ಬ್ರೇಕಿಂಗ್ ನ್ಯೂಸ್
25-01-21 07:42 pm Mangaluru Correspondent ಕರಾವಳಿ
ಉಳ್ಳಾಲ, ಜ.25: ಉಳ್ಳಾಲ ಮತ್ತು ಕೊಣಾಜೆಯ ಹಿಂದು ಶ್ರದ್ಧಾಕೇಂದ್ರಗಳಲ್ಲಿ ವಿಕೃತಿ ಮೆರೆದ ಮತಾಂಧರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಇವರನ್ನು ಹಾಗೇ ಬಿಡಬೇಕೆ ? ಇವರು ಪೊಲೀಸರ ಕೈಗೆ ಸಿಗದೇ ಇರಬಹುದು. ಹಿಂದು ಸಂಘಟನೆ ಕಾರ್ಯಕರ್ತರ ಕೈಗೆ ಸಿಗದೇ ಇರಲಿಕ್ಕಿಲ್ಲ. ಒಂದ್ವೇಳೆ ಸಿಕ್ಕರೆ ಯಾವ ರೀತಿಯ ಶಿಕ್ಷೆ ಕೊಡಬೇಕು ಎಂಬ ಪ್ರಶ್ನೆಯನ್ನು ವಿಶ್ವ ಹಿಂದು ಪರಿಷತ್ ವಿಭಾಗ ಸಂಚಾಲಕ ಶರಣ್ ಪಂಪ್ವೆಲ್ ಸೇರಿದ್ದ ಕಾರ್ಯಕರ್ತರ ಮುಂದಿಟ್ಟಿದ್ದಾರೆ. ಶರಣ್ ಪಂಪ್ವೆಲ್ ಪ್ರಶ್ನೆಗೆ ಉತ್ತರಿಸಿದ ಅಲ್ಲಿ ಸೇರಿದ್ದ ಕಾರ್ಯಕರ್ತರು, ಮತಾಂಧರ ಕೈ ಕಡಿಯಬೇಕು ಎಂದು ಉತ್ತರಿಸಿದ್ದಾರೆ.
ಉಳ್ಳಾಲ ಪರಿಸರದಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ಕೃತ್ಯ ಹಾಗೂ ಹಿಂದು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ಹುನ್ನಾರದ ವಿರುದ್ಧ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮುಖ್ಯ ಭಾಷಣ ಮಾಡಿದ ಶರಣ್ ಪಂಪ್ವೆಲ್, ಮತಾಂಧರು ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದು ಹೆಣ್ಮಕ್ಕಳನ್ನು ಮರುಳು ಮಾಡಿ ಲವ್ ಜಿಹಾದ್ ನಡೆಸುತ್ತಿದ್ದಾರೆ. ಈ ಷಡ್ಯಂತ್ರಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯೇ ಇವರಿಗೆ ಪ್ರಯೋಗ ಶಾಲೆಯಾಗಿದೆ. ಉಗ್ರರ ಪರ ಇರುವವರು ಇಂದು ಮಂಗಳೂರಿನಲ್ಲಿ ಗೋಡೆ ಬರಹ ಬರೆಯುತ್ತಾರೆ. ಮಹಮ್ಮದ್ ಪೈಗಂಬರ್ ಬಗ್ಗೆ ಮಾತಾಡಿದ್ರೆ ತಲೆ ತೆಗೀತೀವಿ ಎಂದು ಬರೀತಾರೆ. ದೇಶದ ಯಾವ ಮೂಲೆಯಲ್ಲೂ ಬಾಂಬ್ ಬ್ಲಾಸ್ಟ್ ಆದರೆ ನಮ್ಮ ಜಿಲ್ಲೆಯ ಒಬ್ಬನಾದರೂ ಅದರಲ್ಲಿ ಶಾಮೀಲಾಗಿರುತ್ತಾನೆ. ಇದರ ಅರ್ಥ ನಮ್ಮ ಜಿಲ್ಲೆಯಲ್ಲಿ ಮತಾಂಧರಿಂದ ಬಹು ದೊಡ್ಡ ಸಂಚು ನಡೀತಿದೆ.
ಉಳ್ಳಾಲದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಅನ್ಯಾಯವೆಸಗಿದರು. ಎಲ್ಲವನ್ನು ಕೊರಗಜ್ಜ ನೋಡೋದಾದರೆ ಕೊರಗಜ್ಜನು ಜನರು ಏನು ಮಾಡ್ತೀದ್ದಾರೆ ಎನ್ನೋದನ್ನು ನೋಡೋದಿಲ್ವೇ? ಜನರು ಎಚ್ಚೆತ್ತು ಕೊಳ್ಳೋದು ಯಾವಾಗ ? ಕಾಣಿಕೆ ಡಬ್ಬಿಗೆ ಕೈ ಹಾಕಿದವರು ಮಂದಿರದ ಒಳಗೆ ಬರದೆ ಇರುವರೇ ..? ಯಾರೋ ಒಬ್ಬ ಮುಖಂಡ ಇದರ ಬಗ್ಗೆ ಮಾತಾಡಿದರೆ ಸಾಕಾಗದು. ಇಡೀ ಹಿಂದು ಸಮುದಾಯ ಇದರ ವಿರುದ್ಧ ಒಂದಾಗಬೇಕು. ನಮ್ಮ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸಿದವರು ಹಿಂದು ಕಾರ್ಯಕರ್ತರ ಕೈಗೆ ಸಿಕ್ಕಿದರೆ ಏನ್ಮಾಡಬೇಕೆಂದು ಸೇರಿದ್ದ ಜನರನ್ನೇ ಶರಣ್ ಪಂಪ್ವೆಲ್ ಪ್ರಶ್ನೆ ಮಾಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಹಿಂದೂ ಕಾರ್ಯಕರ್ತರು ಒಕ್ಕೊರಳಲ್ಲಿ ಕೈಕಡಿಯಬೇಕೆಂದರು. ನಾವು ಕಾನೂನು ಕೈಗೆತ್ತಿಕೊಳ್ಳೋ ಮೊದಲು ಪೊಲೀಸರು ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದರು. ನೀವು ತಾಂಟ್ರೆ ಬಾ ತಾಂಟ್ರೆ ಹೇಳೋದು ಬಿಡಿ, ಒಬ್ಬ ಹಿಂದು ಕೊಲೆಯಾದರೆ ಅದಕ್ಕೆ ಜೈಲಲ್ಲೇ ನಾವು ಉತ್ತರ ಕೊಟ್ಟಿದ್ದೀವಿ ಎಂದರು.
ಮಸೀದಿಯಲ್ಲಾಗುತ್ತಿದ್ದರೆ ಏನಾಗುತ್ತಿತ್ತು..!
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಉಳ್ಳಾಲದಲ್ಲಿ ಹಿಂದುಗಳ ಶ್ರದ್ಧಾ ಕೇಂದ್ರಗಳಲ್ಲಾದ ವಿಕೃತಿಗಳು ಮಸೀದಿಗಳಲ್ಲಿ ಆದರೆ ಪರಿಸ್ಥಿತಿ ಹೇಗಿರುತ್ತಿತ್ತು? ಇವರು ಹಾಗೇ ಬಿಡುತ್ತಿದ್ದರೇ ? ಸರಕಾರ ನಮ್ಮದೇ, ಪ್ರತಿಭಟನೆ ಯಾಕೆಂದು ಹೇಳುತ್ತಾರೆ. ಈ ಪುಂಡರ ನಾಶವೇ ನಮ್ಮ ಪ್ರತಿಭಟನೆಯ ಉದ್ದೇಶ. ಕೊರಗಜ್ಜ ದೈವ ತನ್ನ ಕಾಯರ್ ದಂಟೆ ಬೀಸಿದರೆ ಯಾವ ದುಷ್ಟರ ಸುಳಿವೂ ಇರದು. ಖಾದರ್ ಅವರಿಗೆ ಪರೋಕ್ಷವಾಗಿ ಮಾತನಾಡಿದ ಸ್ವಾಮೀಜಿ, ಪ್ರೆಸ್ ಮೀಟ್ ಮಾಡಿ ಘಟನೆಗಳನ್ನು ಖಂಡಿಸುವ ತಾವು ತುರ್ತಾಗಿ ಹಿಂದುಗಳ ರಕ್ಷಣೆಯ ಕಾರ್ಯ ನಡೆಸಬೇಕೆಂದರು.
SDPI ವಿರುದ್ಧ ವಾಗ್ದಾಳಿ ನಡೆಸಿದ ಅವರು ಭಯ ಮುಕ್ತ , ಹಸಿವು ಮುಕ್ತ ಸ್ವಾತಂತ್ರ್ಯ ಎಂಬ ಧ್ಯೇಯ ವಾಕ್ಯ ಹೊಂದಿರುವವರೆರ ಇಂದು ಭಯೋತ್ಪಾದನೆ ನಡೆಸುತ್ತಿದ್ದಾರೆ. ಹಸಿವು ಮುಕ್ತ ಸ್ವಾತಂತ್ರ್ಯ ಹೇಳೋರು ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಯಾರಿಗೆ ಊಟ ಕೊಟ್ಟಿದ್ದಾರೆಂದು ನಾನಂತೂ ನೋಡಿಲ್ಲ. ಫರಂಗಿ ಪೇಟೆಯ ರಿಯಾಝ್ ಮಂಡಲ ಮಟ್ಟದಲ್ಲಿ ಹತ್ತು ಸೀಟ್ ಗೆದ್ದು ರಾಜ್ಯವನ್ನೇ ಗೆದ್ದಂಗೆ ತಾಂಟ್ರೆ ಬಾ ತಾಂಟ್ ಎಂದಿದ್ದು ಹಾಸ್ಯಾಸ್ಪದ ಎಂದರು.
ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್ , ಮುಖಂಡರಾದ ಗೋಪಾಲ ಕುತ್ತಾರು ವೇದಿಕೆಯಲ್ಲಿದ್ದರು. ಉಳ್ಳಾಲ ಮತ್ತು ಕೊಣಾಜೆ ಪರಿಸರದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಸೇರಿದ್ದರು.
Miscreants drop Condom in the temple offering box in Ullal and Konaje VHP demands to cut off the hands of those involved.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm