ಬಂಗಾರಪಲ್ಕೆ ಜಲಪಾತದಲ್ಲಿ ಗುಡ್ಡ ಕುಸಿದು ಯುವಕ ಮೃತ್ಯು 

25-01-21 11:01 pm       Mangaluru Correspondent   ಕರಾವಳಿ

ಅರಣ್ಯ ಪ್ರದೇಶದ ಜಲಪಾತದಲ್ಲಿ ಯುವಕರು ನೀರಾಟವಾಡುತ್ತಿದ್ದಾಗ ಗುಡ್ಡ ಕುಸಿದು ಬಿದ್ದು ಯುವಕನೊಬ್ಬ ಮಣ್ಣಿನಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.‌  

ಬೆಳ್ತಂಗಡಿ, ಜ.25: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಅರಣ್ಯ ಪ್ರದೇಶದ ಜಲಪಾತದಲ್ಲಿ ಯುವಕರು ನೀರಾಟವಾಡುತ್ತಿದ್ದಾಗ ಗುಡ್ಡ ಕುಸಿದು ಬಿದ್ದು ಯುವಕನೊಬ್ಬ ಮಣ್ಣಿನಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.‌
 
ಜಲಪಾತದ ನೀರಿನಲ್ಲಿ ಯುವಕರು ಆಡುತ್ತಿದ್ದಾಗಲೇ ಅಂಚಿನ‌ ಗುಡ್ಡ ಕುಸಿದು ನಾಲ್ವರು ಯುವಕರ ಮೇಲೆ ಬಿದ್ದಿದೆ. ಘಟನೆಯಲ್ಲಿ ಮೂವರು ಯುವಕರು ಅಪಾಯದಿಂದ ಪಾರಾಗಿದ್ದು ಓರ್ವ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ ಎನ್ನಲಾಗುತ್ತಿದೆ.  ನಾಪತ್ತೆಯಾದ ಯುವಕ ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಸಮೀಪದ ನಿವಾಸಿಯಾಗಿದ್ದಾನೆ. 

ಜಲಪಾತ ಇರುವ ಜಾಗ ಅರಣ್ಯದ ಒಳಗಿನ ಅಪಾಯಕಾರಿ ಪ್ರದೇಶವಾಗಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.  ಅರಣ್ಯದಂಚಿನಲ್ಲಿ ಇರುವ ಈ ಜಲಪಾತ ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರಿದ್ದರು.

In a tragic incident, a Youth died after a major landslide at waterfalls in Belthangady in Mangalore among which four were rescued.