ಬ್ರೇಕಿಂಗ್ ನ್ಯೂಸ್
28-01-21 01:11 pm Mangalore Correspondent ಕರಾವಳಿ
ಮಂಗಳೂರು, ಜ. 28 : ಇಂಡೋನೇಷ್ಯಾದಲ್ಲಿ ಉದ್ಯೋಗ ದೊರಕಿಸುವುದಾಗಿ ಹೇಳಿ ಉಳ್ಳಾಲ ಮೂಲದ ಯುವಕನಿಗೆ ಟ್ರಾವೆಲ್ ಏಜೆನ್ಸಿಯವರು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಡಿಪ್ಲೊಮಾ ಓದಿರುವ ಯುವಕ ಮೊಹಮ್ಮದ್ ನಿಯಾಜ್ ಟ್ರಾವೆಲ್ ಏಜೆನ್ಸಿಯ ಮಾಲೀಕರ ವಿರುದ್ಧ ಮಂಗಳೂರಿನ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.
ಮಂಗಳೂರು ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ಶಮೀರ್ ರಿಜ್ವಾನ್, 6 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ.
"ಶಮೀರ್ ನನ್ನ ಮಗನಿಂದ ಉದ್ಯೋಗಕ್ಕಾಗಿ ಆತನ ಎಲ್ಲ ಸರ್ಟಿಫಿಕೇಟ್ ಇನ್ನಿತರ ದಾಖಲೆಗಳನ್ನು ತೆಗೆದುಕೊಂಡಿದ್ದಾನೆ. ವೀಸಾಕ್ಕಾಗಿ 6 ಲಕ್ಷ ರೂ. ಪಡೆದಿದ್ದರು. ನಾವು ಆತನಿಗೆ 6 ಲಕ್ಷ ರೂ. ನೀಡಿದರೆ ನನ್ನ ಮಗನಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ ಇರುವ ಮೆಕ್ಯಾನಿಕಲ್ ಎಂಜಿನಿಯರ್ ಕೆಲಸವನ್ನು ಕೊಡಿಸುವುದಾಗಿ ಹೇಳಿದ್ದರು. ಬಳಿಕ ನನ್ನ ಮಗನನ್ನು ವಿಸಿಟಿಂಗ್ ವೀಸಾ ಮೂಲಕ ಇಂಡೋನೇಷ್ಯಾಕ್ಕೆ ಕರೆದೊಯ್ದಿದ್ದು ಅದಕ್ಕಾಗಿ 2019 ರ ಜುಲೈನಲ್ಲಿ 3.5 ಲಕ್ಷ ರೂ. ಮತ್ತು 2020 ಫೆಬ್ರವರಿಯಲ್ಲಿ 2.5 ಲಕ್ಷ ರೂ. ನೀಡಿದ್ದೇನೆ ಎಂದು ಯುವಕನ ತಂದೆ ಅಬ್ದುಲ್ ಅಜೀಜ್ ದೂರಿದ್ದಾರೆ.
2020 ರ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಇತರ ಮೂವರ ಜೊತೆ ಇಂಡೋನೇಷ್ಯಾದಲ್ಲಿ ರೂಮಿನಲ್ಲಿದ್ದೆ. ಸೆಪ್ಟೆಂಬರ್‌ನಲ್ಲಿ ನಮ್ಮನ್ನು ವಲಸೆ ಅಧಿಕಾರಿಗಳು ದೇಶದಲ್ಲಿ ಅಕ್ರಮವಾಗಿ ಉಳಿದ ಆರೋಪದಲ್ಲಿ ಬಂಧಿಸಿದ್ದು 14 ದಿನಗಳ ಜೈಲಿಗೆ ಹಾಕಿದ್ದರು. ಪ್ರಕರಣದಲ್ಲಿ ಕಾನೂನು ಹೋರಾಟ ಮಾಡಿದ ಬಳಿಕ ನಮ್ಮನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂತ್ರಸ್ತ ನಿಯಾಜ್ ಹೇಳಿದ್ದಾರೆ. ಮಂಗಳೂರಿಗೆ ವಾಪಸ್ ಬರಲು 8 ಲಕ್ಷ ರೂ. ಖರ್ಚು ಆಯ್ತು ಎಂದು ನಿಯಾಜ್ ತಿಳಿಸಿದ್ದಾರೆ.
A youth from Ullal, who was searching for a job was cheated by a tours and travels agency of Mangalore and lost six lac rupees and was jailed in Indonesia. The youth, Mohammed Niyaz, who is a diploma holder, has registered a complaint against the owner of the travel agency.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm