ಬ್ರೇಕಿಂಗ್ ನ್ಯೂಸ್
24-02-21 11:39 am Mangalore Correspondent ಕರಾವಳಿ
ಉಳ್ಳಾಲ, ಫೆ.24: ತೊಕ್ಕೊಟ್ಟಿನ ಒಳಪೇಟೆಯ ಮಾರುಕಟ್ಟೆ ಬಳಿ ರೈಲ್ವೇ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮೂರು ಬೀಫ್ ಸ್ಟಾಲ್ ಗಳನ್ನು ತೆರವುಗೊಳಿಸುವಂತೆ ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಪ್ರಖಂಡವು ಪೊಲೀಸರಿಗೆ ಮತ್ತೆ ಆಗ್ರಹಿಸಿದೆ.
ಕಳೆದ ಜನವರಿ ತಿಂಗಳಲ್ಲಿ ಇದೇ ಮೂರು ಬೀಫ್ ಸ್ಟಾಲ್ ಗಳ ತೆರವಿಗೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳವು ಉಳ್ಳಾಲ ಠಾಣೆಗೆ ದೂರು ನೀಡಿದ ಬೆನ್ನಲ್ಲೆ ಜನವರಿ 8 ರ ರಾತ್ರಿ ದುಷ್ಕರ್ಮಿಯೊಬ್ಬ ಬೀಫ್ ಸ್ಟಾಲ್ ಗಳಿಗೆ ಬೆಂಕಿಹಚ್ಚಿದ ಪ್ರಕರಣ ತೀವ್ರ ಸ್ವರೂಪ ಪಡೆದಿತ್ತು. ಒತ್ತಡಕ್ಕೆ ಬಿದ್ದ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಬೆಂಕಿ ಇಟ್ಟ ಆರೋಪಿಯನ್ನು ಬಂಧಿಸಿದ್ದರು.
ಸುಟ್ಟು ಹೋಗಿದ್ದ ಬೀಫ್ ಸ್ಟಾಲ್ ಗಳನ್ನು ಉಳ್ಳಾಲ ನಗರಸಭೆ ಆಡಳಿತವು ಮತ್ತೆ ಪುನರ್ ನಿರ್ಮಿಸಿ ಕೊಟ್ಟಿದ್ದು ಇದೀಗ ಬೀಫ್ ವ್ಯವಹಾರ ನಡೆಯುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದು ಈ ಬಗ್ಗೆ ಹಲವು ಮಾನದಂಡಗಳನ್ನು ಸರಕಾರ ವಿಧಿಸಿದೆ. ಆದರೆ ಉಳ್ಳಾಲ ವ್ಯಾಪ್ತಿಯಲ್ಲಿ ಈ ಕಾನೂನು ಎಲ್ಲಿಯೂ ಅನ್ವಯವಾಗದೆ ಅಕ್ರಮ ಕಸಾಯಿಖಾನೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ.
ತೊಕ್ಕೊಟ್ಟು ಒಳಪೇಟೆಯ ಮೂರು ಬೀಫ್ ಸ್ಟಾಲ್ ಗಳು ಪರವಾನಿಗೆ ಇಲ್ಲದೆ ವ್ಯವಹಾರ ನಡೆಸುತ್ತಿದ್ದರೂ ಕ್ರಮ ಯಾಕಿಲ್ಲ ಎನ್ನುವ ಪ್ರಶ್ನೆಯನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ. ಪೊಲೀಸರು ಒಳಪೇಟೆಯ 3 ಅಕ್ರಮ ಕಸಾಯಿ ಖಾನೆಗಳು ಮತ್ತು ಇಲ್ಲಿಗೆ ಅಕ್ರಮವಾಗಿ ಗೋಮಾಂಸ ಸರಬರಾಜು ಮಾಡುವ ವಾಹನ ಮತ್ತು ಕಸಾಯಿಖಾನೆಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳವು ಮತ್ತೆ ಆಗ್ರಹಿಸಿದ್ದು ಉಳ್ಳಾಲ ಪೊಲೀಸರಿಗೆ ಮನವಿ ನೀಡಿದ್ದಾರೆ.
ಈ ಬಗ್ಗೆ ಲಿಖಿತ ದೂರನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಅವರಿಗೆ ನೀಡಿದ್ದಾರೆ. ಬಜರಂಗದಳ ಜಿಲ್ಲಾ ಸಹ ಗೋರಕ್ಷ ಪ್ರಮುಖ್ ಪವಿತ್ರ ಕೆರೆಬೈಲು, ಬಜರಂಗದಳ ಪ್ರಖಂಡ ಸಂಚಾಲಕ ಅರ್ಜುನ್, ಪ್ರಖಂಡ ಗೋರಕ್ಷ ಪ್ರಮುಖ್ ರಕ್ಷಿತ್, ಸಾಪ್ತಾಹಿಕ ಪ್ರಮುಖ್ ಕೌಶಿಕ್ ಉಪಸ್ಥಿತರಿದ್ದರು.
ತೊಕ್ಕೊಟ್ಟಿನಲ್ಲಿ ಅಕ್ರಮ ಬೀಫ್ ಸ್ಟಾಲ್ ; ತೆರವಿಗೆ ಆಗ್ರಹಿಸಿ ಬಜರಂಗದಳ ದೂರು
Three Unauthorised beef staffs in Ullal found VHP activists demand serious action against them. A case has been filed at Ullal police station in Mangalore.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm