲಿ ಕೂಡಿ ಹಾಕಿದ್ದಾರೆ. ಉಳ್ಳಾಲದ ಕೋಟೆಪುರ, ಮಾಸ್ತಿಕಟ್ಟೆಯಲ್ಲಿ ಇದೇ ರೀತಿ ಬೀದಿ ಬದಿಯಲ್ಲಿ ನಿಂತಿದ್ದ ಯುವಕರನ್ನು ರಾತ್ರಿ 9 ಗಂಟೆಯ ಹೊತ್ತಿಗೆ ಹಿಡಿದು ಕೂಡಿ ಹಾಕಿದ್ದಾರೆ. ಕೊಣಾಜೆ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲೂ ಇದೇ ಅವಸ್ಥೆ ಅಂತೆ. ಕಡೆಗೆ ಉಳ್ಳಾಲ ವ್ಯಾಪ್ತಿಯ ಮಾಡೂರಿನಿಂದ ಕೆಲವು ಯುವಕರನ್ನು ಕರೆತಂದಿದ್ದು ಅವರಲ್ಲಿ ಬಿಯರ್ ಬಾಟಲಿಗಳು ಇತ್ತಂತೆ. ಎಂದಿನ ಹಾಗೆ ಕೊನೆಗೆ ಕಮಿಷನರ್ ಶಶಿಕುಮಾರ್ 10 ಗಂಟೆ ಸುಮಾರಿಗೆ ಬಂದು ಸಭಾಂಗಣದಲ್ಲಿ ಕೂಡಿ ಹಾಕಿದ್ದ ಯುವಕರಿಗೆ ಬುದ್ಧಿ ಮಾತು ಹೇಳಿದ್ದಾರೆ.
ಅಮಾಯಕ ಯುವಕರನ್ನು ಎತ್ತಾಕಿ ಸಭಾಂಗಣದಲ್ಲಿ ಕೂಡಿ ಹಾಕಿರುವ ಬಗ್ಗೆ ಬಿಜೆಪಿ ಉಳ್ಳಾಲ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರ ಗಮನಕ್ಕೆ ತರಲಾಗಿದ್ದು ಕೂಡಲೇ ತಾಜ್ ಮಹಲ್ ಸಭಾಂಗಣಕ್ಕೆ ತೆರಳಿದ್ದಾರೆ. ಅಷ್ಟರಲ್ಲಿ ಕಮಿಷನರ್ ಶಶಿಕುಮಾರ್ ಸ್ಥಳದಿಂದ ತೆರಳಿದ್ದರು. ಸಭಾಂಗಣದಲ್ಲಿದ್ದ ಎಸಿಪಿ ರಂಜಿತ್ ಬಂಡಾರು, ಕಂಕನಾಡಿ ನಗರ, ಉಳ್ಳಾಲ, ಕೊಣಾಜೆ ಠಾಣಾಧಿಕಾರಿಗಳನ್ನು ಚಂದ್ರಹಾಸ್ ಅವರು ತರಾಟೆಗೆ ತೆಗೆದಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ತಾವು 9 ಗಂಟೆಗೆ ಬೀದಿ ಬದಿಯಲ್ಲಿರುವ ಅಮಾಯಕರನ್ನು ಈ ರೀತಿ ಎತ್ತಾಕ್ಕೊಂಡು ಹೋಗೋ ಅಗತ್ಯ ಏನು..? ಸೆಕ್ಷನ್ ಏನಾದ್ರೂ ಹಾಕಿದ್ದೀರಾ..? ನೀವು ಮಾಡೋ ಕಾರ್ಯ ಅಭಿನಂದನೀಯ. ಆದರೆ ರಾತ್ರಿ 11 ಗಂಟೆಯ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವುದು, ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಿ.. ಅದು ಬಿಟ್ಟು ರಾತ್ರಿ 9 ಗಂಟೆಗೆ ಬೀದಿ ಬದಿ ನಿಂತಿರುವ ಅಮಾಯಕರನ್ನು ಹೊತ್ತೊಯ್ದು ಅವರ ಮಾನಹರಣ ಮಾಡುವುದು ಎಷ್ಟು ಸರಿ..?ಉಳ್ಳಾಲದಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದಿದ್ದಾರೆ.
ಮಾಧ್ಯಮದವರಿಗೆ ವಿಡಿಯೋ ತೆಗೆಯಲು ಪೊಲೀಸರ ಅಡ್ಡಿ
ಚಂದ್ರಹಾಸ್ ಪಂಡಿತ್ ಹೌಸ್ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆಯುತ್ತಿದ್ದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗೆ ಉಳ್ಳಾಲ ಪಿಐ ಸಂದೀಪ್ ಮತ್ತು ಸಿಬ್ಬಂದಿ ತಡೆದು ಉದ್ಧಟತನ ತೋರಿದ್ದಾರೆ. ತಮ್ಮ ನ್ಯೂನತೆಗಳ ಬಗ್ಗೆ ವೀಡಿಯೋ ತೆಗೆಯದಂತೆ ಅಡ್ಡಿಪಡಿಸಿದ್ದಾರೆ.
ಈ ನಡುವೆ, ಸಭಾಂಗಣದಲ್ಲಿ ಕೂಡಿ ಹಾಕಿದವರನ್ನು ಬಿಡಿಸಲು ಮನೆಮಂದಿ ಬರಬೇಕೆಂದು ಕಮಿಷನರ್ ತಾಕೀತು ಮಾಡಿದ್ದರಂತೆ. ಪೊಲೀಸರ ಸೂಚನೆಯಂತೆ, ಗಂಡನನ್ನು ಬಿಡಿಸಲು ಓರ್ವ ಮಹಿಳೆಯೂ ಮಧ್ಯರಾತ್ರಿ ವೇಳೆ ಸಭಾಂಗಣಕ್ಕೆ ಆಗಮಿಸಿದ್ದರು ! ಆದರೆ ಬಿಜೆಪಿ ಮುಖಂಡರ ಆಗಮನದ ನಂತರ ನಡೆದ ಬೆಳವಣಿಗೆಯಲ್ಲಿ ಕೂಡಿ ಹಾಕಿದವರನ್ನು ಕೇವಲ ಸಹಿ ಪಡೆದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಬಂಧಿತರಲ್ಲಿ 95 ಶೇಕಡಾ ಸಭ್ಯರಾಗಿದ್ದು ಕಮಿಷನರ್ ಅವರ ಈ ಸ್ಟೇಷನ್ ಟಾರ್ಗೆಟ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Operation Suraksha lead by Police Commissioner Shashi Kumar turns controversy in Ullal after police personals lifted youngsters into Police van for irrelevant reasons. BJP leaders of Ullal rushed to the spot shouted at the police personals for this action.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm