ಬ್ರೇಕಿಂಗ್ ನ್ಯೂಸ್
23-02-21 03:53 pm Mangalore Correspondent ಕರಾವಳಿ
ಸುಳ್ಯ, ಫೆ.23: ಸಂಸದರ ಆದರ್ಶ ಗ್ರಾಮ ಎಂಬ ಖ್ಯಾತಿ ಇರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಮೂಲಸೌಕರ್ಯದ್ದೇ ಕೊರತೆ. ಬಹಳಷ್ಟು ಕಡೆ ರಸ್ತೆ, ನೀರಿನ ಸಮಸ್ಯೆ ಇದ್ದರೆ, ಒಂದು ಮನೆಗಂತೂ ವಿದ್ಯುತ್ ದೀಪವೇ ಇನ್ನೂ ತಲುಪಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ, ಸ್ಥಳೀಯ ಗಣ್ಯರ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಾಗಿ ಆ ಮನೆಯ ಮಕ್ಕಳು ಇಂದಿಗೂ ಚಿಮಿಣಿ ದೀಪದಲ್ಲಿ ಪುಸ್ತಕ ಓದುವ ದುಸ್ಥಿತಿ.
ಬಳ್ಪ ಗ್ರಾಮದ ಅರ್ಗುಡಿ ಎಂಬಲ್ಲಿನ ನಿವಾಸಿ ಕುಶಾಲಪ್ಪ ಗೌಡ ಮತ್ತು ಕಮಲ ದಂಪತಿ ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಿದ್ದಾರೆ. ಹಿರಿಯ ಪುತ್ರ ಹತ್ತನೇ ಕ್ಲಾಸಲ್ಲಿದ್ದರೆ, ಕಿರಿಯವ ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ. ಊರೆಲ್ಲಾ ವಿದ್ಯುತ್ ದೀಪ, ಝಗಮಗಿಸುವ ಬೀದಿ ದೀಪಗಳಿದ್ದರೆ ಆ ಮನೆಯಲ್ಲಿ ಮಾತ್ರ ಇಂದಿಗೂ ಕಗ್ಗತ್ತಲು. ಡೀಸೆಲ್ ಬಳಸಿ ಉರಿಸುವ ಚಿಮಿಣಿ ದೀಪಗಳನ್ನು ಉರಿಸಿಯೇ ಮಕ್ಕಳು ಓದಬೇಕಾದ ಸ್ಥಿತಿ.
ಒಂದೆಡೆ ಡೀಸೆಲ್ ದೀಪದಿಂದ ಹೊರಸೂಸುವ ಹೊಗೆ, ಮತ್ತೊಂದೆಡೆ ತಿಂಗಳಿಗೆ ನಾಲ್ಕು ಲೀಟರಿನಷ್ಟು ಬರೀಯ ಚಿಮಣಿ ದೀಪಕ್ಕಾಗಿ ಉರಿದು ಖರ್ಚಾಗುವ ಡೀಸೆಲ್. ಎರಡು ಕೂಡ ಬಡಪಾಯಿ ಕುಶಾಲಪ್ಪ ಗೌಡರ ಕೈ ಮತ್ತು ಆರೋಗ್ಯವನ್ನು ಸುಡುತ್ತಿದೆ. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲಿನಲ್ಲಿ ಆನ್ ಲೈನ್ ಕ್ಲಾಸ್, ಸರಕಾರಿ ಶಾಲೆಗಳ ಮಕ್ಕಳಿಗೆ ಟೀವಿಯಲ್ಲಿ ತರಗತಿಗಳು ನಡೆಯುತ್ತಿದ್ದರೆ ಈ ಮನೆಯ ಮಕ್ಕಳಿಗೆ ಅದ್ಯಾವ ಭಾಗ್ಯವೂ ಇಲ್ಲ.
ಬಳ್ಪ ಗ್ರಾಮಕ್ಕೆ ಸಂಸದರ ಆದರ್ಶ ಗ್ರಾಮವೆಂಬ ಕೋಡು ಇದ್ದರೂ, ಅಲ್ಲಿನ ನಿವಾಸಿ ಕುಶಾಲಪ್ಪ ಗೌಡರ ಮನೆಗೆ ಇನ್ನೂ ಕನಿಷ್ಠ ವಿದ್ಯುತ್ ಸೌಕರ್ಯ ತಲುಪಿಲ್ಲ. ಹಾಗೆಂದು ಕುಶಾಲಪ್ಪ ಗೌಡರು ಸುಮ್ಮನೆ ಕುಳಿತಿಲ್ಲ. ತಮ್ಮ ಮನೆಗೆ ವಿದ್ಯುತ್ ಸೌಲಭ್ಯ ಮಾಡಿಸಬೇಕೆಂದು ಕಳೆದ ಹತ್ತು ವರ್ಷಗಳಲ್ಲಿ 15ಕ್ಕೂ ಹೆಚ್ಚು ಇಲಾಖೆಗಳಿಗೆ ಮನವಿ ನೀಡಿದ್ದಾರೆ. ಪಂಚಾಯತಿನಿಂದ ಹಿಡಿದು ವಿದ್ಯುತ್ ಕಚೇರಿ ಸೇರಿ ಹಲವಾರು ಕಡೆ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ತಮ್ಮ ನೋವು ಹೇಳಿಕೊಂಡಿದ್ದಾರೆ. ವಿದ್ಯುತ್ ಇಲಾಖೆಯಂತೂ ಇವರ ಮನವಿ ಪರಿಗಣಿಸಿ ಸಂಪರ್ಕ ನೀಡುವುದಕ್ಕೆ ಒಪ್ಪಿಗೆಯನ್ನೂ ನೀಡಿತ್ತು.
