ಬ್ರೇಕಿಂಗ್ ನ್ಯೂಸ್
29-01-21 05:46 pm Mangalore Correspondent ಕರಾವಳಿ
ಮಂಗಳೂರು, ಜ.29: ಪೊಲೀಸ್ ಸಿಬಂದಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮತ್ತೊಂದು ಗ್ಯಾಂಗ್ ಕೈವಾಡ ಇರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಕುದ್ರೋಳಿ ಪರಿಸರದಲ್ಲಿ ಸಕ್ರಿಯವಾಗಿರುವ ಕಾರ್ಖಾನೆ ಗ್ಯಾಂಗ್ ಎನ್ನುವ ಹೆಸರಲ್ಲಿ ಈ ಗ್ಯಾಂಗ್ ಸಕ್ರಿಯವಾಗಿದೆಯಂತೆ.
ಪೊಲೀಸರು ಎರಡು ದಿನಗಳ ಹಿಂದೆ ಪ್ರಕರಣ ಸಂಬಂಧಿಸಿ ಮಹಮ್ಮದ್ ಶಾಕೀರ್ (19(, ಅಕ್ಬರ್(30) ಮತ್ತು ಮಹಮ್ಮದ್ ಹನೀಫ್ (32) ಎಂಬ ಮೂವರನ್ನು ಬಂಧಿಸಿದ್ದರು. ಪೊಲೀಸರ ಮೇಲೆ ಪ್ರತೀಕಾರ ತೀರಿಸಲು ಸಂಚು ರೂಪಿಸಿದವರಲ್ಲಿ ಪೈಕಿ ಇವರ ಶಾಮೀಲಾತಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಜರುಗಿಸಿದ್ದರು. ಇದೀಗ ಇವರು ತಮ್ಮಲ್ಲೇ ಕುದ್ರೋಳಿ ಮಸೀದಿ ಆಸುಪಾಸಿನಲ್ಲಿ ಕಾರ್ಖಾನೆ ಗ್ಯಾಂಗ್ ಎನ್ನುವ ಹೆಸರಲ್ಲಿ ಅಪರಾಧ ಚಟುವಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಕರಣ ಸಂಬಂಧಿಸಿ, ಪೊಲೀಸರು ಈ ಹಿಂದೆ ಆರು ಮಂದಿಯನ್ನು ಬಂಧಿಸಿದ್ದು ಅವರು ಮಾಯಾ ಗ್ಯಾಂಗ್ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದರು ಎನ್ನುವುದನ್ನು ಪತ್ತೆ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಕರಣದಲ್ಲಿ ಮತ್ತೊಂದು ಗ್ಯಾಂಗ್ ಪಾತ್ರವೂ ಕಂಡುಬಂದಿದೆ ಎಂದು ಕಮಿಷನರ್ ತಿಳಿಸಿದ್ದರು. ಇದೀಗ ಎಸ್ಡಿಪಿಐ ಪಕ್ಷದಲ್ಲಿ ಸಕ್ರಿಯವಾಗಿರುವ ಅಕ್ಬರ್ ಸೇರಿದಂತೆ ಮೂವರನ್ನು ಪೊಲೀಸರು ಪತ್ತೆ ಮಾಡಿದ್ದು, ಇವರು ಕಾರ್ಖಾನೆ ಗ್ಯಾಂಗ್ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದರು ಎನ್ನಲಾಗಿದೆ.
ಬಂದರು ಠಾಣೆ ಹೆಡ್ ಕಾನ್ಸ್ ಟೇಬಲ್ ಆಗಿರುವ ಗಣೇಶ್ ಕಾಮತ್ ಮೇಲೆ ಡಿ.16ರಂದು ಹಾಡಹಗಲೇ ನಗರದ ನ್ಯೂಚಿತ್ರಾ ಟಾಕೀಸ್ ಬಳಿ ನಿಂತಿದ್ದಾಗ ಇಬ್ಬರು ಬಂದು ಕತ್ತಿಯಿಂದ ಹಲ್ಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದಕ್ಕೆ ಸಂಬಂಧಿಸಿ ಸರಣಿಯಾಗಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಆರೋಪಿಗಳು ಕಳೆದ ವರ್ಷ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಘಟನೆಗೆ ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಪೊಲೀಸರ ಮೇಲೆ ಪ್ರತೀಕಾರ ತೀರಿಸಬೇಕು ಎಂದು ಪ್ಲಾನ್ ಹಾಕಿದ್ದರು.
ಪೊಲೀಸರ ಮೇಲೆ ರಿವೇಂಜ್ ತೀರಿಸುವ ಮಾಯಾ ಗ್ಯಾಂಗ್ ಸಿಕ್ಕಿಬೀಳುತ್ತಲೇ, ಈಗ ಒಟ್ಟು ಘಟನೆಗೆ ಪ್ರೇರಣೆ ನೀಡಿದ್ದ ತಂಡವನ್ನು ಬಲೆಗೆ ಕೆಡವಲಾಗಿದೆ. ಅಪರಾಧ ಕೃತ್ಯ ಸಾಮಾನ್ಯ. ಆದರೆ, ಒಂದು ಪ್ರಕರಣವನ್ನು ಮುಂದಿಟ್ಟು ಪೊಲೀಸರ ಮೇಲೆ ರಿವೇಂಜ್ ತೀರಿಸುವಂಥ ನಡೆ ಅಪಾಯಕಾರಿ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಕೊಲೆಯತ್ನ ; ಮತ್ತೆ ಮೂವರು ಸಂಚುಕೋರರ ಸೆರೆ
ಪೊಲೀಸರಿಗೆ ಹಲ್ಲೆ ; ಮತ್ತೆ ಆರು ಮಂದಿ ಸೆರೆ, ಮಾಯಾ ಗ್ಯಾಂಗ್ ಗೋಲಿಬಾರ್ ಸಂಚು ಬಯಲು !! ಮುಚ್ಚಿಹೋಗಿದ್ದ ಕೇಸ್ ಮರುಜೀವ
Three arrested in connection with Attack on Police Head Constable near Car street are from Karkana Gang said Mangalore Police Commissioner Shashi Kumar.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm