ಬ್ರೇಕಿಂಗ್ ನ್ಯೂಸ್
03-02-21 05:08 pm Mangalore Correspondent ಕರಾವಳಿ
ಮಂಗಳೂರು, ಫೆ.3: ಕನ್ನಡ ಕಿರುತೆರೆ ಮತ್ತು ತುಳು ಸಿನಿಮಾಗಳಲ್ಲಿ ನಟಿಸುತ್ತಿರುವ ಶೋಭರಾಜ್ ಪಾವೂರು ವಿರುದ್ಧ ಮೋದಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಪೆಟ್ರೋಲ್ ದರ ವಿಪರೀತ ಏರಿಕೆಯಾಗಿರುವ ಬಗ್ಗೆ ಶೋಭರಾಜ್ ಫೇಸ್ಬುಕ್ ನಲ್ಲಿ ಮಾಡಿದ್ದ ಪೋಸ್ಟಿಗೆ ವಿರುದ್ಧವಾಗಿ ಮೋದಿ ಅಭಿಮಾನಿಗಳು ಬೆದರಿಕೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮೋ, ನಮಗೆ ಮೋಸ, ಪೆಟ್ರೋಲ್ ಧಗ ಧಗ ಎಂದು ಶೋಭರಾಜ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ, ಬಜೆಟ್ ನಲ್ಲಿ ಮತ್ತೆ ತೈಲ ದರದ ಮೇಲೆ ಸೆಸ್ ವಿಧಿಸಿರುವುದನ್ನು ವಿರೋಧಿಸಿದ್ದರು. ಈ ಬಗ್ಗೆ ಕರಾವಳಿಯ ಮೋದಿ ಅಭಿಮಾನಿಗಳು ಮೈಪರಚಿಕೊಂಡವರ ರೀತಿ ವರ್ತಿಸಿದ್ದಾರೆ.
ಆಕ್ರೋಶ ಕೇಳಿಬರುತ್ತಿದ್ದಂತೆ, ತನ್ನ ಹಳೆಯ ಪೋಸ್ಟನ್ನು ಡಿಲೀಟ್ ಮಾಡಿದ್ದ ಶೋಭರಾಜ್ ತುಳುವಿನಲ್ಲಿ ಮತ್ತೆ ಪೋಸ್ಟ್ ಮಾಡಿದ್ದರು. ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಅಷ್ಟಕ್ಕೂ ನನ್ನ ಪೋಸ್ಟ್ ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಆದರೆ, ಮೋದಿ ಅಭಿಮಾನಿಗಳ ಆಕ್ರೋಶ ಕಡಿಮೆಯಾಗಿಲ್ಲ. ಕೆಲವರು ನೇರವಾಗಿ ನೋಡಿಕೊಳ್ಳುತ್ತೇವೆಂದು ಬೆದರಿಕೆ ಹಾಕಿದರೆ, ಇನ್ನು ಕೆಲವರು ನಿನ್ನ ಸಿನಿಮಾ ಏನಾಗುತ್ತದೆ ನೋಡುತ್ತಿರು ಅಂತ ಟೀಕೆ ಮಾಡಿದ್ದಾರೆ. ಮತ್ತೆ ಕೆಲವರು ವ್ಯಂಗ್ಯವಾಗಿ ಅಣಕಿಸಿಯೂ ಟೀಕೆ ಮಾಡಿದ್ದಾರೆ.
ಇವೆಲ್ಲ ಆಕ್ರೋಶ ಕೇಳಿಬಂದ ಬಳಿಕ ಶೋಭರಾಜ್ ಫೇಸ್ಬುಕ್ ನಲ್ಲಿ ತಣ್ಣಗಾಗಿದ್ದಾರೆ. ಮಂಗಳೂರು ಮೂಲದ ಪ್ರತಿಭಾವಂತ ನಟನಾಗಿರುವ ಶೋಭರಾಜ್, ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ತುಳು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಹುಬ್ಲಿ ಹುಡ್ಗ , ಮಂಗಳೂರು ಹುಡ್ಗಿ ಧಾರಾವಾಹಿಯಲ್ಲಿ ಹುಡುಗಿಯ ತಂದೆಯ ಪಾತ್ರ ಶೋಭರಾಜ್ ಗೆ ಖ್ಯಾತಿ ತಂದುಕೊಟ್ಟಿತ್ತು.
Mangalore Tulu Actor and Director Shobraj Pavoor Lands into Controversy after his post on Fuel Prices and PM Modi turns into Controversy.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm