ಬ್ರೇಕಿಂಗ್ ನ್ಯೂಸ್
19-02-21 11:20 pm Mangaluru Correspondent ಕರಾವಳಿ
ಮಂಗಳೂರು, ಫೆ.19: ಉಳ್ಳಾಲದಲ್ಲಿ ನಡೆದ ಪಿಎಫ್ಐ ಸಮಾವೇಶದಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಅನೀಸ್ ಅಹ್ಮದ್ ನೀಡಿರುವ ಹೇಳಿಕೆಗೆ ಬಿಜೆಪಿ ವಲಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ. ಆರೆಸ್ಸೆಸ್ ವಿರುದ್ಧ ನೀಡಿರುವ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಅನೀಸ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರಾಮ ಮಂದಿರದ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಿರುವುದಲ್ಲದೆ, ಕೋರ್ಟ್ ಸೂಚನೆಯಂತೆ ಮಂದಿರ ನಿರ್ಮಾಣ ಆಗುತ್ತಿದೆ. ಮಂದಿರದ ವಿರುದ್ಧ ಮಾತನಾಡುವುದು ದೇಶದ್ರೋಹ. ಸಮಾಜ ಒಡೆಯುವ ಕೆಲಸವನ್ನು ಪಿಎಫ್ಐ ನಾಯಕರು ಮಾಡುತ್ತಿದ್ದಾರೆ. ಪಿಎಫ್ಐ ತನ್ನ ನಿಜಬಣ್ಣವನ್ನು ಹಲವು ಬಾರಿ ತೋರಿಸಿದೆ. ಈ ಹೇಳಿಕೆ ಮತ್ತು ಘಟನೆಗೆ ಕಾರಣವಾದ ಸಮಾವೇಶ ಸಂಘಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಆರೆಸ್ಸೆಸ್ ದೇಶಭಕ್ತರ ಸಂಘಟನೆ. ದೇಶದಲ್ಲಿ ದೇಶಭಕ್ತಿಗೆ ಮತ್ತೊಂದು ಹೆಸರು ಆರೆಸ್ಸೆಸ್ ಎಂದು ಹೇಳಿದರು.
ಇದೇ ವೇಳೆ, ಅನೀಸ್ ಅಹ್ಮದ್ ಸಮಾವೇಶದಲ್ಲಿ ನೀಡಿರುವ ಹೇಳಿಕೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಿಂದ ಭಾರೀ ವಿರೋಧ ಕೇಳಿಬಂದಿದೆ. ರಾಮ ಮಂದಿರಕ್ಕಾಗಿ ಆರೆಸ್ಸೆಸ್ ಮಂದಿ ದೇಣಿಗೆ ಕೇಳಲು ಬಂದರೆ ಯಾರು ಕೂಡ ಒಂದು ರೂಪಾಯಿ ಹಣ ಕೊಡಬೇಡಿ. ಅದು ರಾಮ ಮಂದಿರವಲ್ಲ. ಅಲ್ಲಿ ಕಟ್ಟುತ್ತಿರುವುದು ಆರೆಸ್ಸೆಸ್ ಮಂದಿರ. ಮುಸ್ಲಿಮರ ಹಣದಲ್ಲಿ ಒಂದು ಕಲ್ಲು ಇಟ್ಟಿಗೆಯೂ ಮಂದಿರಕ್ಕೆ ಅಡಿಗಲ್ಲಾಗಬಾರದು. ಅಲ್ಲದೆ, ಆರೆಸ್ಸೆಸ್ ಮತ್ತು ಹಿಂದು ಧರ್ಮ ಒಂದೇ ಅಲ್ಲ. ಆರೆಸ್ಸೆಸ್ ಅಂದರೆ ಹಿಂದು ವಿರೋಧಿ. ಆರೆಸ್ಸೆಸ್ ಅನ್ನು ಸಂಪೂರ್ಣ ನಿರ್ಮೂಲನೆಗೆ ನಾವು ಗಲ್ಲಿ ಗಲ್ಲಿಗಳಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅನೀಸ್ ಅಹ್ಮದ್ ಹೇಳಿಕೆ ನೀಡಿದ್ದರು. ಹೇಳಿಕೆಯ ವಿಚಾರದಲ್ಲಿ ಗೃಹ ಸಚಿವರು ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ಉಳ್ಳಾಲ ಠಾಣೆಯಲ್ಲಿ ನಿನ್ನೆಯೇ ಕೇಸು ದಾಖಲಾಗಿತ್ತು.
ಉಳ್ಳಾಲ ಠಾಣೆಯಲ್ಲಿ ಮೂರು ಎಫ್ಐಆರ್
ಸಮಾಜವನ್ನು ವಿಘಟಿಸುವ ರೀತಿ ಮತ್ತು ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವ ರೀತಿ ಹೇಳಿಕೆ ನೀಡಿರುವುದು ಪ್ರಚೋದನೆ ನೀಡಿದಂತಾಗಿದ್ದು, ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡಿರುವುದು, ಪೊಲೀಸರ ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ರೂಟ್ ಮಾರ್ಚ್ ನಡೆಸಿರುವುದು, ಸಾರ್ವಜನಿಕರಿಗೆ ಅಡ್ಡಿಯಾಗುವ ರೀತಿ ರಸ್ತೆ ಬಂದ್ ಮಾಡಿ ರೂಟ್ ಮಾರ್ಚ್ ನಡೆಸಿರುವ ಬಗ್ಗೆ ಪ್ರತ್ಯೇಕವಾಗಿ ಮೂರು ಎಫ್ಐಆರ್ ಗಳನ್ನು ದಾಖಲು ಮಾಡಲಾಗಿದೆ.
ಪ್ರಕರಣದಲ್ಲಿ ಪಿಎಫ್ಐ ಸ್ಥಾಪನಾ ದಿನಾಚರಣೆ ನೆಪದಲ್ಲಿ ಕಾರ್ಯಕ್ರಮ ನಡೆಸಿದ ಪ್ರಮುಖರಾದ ಮುನೀಬ್ ಬೆಂಗ್ರೆ, ಅಬ್ದುಲ್ ಖಾದರ್ ಕುಳಾಯಿ, ಶಹೀದ್ ದೇರಳಕಟ್ಟೆ, ಕಮಾಂಡರ್ ಸಫ್ವಾನ್, ಇಮ್ತಿಯಾಜ್ ಕೋಟೆಪುರ, ರಮೀಜ್ ಕೋಡಿ ಮತ್ತಿತರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Read: ಆರೆಸ್ಸೆಸ್ ನಿರ್ಮೂಲನೆಗೆ ಪ್ರತಿ ಗಲ್ಲಿಯಲ್ಲೂ ವ್ಯಾಕ್ಸಿನ್ ; ಪಿಎಫ್ ಐ ಸಮಾವೇಶದಲ್ಲಿ ಅನೀಸ್ ಅಹ್ಮದ್
Home minister Basavaraj Bommai slammed the PFI for the anti-national speech by Anis Ahmed, pointing out that the speech created a divide in the society. PFI's Anis Ahmed while addressing a rally at Ullal in Mangalore
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm