ಬ್ರೇಕಿಂಗ್ ನ್ಯೂಸ್
29-01-21 12:50 pm Mangalore Correspondent ಕರಾವಳಿ
ಬೆಳ್ತಂಗಡಿ, ಜ.29: ಇಲ್ಲಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಜಲಪಾತದಲ್ಲಿ ಬಂಡೆ ಕುಸಿದು ಬಿದ್ದು ಯುವಕ ಮಣ್ಣಿನಡಿಗೆ ಬಿದ್ದ ಪ್ರಕರಣದಲ್ಲಿ ಸತತ ನಾಲ್ಕನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಉಜಿರೆಯ ಯುವಕ ಸನತ್ ಶೆಟ್ಟಿ (20) ಮತ್ತು ಇತರ ಮೂವರು ಜಲಪಾತದಲ್ಲಿ ನೀರಾಟ ಆಡುತ್ತಿದ್ದಾಗ ಬಂಡೆ ಕುಸಿದು ಘಟನೆ ಸಂಭವಿಸಿತ್ತು. ಸನತ್ ಮಣ್ಣಿನಡಿಗೆ ಬಿದ್ದಿದ್ದಾನೆ ಎನ್ನಲಾಗಿದ್ದು, ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಯುವಕ ಮಾತ್ರ ಪತ್ತೆಯಾಗಿಲ್ಲ.
ಕಾಡಿನ ಮಧ್ಯೆ ಈ ಜಾಗ ಇರುವುದರಿಂದ ಜೆಸಿಬಿ ಆಗಲೀ, ಇನ್ನಿತರ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ಅಲ್ಲಿಗೆ ಒಯ್ಯಲು ಸಾಧ್ಯವಾಗುತ್ತಿಲ್ಲ. ಬೃಹತ್ ಬಂಡೆ ಕಲ್ಲುಗಳು ಕುಸಿದು ಬಿದ್ದಿರುವುದರಿಂದ ಅದನ್ನು ಒಡೆಯುವುದಾಗಲೀ, ಎಬ್ಬಿಸುವುದಾಗಲೀ ಮಾನವ ಶ್ರಮದಿಂದ ಸಾಧ್ಯವಿಲ್ಲ ಎಂಬ ಮಾತನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಸ್ಥಳೀಯ ಶಾಸಕ ಹರೀಶ್ ಪೂಂಜಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲಹೆ ಮೇರೆಗೆ ಯಾವುದೇ ರೀತಿಯಲ್ಲಾದರೂ ಬಂಡೆಯನ್ನು ಒಡೆದು ಯುವಕನ ಪತ್ತೆ ಮಾಡಲು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಗುರುವಾರ ಪುತ್ತೂರು ವಿಭಾಗೀಯ ಕಮಿಷನರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆಗೆ ನೇತೃತ್ವ ನೀಡಿದ್ದಾರೆ. ಅಲ್ಲದೆ, ಬೆಳ್ತಂಗಡಿ ಎಸ್ಐ ನಂದಕುಮಾರ್ ಮೂಲಕ ಶುಕ್ರವಾರ ಕ್ರಷರ್ ಯಂತ್ರವನ್ನು ಸ್ಥಳಕ್ಕೆ ಒಯ್ಯಲು ಸೂಚನೆ ನೀಡಿದ್ದಾರೆ. ರಸ್ತೆ ಇಲ್ಲದಿರುವ ಕಾರಣದಿಂದಾಗಿ ದೊಡ್ಡ ಯಂತ್ರಗಳನ್ನು ಸ್ಥಳಕ್ಕೆ ಒಯ್ಯಲು ಕಷ್ಟವಾಗಿದೆ. ಹಾಗಿದ್ದರೂ, ಜಿಲ್ಲಾಡಳಿತ ಯಾವುದೇ ರೀತಿಯಲ್ಲಾದರೂ ಯುವಕನನ್ನು ಪತ್ತೆ ಮಾಡಬೇಕೆಂದು ಸೂಚನೆ ನೀಡಿದ್ದು, ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Belthangady Landslide at Badamane Abbi waterfall Youth from Ujire dead body stuck amid rock crusher used to destroy rock and recover the body.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm