ಬ್ರೇಕಿಂಗ್ ನ್ಯೂಸ್
23-02-21 08:48 pm Udupi Correspondent ಕರಾವಳಿ
ಉಡುಪಿ, ಫೆ.23: ಇಲ್ಲಿನ ಕಾಪು ತಾಲೂಕಿನ ಉಚ್ಚಿಲ ಪೇಟೆಯಲ್ಲಿ ಎರಡು ಖಾಸಗಿ ಬಸ್ ಗಳ ಚಾಲಕರು ಟೈಂ ಕೀಪಿಂಗ್ ಬಗ್ಗೆ ಗಲಾಟೆ ಮಾಡಿಕೊಂಡಿದ್ದಾರೆ.
ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ವಿಶಾಲ್ ಎಂಬ ಖಾಸಗಿ ಬಸ್ಸು ಮತ್ತು ನವದುರ್ಗಾ ಬಸ್ಸಿನ ಚಾಲಕರು ಹೊಡೆದಾಡಿಕೊಂಡಿದ್ದಾರೆ. ಪಡುಬಿದ್ರಿಯಿಂದ ಬಸ್ ಹೊರಡುವಾಗ ಸಮಯದಲ್ಲಿ ಏರುಪೇರಾಗಿತ್ತು. ನವದುರ್ಗಾ ಬಸ್ಸು ಬರುತ್ತಿದ್ದಾಗ, ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಎಂಬಾತ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ ಎಂಬವರಿಗೆ ಥಳಿಸಿದ್ದಾನೆ.




ಈ ಬಸ್ ಗಳ ಹಿಂಬದಿಯಲ್ಲೇ, ಕಾಪು ಠಾಣಾಧಿಕಾರಿ ರಾಘವೇಂದ್ರ ತಮ್ಮ ಜೀಪಿನಲ್ಲಿದ್ದರು. ಈ ಘಟನೆಯ ಬಗ್ಗೆ ಅವರು ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಅವರಿಗೆ ಮಾಹಿತಿ ನೀಡಿದ್ದು ಕೂಡೇ ದೀಲಿಪ್ ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಎರಡೂ ಬಸ್ಸನ್ನು ಸೀಜ್ ಮಾಡಿ ಇಬ್ಬರು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಕೆಲದಿನಗಳ ಹಿಂದೆ ಎರಡು ಬಸ್ಸಿನ ಚಾಲಕರು ಕಾಪು ಮಾರಿಗುಡಿಯ ಹತ್ತಿರ ಕಬ್ಬಿಣದ ರಾಡು ಹಿಡಿದು ಹೊಡೆದಾಡುವ ಮಟ್ಟಕ್ಕೆ ಇಳಿದಿದ್ದು, ಅದರ ವಿಡಿಯೋ ಭಾರೀ ವೈರಲ್ ಆಗಿತ್ತು. ಆ ರೀತಿಯ ಘಟನೆ ಮರುಕಳಿಸಬಾರದೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
Two Bus drivers found fighting on the highway in Kapu, Udupi over timing issues. The Kapu police have seized both the buses and have booked case on the drivers.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm