ಬ್ರೇಕಿಂಗ್ ನ್ಯೂಸ್
25-01-21 06:29 pm Mangalore Correspondent ಕರಾವಳಿ
ಮಂಗಳೂರು, ಜ.25 : ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪುತ್ತೂರಿನ ರಾಕೇಶ್ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಆವಿಷ್ಕಾರದ ಪ್ರಾತ್ಯಕ್ಷಿಕೆ ನೀಡಿದರು. ತಾವು ಆವಿಷ್ಕರಿಸಿದ ಸೀಡೋಗ್ರಾಫರ್ ಯಂತ್ರವು ರೈತರಿಗೆ ಯಾವ ರೀತಿಯಲ್ಲಿ ಉಪಯುಕ್ತ ಅನ್ನುವುದನ್ನು ತೋರಿಸಿಕೊಟ್ಟರು.
ಬಳಿಕ ಮಾಧ್ಯಮದ ಮಂದಿಗೆ ರಾಕೇಶ ಕೃಷ್ಣ ತಮ್ಮ ಯಂತ್ರದ ಬಳಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ರೈತರು ಮಾಮೂಲಿ ಯಂತ್ರಗಳನ್ನು ಬಳಸಿ ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಮಾಡಲು ಕನಿಷ್ಠ 100-120 ಗಂಟೆ ಬೇಕಾಗುತ್ತದೆ. ಆದರೆ, ಈಗ ಅಭಿವೃದ್ಧಿಪಡಿಸಿರುವ ಸೀಡೋಗ್ರಾಫರ್ ಯಂತ್ರದಲ್ಲಿ ಒಂದು ಹೆಕ್ಟೇರ್ ಪ್ರದೇಶವನ್ನು ಕೇವಲ 18 ಗಂಟೆಯೊಳಗೆ ಬಿತ್ತನೆ ಮಾಡಲು ಸಾಧ್ಯ ಎಂದು ರಾಕೇಶ್ ಕೃಷ್ಣ ಹೇಳಿದರು.
ಗದ್ದೆ ಅಥವಾ ಹೊಲದಲ್ಲಿ ಸೀಡೋಗ್ರಾಫರ್ ಯಂತ್ರವನ್ನು ಬಳಸುವಾಗ ಅದು ನೇಗಿಲು ರೀತಿಯಲ್ಲಿ ಗದ್ದೆಯನ್ನು ಉಳುಮೆ ಮಾಡುವುದಲ್ಲದೆ, ಜೊತೆಗೇ ಬಿತ್ತನೆಯನ್ನೂ ಮಾಡುತ್ತದೆ. ಯಂತ್ರದಲ್ಲಿ ಮೊದಲೇ ಬೀಜ ತುಂಬಿಸಲಾಗುತ್ತದೆ. ಯಂತ್ರ ಮುಂದುವರಿದಂತೆ ಬೀಜವು ಅದರಿಂದ ಉದುರುತ್ತದೆ. ಅದರ ಜೊತೆಗೆ ಟ್ಯಾಂಕ್ನಲ್ಲಿರುವ ನೀರೂ ಬೀಳುತ್ತದೆ. ಬೀಜ ಹಾಕಿದ ತಕ್ಷಣ ಯಂತ್ರದಲ್ಲಿರುವ ಪ್ಲೇಟ್ ಬೀಜದ ಮೇಲೆ ಮಣ್ಣನ್ನು ಮುಚ್ಚಿಕೊಂಡು ಬರುತ್ತದೆ. ಈ ಯಂತ್ರದ ಸಹಾಯದಿಂದ ವಿವಿಧ ವಿನ್ಯಾಸದ ಬೀಜಗಳನ್ನು ಬಿತ್ತನೆ ಮಾಡಬಹುದು ಎಂದು ರಾಕೇಶ್ ಕೃಷ್ಣ ಮಾಹಿತಿ ನೀಡಿದರು.
3- 4 ವರ್ಷಗಳ ಸತತ ಪ್ರಯತ್ನದಿಂದ ಸೀಡೋಗ್ರಾಫರ್ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಏಳನೇ ತರಗತಿಯಿಂದಲೇ ಈ ಯಂತ್ರದ ಕೆಲಸ ಆರಂಭಿದ್ದೆ. ಸಹೋದರಿ ರಶ್ಮಿ ಯಂತ್ರ ತಯಾರಿಗೆ ಬಹಳಷ್ಟು ಸಹಕರಿಸಿದ್ದಾರೆ. ಅಲ್ಲದೆ ಹೆತ್ತವರು ಹಾಗೂ ಶಾಲಾ ಕಾಲೇಜಿನ ಅಧ್ಯಾಪಕರ ಸಲಹೆ, ಸಹಕಾರವು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಹೇಳಿದರು.
ರಾಕೇಶ್ ಕೃಷ್ಣ ತಾಯಿ ಡಾ. ದುರ್ಗಾರತ್ನ ಸಿ. ಮಾತನಾಡಿ, ನನ್ನ ಮಗ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆ ಆಗಿರುವುದು ಬಹಳ ಸಂತಸ ತಂದಿದೆ. ಅದೇ ರೀತಿ ಪ್ರಧಾನಿ ಮೋದಿಯವರ ಜೊತೆ ನೇರವಾಗಿ ಮಾತನಾಡಲು ಅವಕಾಶ ಸಿಕ್ಕಿದ್ದು ಅದ್ಭುತ ಅನುಭವ. ರೈತರಿಗೆ ಈ ಯಂತ್ರದಿಂದ ಉಪಯೋಗ ಸಿಗಲಿ ಎಂದು ಹೇಳಿದರು.
Video:
Rakesh Krishna, one among 32 children in the country to win Pradhan Mantri Rastriya Bal Puraskar 2021, spoke to media on Monday January 25 after interacting with Prime Minister Narendra Modi through virtual conference at zilla panchayat office here.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm