ಬ್ರೇಕಿಂಗ್ ನ್ಯೂಸ್
28-01-21 02:20 pm Mangalore Correspondent ಕರಾವಳಿ
ಸುಳ್ಯ, ಜ.28 : ಇಲ್ಲಿನ ಪೆರಾಜೆ, ಬಿಳಿಯಾರು ಪ್ರದೇಶದಲ್ಲಿ ದೊಡ್ಡ ಗಾತ್ರದ ಕಾಡಾನೆಯೊಂದು ಎರಡು ದಿನಗಳಿಂದ ಹಾದಿಯುದ್ದಕ್ಕೂ ತನ್ನ ಪಾಡಿಗೆ ನಡೆದು ಹೋಗುತ್ತಿದ್ದು ಜನರಲ್ಲಿ ಆತಂಕ ಶುರುವಾಗಿದೆ. ಆದರೆ, ಅಲ್ಲಿನ ಕೆಲವರ ಪ್ರಕಾರ ಈ ಆನೆ ಪ್ರತಿ ವರ್ಷ ಹೀಗೇ ಬರುತ್ತದೆಯಂತೆ. ಜನರಿಗೇನು ತೊಂದರೆ ಕೊಡುವುದಿಲ್ಲವಂತೆ.
ಹೌದು, ಈ ಆನೆಯು ಪ್ರತೀ ವರ್ಷ ಕಡಬದ ಸುಬ್ರಹ್ಮಣ್ಯ ಅರಣ್ಯ ವಲಯದಿಂದ ಸುಳ್ಯದ ಪಂಜ ಮೂಲಕ ಮಡಿಕೇರಿಯ ಭಾಗಮಂಡಲ ವರೆಗೂ ಇದೇ ದಾರಿಯಲ್ಲಿ ಸಂಚರಿಸುತ್ತದೆ ಎನ್ನಲಾಗುತ್ತಿದೆ. ಪ್ರತಿ ಬಾರಿ ಜನವರಿ, ಫೆಬ್ರವರಿ ತಿಂಗಳಲ್ಲಿ ಇದೇ ಆನೆ ಈ ದಾರಿಯಲ್ಲಿ ಕಂಡುಬರುತ್ತಿದೆ.
ಆನೆ ನಡೆದದ್ದೇ ದಾರಿ ಎನ್ನುವಂತೆ, ತಾನು ಹಾದು ಹೋಗುವ ದಾರಿಯಲ್ಲಿ ಹೊಟ್ಟೆ ಹಸಿವು ಆದಾಗ ಬಾಳೆ, ತೆಂಗು ಸೇರಿದಂತೆ ಬೈನೆ ಮರಗಳನ್ನು ತಿನ್ನುತ್ತದೆ. ಮಡಿಕೇರಿ ಗಡಿಭಾಗ ಭಾಗಮಂಡಲದ ವರೆಗೂ ಹೋದ ಆನೆ ನಂತರದಲ್ಲಿ ಫೆಬ್ರವರಿ ತಿಂಗಳ ಮಧ್ಯದಲ್ಲಿ ಅದೇ ದಾರಿಯಲ್ಲಿ ವಾಪಾಸು ಬರುತ್ತದೆಯಂತೆ.

ಆನೆ ಹೋಗುವ ದಾರಿಯಲ್ಲಿ ಸಿಗುವ ಕುಮಾರಧಾರಾ ನದಿ ಹಾಗೂ ಪಯಸ್ವಿನಿ ನದಿಯನ್ನೂ ಆನೆ ಈಜುವ ಮೂಲಕ ನದಿ ದಾಟುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಈ ಆನೆಯನ್ನು ಅರಣ್ಯಾಧಿಕಾರಿಗಳು ಕೂಡ ಗುರುತಿಸಿದ್ದು ಆನೆ ಅದರ ಪಾಡಿಗೆ ತನ್ನ ದಾರಿಯಲ್ಲೇ ಸಂಚಾರ ಮಾಡುತ್ತದೆ. ಯಾರಿಗೂ ತೊಂದರೆ ನೀಡಿದ ಮಾಹಿತಿ ಇಲ್ಲ. ಆದರೂ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವ ಜನರು ಎಚ್ಚರಿಕೆ ವಹಿಸಬೇಕು. ತೊಂದರೆ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿ ಮಾಡಿದ್ದಾರೆ.
Video:
A Wild elephant caught on Video has become viral on social media as the Elephant enters Kadapa village every year hunting for food towards Bagamandala.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm