ಕಡಬ ; ಹೊಳೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಶವ ಪತ್ತೆ

23-02-21 03:26 pm       Mangalore Correspondent   ಕರಾವಳಿ

ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಶವ ಪತ್ತೆಯಾಗಿದೆ. 

ಕಡಬ, ಫೆ.23 : ಇಲ್ಲಿನ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಶವ ಮಂಗಳವಾರ ಪತ್ತೆಯಾಗಿದೆ. 

ಮೃತದೇಹದ ಕೈಯಲ್ಲಿ ಕನ್ನಡಕ ಹಾಗೂ ಅಲ್ಲಿಯೇ ಸಮೀಪ ಚಪ್ಪಲಿ ಪತ್ತೆಯಾಗಿದೆ. ಸುಮಾರು 65 ವಯಸ್ಸು ಆಗಿರುವ ಬಗ್ಗೆ ಸ್ಥಳೀಯರು ಅಂದಾಜಿಸಿದ್ದಾರೆ. ಇಂದು ಬೆಳಗ್ಗೆ ಈ ಕಡೆಗೆ ಬಂದಿದ್ದ ಮಹಿಳೆ ಹೊಳೆಗೆ ಇಳಿದ ವೇಳೆ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. 

ಸ್ಥಳಕ್ಕೆ ಆಗಮಿಸಿದ ಕಡಬ ಎಸ್ ಐ ರುಕ್ಮಯ ನಾಯ್ಕ್ ಸ್ವತಃ ನೀರಿಗೆ ಇಳಿದು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

The unidentified body of a woman found in the lake at Kadaba. The Kadaba police are now investigating the case.