ಆದರೆ, ಅಲ್ಲಿನ ಸ್ಥಿತಿ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವಂತಿದೆ. ದೊಡ್ಡವರ ಅಹಂಕಾರ, ಉಳ್ಳವರ ಕಾರುಬಾರಿನ ಮುಂದೆ ಸ್ಥಳೀಯ ಪಂಚಾಯತ್ ಆಡಳಿತ, ಅಧಿಕಾರಿಗಳು ಮಂಡಿಯೂರಿದ್ದಾರೋ ಏನೋ ಅನ್ನುವ ಅನುಮಾನ ಮೂಡುತ್ತಿದೆ. ಯಾಕಂದ್ರೆ, ಕಳೆದ ಹತ್ತಾರು ವರ್ಷಗಳಿಂದ ಅಲ್ಲಿನ 75 ಸೆಂಟ್ಸ್ ಜಾಗದಲ್ಲಿ ಕುಶಾಲಪ್ಪ ಗೌಡರು ವಾಸವಿದ್ದು ನಾಲ್ಕು ಸುತ್ತಲೂ ಖಾಸಗಿಯವರ ಅಡಿಕೆ ತೋಟ ಇದೆ. ಹೀಗಾಗಿ ತಮ್ಮ ತೋಟದ ಮೂಲಕ ವಿದ್ಯುತ್ ತಂತಿ ಎಳೆಯುವುದಕ್ಕೆ ಖಾಸಗಿ ಮಂದಿ ಅಡ್ಡಿಯಾಗಿದ್ದಾರಂತೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಸ್ಥರು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನೋ ಮಾಹಿತಿಯನ್ನು ಕುಶಾಲಪ್ಪ ಗೌಡರು ನೀಡಿದ್ದಾರೆ.
ನಿಜಕ್ಕಾದರೆ, ಯಾವುದೇ ಮೂಲಸೌಕರ್ಯ ನೀಡುವುದಕ್ಕೆ ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸುವಂತಿಲ್ಲ. ಯಾವುದೇ ಖಾಸಗಿ ವ್ಯಕ್ತಿಯ ಮನೆಗಾಗಲೀ, ಜಮೀನಿಗಾಗಲೀ ವಿದ್ಯುತ್ ಸಂಪರ್ಕ ಇನ್ನೊಬ್ಬ ಖಾಸಗಿ ವ್ಯಕ್ತಿಯ ಜಾಗದ ಮೂಲಕವೇ ಬರಬೇಕು. ಹೀಗಿರುವಾಗ ವಿದ್ಯುತ್ ತಂತಿ ಎಳೆಯಲು ಬಿಡುವುದಿಲ್ಲ ಎಂಬ ಉದ್ಧಟತನ ತೋರುವುದು ಕಾನೂನಿಗೆ ವಿರುದ್ಧ. ಈ ವಿಚಾರದಲ್ಲಿ ಕುಶಾಲಪ್ಪ ಗೌಡರು ಬಡಪಾಯಿ ಆಗಿದ್ದರೆ, ಅಲ್ಲಿನ ಅಧಿಕಾರಸ್ಥರು, ಜನಪ್ರತಿನಿಧಿಗಳು ನಿರಕ್ಷರ ಕುಕ್ಷಿಗಳು ಅಲ್ಲ ತಾನೇ.. ಬಡವನ ಕಷ್ಟಕ್ಕೆ ಮರುಗುವ ಕೆಲಸ ಪಂಚಾಯಿತಿ ಪ್ರತಿನಿಧಿಗಳಿಂದ ಆಗಬೇಕು. ಸುತ್ತ ಇರುವ ಖಾಸಗಿ ವ್ಯಕ್ತಿಗಳು ಮತ್ತು ಕುಶಾಲಪ್ಪ ಗೌಡರ ನಡುವಿನ ವಿವಾದ ಏನೇ ಇದ್ದರೂ, ವಿದ್ಯುತ್ ಸಂಪರ್ಕ ನೀಡುವುದಕ್ಕೆ ಅದು ಅಡ್ಡಿಯಾಗಬಾರದು. ಆದರ್ಶ ಗ್ರಾಮದ ಹೆಗ್ಗುರುತಿನಲ್ಲಿ ವಿದ್ಯುತ್ ತಲುಪದ ಮನೆ ಕಪ್ಪು ಚುಕ್ಕೆಯಾಗಿ ಉಳಿಯಬಾರದು.
Video:
A House in Balapa has no current for many years. Though they have applied tot electricity yet concerned authorities are showing negligence. Tow sons of this house utilise diesel for their studies.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm