ಬ್ರೇಕಿಂಗ್ ನ್ಯೂಸ್
22-02-21 08:34 pm Mangaluru Correspondent ಕರಾವಳಿ
ಮಂಗಳೂರು, ಫೆ.22: ಪಿಎಫ್ಐ, ಎಸ್ಡಿಪಿಐಗಳ ಮರುಳು ಮಾಡುವ ಮಾತುಗಳನ್ನು ಕೇಳೋಕೆ ಹೋಗಬೇಡಿ. ಇವರು ಬಿಜೆಪಿಗೆ ಹಿಂದುಗಡೆಯಿಂದ ಸಪೋರ್ಟ್ ಮಾಡುತ್ತಾರೆ. ಮುಸ್ಲಿಮರ ಓಟನ್ನು ಒಡೆಯುವಂತಹ ಹುನ್ನಾರ ಮಾಡುತ್ತಿದ್ದಾರೆ. ಈ ಹುನ್ನಾರಕ್ಕೆ ಯಾರೂ ಕೈ ಜೋಡಿಸಬಾರದು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ನಡೆದ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಪದಗ್ರಹಣ ಮತ್ತು ಭಾವೈಕ್ಯತಾ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿದರು.

ಬೆಂಗಳೂರು ಗಲಭೆ ಸಂದರ್ಭದಲ್ಲಿ ಎಸ್ ಡಿಪಿಐ, ಪಿಎಫ್ಐ ಬ್ಯಾನ್ ಅಂತ ಬಿಜೆಪಿಯವರು ಹೇಳಿದ್ದರು. ಆದರೆ ಬ್ಯಾನ್ ಮಾಡುವ ಕೆಲಸವನ್ನು ಮಾಡಿಲ್ಲ. ಹಲವು ಕಡೆಗಳ ಅಪರಾಧ ಕೃತ್ಯಗಳಲ್ಲಿ ಇವರ ಪಾತ್ರ ಕಂಡುಬಂದಿದೆ ಎನ್ನುತ್ತಾರೆ. ಮತ್ಯಾಕೆ ಬ್ಯಾನ್ ಮಾಡಿಲ್ಲ.. ಸೂಕ್ತ ದಾಖಲೆಗಳಿದ್ದರೆ ಕೂಡಲೇ ಬ್ಯಾನ್ ಮಾಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಬೀಫ್ ತಿನ್ನಬಾರದೆಂದು ಒಂದು ವರ್ಗವನ್ನು ಗುರಿಯಾಗಿಟ್ಟು ಬೀಫ್ ನಿಷೇಧ ಮಾಡಿದ್ರು. ಬೀಫ್ ತಿನ್ನುವುದು ಅವರವರ ಆಹಾರದ ಹಕ್ಕು. ಅದನ್ನು ಪ್ರಶ್ನಿಸುವ ಹಕ್ಕು ಬಿಜೆಪಿಯವರಿಗಿಲ್ಲ. ಆದರೆ, ಗೋಮಾಂಸದ ವಹಿವಾಟಿನಲ್ಲಿ ತೊಡಗಿಸಿಕೊಂಡವರು 90 ಶೇ. ಬಿಜೆಪಿಯವರೇ ಇದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಪಾಲು ಕೊಡಬೇಕು. ನಾನು ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ 3050 ಕೋಟಿ ಅನುದಾನ ನೀಡಿದ್ದೇನೆ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ನೀಡುತ್ತೇನೆ. ಬಿಜೆಪಿಯವರು ಇದ್ದುದನ್ನೂ ಕಡಿತ ಮಾಡಿದ್ದಾರೆ ಎಂದರು. ಆರೆಸ್ಸೆಸ್ ಈ ದೇಶವನ್ನು ಹಿಂದು ರಾಷ್ಟ್ರ ಮಾಡುತ್ತೇವೆ ಎನ್ನುತ್ತಾರೆ. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.
ಆರೆಸ್ಸೆಸ್, ವಿಎಚ್ಪಿಗಿಂತ ಡೇಂಜರಸ್ ಪಿಎಫ್ಐ, ಎಸ್ಡಿಪಿಐ !
ಇದಕ್ಕೂ ಮುನ್ನ ಮಾತನಾಡಿದ ರಾಜ್ಯಸಭೆ ಸದಸ್ಯ ಸಯ್ಯದ್ ನಾಸೀರ್ ಹುಸೇನ್, ಮತ ಧ್ರುವೀಕರಣಕ್ಕಾಗಿ ಮುಸ್ಲಿಮರನ್ನು ಒಡೆದು, ಭಾವನಾತ್ಮಕವಾಗಿ ಓಲೈಸಿಕೊಂಡು ಬರುತ್ತಿರುವ ಪಿಎಫ್ಐ ಮತ್ತು ಎಸ್ಡಿಪಿಐ, ಆರೆಸ್ಸೆಸ್, ವಿಎಚ್ ಪಿಗಿಂತಲೂ ಹೆಚ್ಚು ಅಪಾಯಕಾರಿ. ಕಾಂಗ್ರೆಸ್ ಮುಸ್ಲಿಮರಿಗೆ ಏನು ಕೊಟ್ಟಿದೆ ಎನ್ನುತ್ತಲೇ ಒಂದು ಸಮುದಾಯವನ್ನು ಎತ್ತಿ ಕಟ್ಟುತ್ತಿದೆ. ಸಮವಸ್ತ್ರ ಧರಿಸಿಕೊಂಡು ಈ ರೀತಿಯ ಪ್ರಶ್ನೆ ಕೇಳುವಷ್ಟು ನಿಮ್ಮನ್ನು ಬೆಳೆಸಿದ್ದು ಈ ದೇಶದ ಸಂವಿಧಾನ. ಬೇರೆಲ್ಲೂ ಇಲ್ಲದ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ಅಪೂರ್ವ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಬಿಹಾರ, ಕಾಶ್ಮೀರದಿಂದ ಹಿಡಿದು ಮಹಾರಾಷ್ಟ್ರ, ಪಾಂಡಿಚೇರಿ, ಗುಲಾಂ ನಬಿ ಆಜಾದ್, ಖುರ್ಷಿದ್ ಹೀಗೆ ಹಲವಾರು ಮುಸ್ಲಿಂ ಮುಖ್ಯಮಂತ್ರಿಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಭಾವನಾತ್ಮಕವಾಗಿ ಸಮುದಾಯವನ್ನು ಮಂಕುಬೂದಿ ಎರಚುವುದು, ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವುದು, ವಿಷಬೀಜ ಬಿತ್ತುವುದು ತುಂಬ ಡೇಂಜರಸ್. ಇದು ನಮಗೆ ಬಿಹಾರದಲ್ಲಿ ಅನುಭವಕ್ಕೆ ಬಂದಿದೆ ಎಂದು ಹೇಳಿದರು.

ಮಾಜಿ ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಹಿಂದುತ್ವದ ಹಿಂದೆ ಬಿದ್ದವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಗ್ವಾಲಿಯರ್ ನ ಭಕ್ತೇಶ್ವರ ಎಂಬಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಬಂಧಿಸಲ್ಪಟ್ಟ ವಾಜಪೇಯಿ, ಕ್ಷಮೆ ಯಾಚನೆ ಪತ್ರ ಬರೆದು ಜೈಲಿನಿಂದ ಹೊರಬಂದಿದ್ದರು. ಸಾವರ್ಕರ್ ಕೂಡ ಇದೇ ರೀತಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಜೈಲಿನಿಂದ ಬಂದಿದ್ದರು. ಇಂಥವರು ಈಗ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ. ಇವರಿಗೆ ದೇಶದ ಸಂವಿಧಾನ, ತ್ರಿವರ್ಣದ ಬಗ್ಗೆ ಗೌರವವಿಲ್ಲ. ನಾಗಪುರದಲ್ಲಿ 50 ವರ್ಷಗಳ ಕಾಲ ತ್ರಿವರ್ಣ ಹಾರಿಸಿಯೇ ಇಲ್ಲ. ಅಂಬೇಡ್ಕರ್ ಸಂವಿಧಾನ ಒಪ್ಪಲ್ಲ ಎಂದವರು ಅದೇ ಸಂವಿಧಾನದಡಿ ಅಧಿಕಾರಕ್ಕೆ ಬಂದಿದ್ದಾರೆ. ಜೊತೆಗೇ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಈಗ ಮೀಸಲು ಹೋರಾಟದ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮುಂದೆ ಈ ರೀತಿಯ ಮೀಸಲಾತಿಯೇ ಬೇಡ ಎಂಬ ಎನ್ನುತ್ತಾರೆ. ಈಗಿನ ಹೋರಾಟದ ಹಿಂದೆ ದಲಿತರ, ಅಲ್ಪಸಂಖ್ಯಾತರ ಮೀಸಲು ರದ್ದು ಮಾಡುವ ಹುನ್ನಾರ ಇದೆ ಎಂದು ಟೀಕಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ ಖಾದರ್, ಅಭಯಚಂದ್ರ ಜೈನ್ ಸೇರಿದಂತೆ ಮಾಜಿ ಶಾಸಕರು, ಕಾಂಗ್ರೆಸ್ ಪ್ರಮುಖರು ಪಾಲ್ಗೊಂಡಿದ್ದರು.
Don't trust SDPI and PFI they are the major support of BJP warned congress leader Siddaramaiah to Muslims in Mangalore.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm