ಬ್ರೇಕಿಂಗ್ ನ್ಯೂಸ್
27-01-21 12:28 pm Udupi Correspondent ಕರಾವಳಿ
ಉಡುಪಿ, ಜ.27: ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಾರಂಭದ ಮೆರವಣಿಗೆಯಲ್ಲಿ ಮೂರೂವರೆ ವರ್ಷದ ಪುಟಾಣಿ ಹುಡುಗಿಯೊಬ್ಬಳು ಸೇನಾ ಸಮವಸ್ತ್ರ ಧರಿಸಿ, ಕೈಯಲ್ಲಿ ಮೆಷಿನ್ ಗನ್ ಹಿಡಿದು ನಡೆದಾಡಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದು ಮೀನುಗಾರಿಕಾ ಸಚಿವ ಎಸ್. ಅಂಗಾರ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವ ರೀತಿ ಸಮವಸ್ತ್ರ ಧರಿಸಿದ್ದ ಪುಟಾಣಿ ನಡೆದಾಡುತ್ತಿದ್ದುದು ಗಮನ ಸೆಳೆದಿತ್ತು.
ಮೆರವಣಿಗೆಯಲ್ಲಿ ಇತರ ಪೊಲೀಸರು, ಎನ್ ಸಿಸಿ ಕೆಡೆಟ್ ಗಳ ಜೊತೆ ಗಮನ ಸೆಳೆದಿದ್ದು ಪುಟಾಣಿ ಮಯೂರಿ ಪ್ರಭು. ಮಯೂರಿಯ ತಂದೆ ರಾಘವೇಂದ್ರ ಪ್ರಭು ಉಡುಪಿ ಅಂಚೆ ಕಚೇರಿಯಲ್ಲಿ ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶ್ರೀದೇವಿ ಗೃಹಿಣಿ. ತಮ್ಮ ಮಗಳು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಕನಸಿಗೆ ನೀರೆರೆಯುವಂತೆ ಪೋಷಕರು ಸಣ್ಣಂದಿನಲ್ಲೇ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಆಕೆಗೆ ಸೇನಾ ಸಮವಸ್ತ್ರವನ್ನು ತೊಡಿಸಿ, ಪಥಸಂಚಲನಕ್ಕೆ ಕರೆತರುತ್ತಾರೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಆಕೆಯ ಪೋಷಕರು ಸೇನಾ ಸಮವಸ್ತ್ರ ನೀಡಿದ್ದು ಕಾರ್ಯಕ್ರಮದಲ್ಲಿ ಆಕರ್ಷಣೆಗೆ ಕಾರಣವಾಯಿತು.
ಮಯೂರಿ ಕೊನೆಗೆ ಸಚಿವ ಎಸ್. ಅಂಗಾರ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ ಇಬ್ಬರೂ ಪುಟಾಣಿಗೆ ಶುಭ ಹಾರೈಸಿದ್ದಾರೆ.
Three and a half-year-old girl, in army uniform, with a machine gun in hand, stole the show at the Republic Day parade that was held in the city on Tuesday, January 26.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm