ಬ್ರೇಕಿಂಗ್ ನ್ಯೂಸ್
25-02-21 07:52 pm Mangaluru correspondant ಕರಾವಳಿ
ಉಳ್ಳಾಲ, ಫೆ.25: ಕಾಯಿ ಎಳತಾದರೂ ದೊಡ್ಡದಾಗಿ ನೇತಾಡುತ್ತಿರುವ ಅಸ್ಸಾಂ ತಳಿಯ ಸೋರೆ ಕಾಯಿಗಳು. ಹತ್ತಿರದಲ್ಲೇ ಇರೋ ಚಪ್ಪರದಲ್ಲಿ ಎಣಿಕೆಗೆ ಸಿಗದಷ್ಟು ಬೆಳೆದು ತೂಗುತ್ತಿರುವ ಹೀರೆ ಕಾಯಿಗಳು. ಅದರ ಸುತ್ತಲೂ ಹರಿವೆ, ಬದನೆ, ಬೆಂಡೆಕಾಯಿ ಮೂಲಂಗಿ, ಟೊಮೆಟೋ, ಮುಳ್ಳು ಸೌತೆಗಳ ಗೊಂಚಲು ಕಣ್ಮನ ಸೆಳೆಯುತ್ತದೆ.
ಉಳ್ಳಾಲದ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ನೋಡುಗರ ಕಣ್ಣಿಗೆ ಹಸಿರ ತಂಪು ನೀಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕೂಲಿ ಕಾರ್ಮಿಕರು ಸೇರಿ ಇಂತಹ ಸಾವಯವ ಕೃಷಿಯನ್ನು ನಡೆಸಿ ಸಫಲತೆ ಕಂಡಿದ್ದಾರೆ.


14 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಗೇರು ಮೂಲ ಕೃಷಿಯಾಗಿದ್ದರೂ ಖಾಲಿ ಇರುವ ಜಾಗದಲ್ಲಿ ತರಕಾರಿಗಳ ಕೈ ತೋಟವನ್ನು ಬೆಳೆಯಲಾಗಿದೆ. ಅಸ್ಸಾಂ ಗಡಿ ಪ್ರದೇಶದಲ್ಲಿ ಬೆಳೆಯುವ ಸೋರೆ ಕಾಯಿಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಅಸ್ಸಾಂ ತಳಿಯ ಸೋರೆ ಕಾಯಿಗಳನ್ನು ಇಲ್ಲಿ ಬೆಳೆದಿದ್ದು ಎಳೆಯದಾದರೂ ಅದರ ಗಾತ್ರ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಚೈನಾದಲ್ಲೂ ಅಸ್ಸಾಂ ತಳಿಯ ಸೋರೆ ಕಾಯಿ ಬಹಳ ಫೇಮಸ್ ಅಂತೆ. ಜೊತೆಗೆ ಹತ್ತಿರದ ಬೃಹತ್ ಚಪ್ಪರದಲ್ಲಿ ಎಣಿಕೆಗೂ ಸಿಗದಷ್ಟು ಲೋಕಲ್ ಹೀರೆಕಾಯಿಗಳು, ಟೊಮೆಟೊ, ಮೂಲಂಗಿ, ಮುಳ್ಳು ಸೌತೆ, ಬದನೆ, ಬೆಂಡೆಕಾಯಿ ಕೈತೋಟಗಳು ಜನರನ್ನ ಕೃಷಿಯತ್ತ ಆಕರ್ಷಿಸುವಂತೆ ಮಾಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಸೇರಿ ತೋಟವನ್ನು ಬಹಳ ಚೆನ್ನಾಗಿ ಮಾಡಿದ್ದು ನೀರು, ಗೊಬ್ಬರಗಳನ್ನು ಹಾಕಿ ಸಲಹಿದ ಪರಿಣಾಮ ಸಮೃದ್ಧ ತರಕಾರಿ ಬೆಳೆದಿದ್ದಾರೆ.

ತೋಟದಲ್ಲಿ ಬೆಳೆದ ತರಕಾರಿಗಳನ್ನು ಕೇಂದ್ರದ 25 ಸಿಬ್ಬಂದಿಗಳು, ಕೂಲಿ ಕಾರ್ಮಿಕರಿಗೆ ಹಂಚಿ ಉಳಿದ ತರಕಾರಿಗಳಿಂದ ಸಿಗುವ ಬೀಜಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಕೇಂದ್ರಕ್ಕೆ ಅನೇಕ ಕೃಷಿಕರು ಭೇಟಿ ನೀಡುತ್ತಿರುತ್ತಾರೆ. ಅವರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕೈ ತೋಟವನ್ನು ನಿರ್ಮಿಸಲಾಗಿದೆ.


ಮಂಗಳೂರು ನಗರ ಅಂತೂ ಹಸಿರು ಮುಕ್ತವಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಾದರೂ ಎಲ್ಲರೂ ಈ ರೀತಿ ತರಕಾರಿಗಳನ್ನಾದರೂ ಬೆಳೆಯಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬಲು ಕೈತೋಟ ನಿರ್ಮಿಸಲಾಗಿದೆ. ಅಲ್ಲದೆ ತಾರಸಿ ತೋಟದಲ್ಲೂ ಥರ್ಮಾಕೋಲಿನ ಪೆಟ್ಟಿಗೆಗಳಲ್ಲಿ ಯಾವ ರೀತಿ ತರಕಾರಿಗಳನ್ನು ಬೆಳೆಯಬಹುದೆಂದು ಇಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.
A plantation program was held at Ullal, Mangalore. Hundreds thronged to the venue to see various vegetables grown in different states of India.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm