ಕೇರಳಕ್ಕೆ ಅಕ್ರಮ ಮರಳು ; ತಲಪಾಡಿ ಟೋಲ್ ಸಿಬಂದಿಯದ್ದೇ ಸಾಥ್ ! ದಂಧೆಗೆ ಬ್ರೇಕ್ ಹಾಕಲು ತಂತ್ರಜ್ಞಾನ ! 

28-02-21 11:36 pm       Mangaluru Correspondent   ಕರಾವಳಿ

ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಅಕ್ರಮ ಮರಳು ಸಾಗಣೆಯ ವಿರುದ್ಧ ಸಮರ ಸಾರಿದ್ದಾರೆ.‌ ಉಳ್ಳಾಲ, ಕೊಣಾಜೆಯ ಗಡಿಭಾಗದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಸಾಗಾಟಕ್ಕೆ ಬ್ರೇಕ್ ಹಾಕಲು ತಯಾರಿ ನಡೆಸಿದ್ದಾರೆ. 

ಮಂಗಳೂರು, ಫೆ.28: ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಅಕ್ರಮ ಮರಳು ಸಾಗಣೆಯ ವಿರುದ್ಧ ಸಮರ ಸಾರಿದ್ದಾರೆ.‌ ಉಳ್ಳಾಲ, ಕೊಣಾಜೆಯ ಗಡಿಭಾಗದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಸಾಗಾಟಕ್ಕೆ ಬ್ರೇಕ್ ಹಾಕಲು ತಯಾರಿ ನಡೆಸಿದ್ದಾರೆ. 

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಡಿಸಿಪಿ ಹರಿರಾಮ್ ಶಂಕರ್, ಗಡಿಭಾಗದಲ್ಲಿ ಅಕ್ರಮ ಮರಳು ಸಾಗಾಟ ವ್ಯವಸ್ಥಿತವಾಗಿ ನಡೆಯುತ್ತದೆ. ಪೊಲೀಸರು ಇಲ್ಲದ ಸಂದರ್ಭದಲ್ಲಿ ಟೋಲ್ ಗೇಟ್, ಚೆಕ್ ಪೋಸ್ಟ್ ಗಳಿಂದಲೇ ಮರಳಿನ ಟಿಪ್ಪರ್ ಲಾರಿಯನ್ನು ಸಾಗಿಸಲಾಗುತ್ತದೆ. ಇದಕ್ಕಾಗಿ ಅಕ್ರಮ ಮರಳು ದಂಧೆಕೋರರು ತಲಪಾಡಿ ಚೆಕ್​ಪೋಸ್ಟ್​ ಪಕ್ಕದ ಖಾಲಿ ಮೈದಾನಗಳಲ್ಲಿ ಮರಳನ್ನು ರಾಶಿ ಹಾಕಿಡುತ್ತಾರೆ. ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರು ಇಲ್ಲದ ಸಂದರ್ಭಗಳಲ್ಲಿ ಮರಳನ್ನು ತಕ್ಷಣ ಗಡಿ ಭಾಗದಿಂದ ಕೇರಳಕ್ಕೆ ಸಾಗಾಟ ಮಾಡುತ್ತಾರೆ. ಇದು ಬಹಳ ಯೋಜನಾಬದ್ಧ ಪ್ರಕ್ರಿಯೆಯಾಗಿದ್ದು, ಟೋಲ್​ಗೇಟ್ ಸಿಬ್ಬಂದಿಯೂ ಈ ಕೃತ್ಯದಲ್ಲಿ‌ ಶಾಮೀಲಾಗಿದ್ದಾರೆ. ಪೊಲೀಸರು ನಸುಕಿನ ಹೊತ್ತಲ್ಲಿ ಟೋಲ್ ಗೇಟ್ ಬಳಿಯಿಂದ ನಿರ್ಗಮಿಸುವ ವಿಚಾರವನ್ನು ದಂಧೆಕೋರರಿಗೆ ರವಾನಿಸುತ್ತಿದ್ದರು ಎಂದು ಹೇಳಿದ್ದಾರೆ. 

ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗುತ್ತದೆ. ಅದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಜೊತೆ ಚರ್ಚಿಸಿ, ತಂತ್ರಜ್ಞಾನದ ನೆರವು ಪಡೆಯಲಾಗುವುದು. ಕೊಣಾಜೆಯಲ್ಲಿ ಮೊದಲೇ ಸಿಬಂದಿ ಕೊರತೆಯಿದ್ದು ಇದಕ್ಕೆಂದು ಮತ್ತೆ ಸಿಬಂದಿ ನೀಡಲು ಸಾಧ್ಯವಾಗಲ್ಲ.‌ ಅದಕ್ಕಾಗಿ ಜಿಪಿಎಸ್ ಇನ್ನಿತರ ತಂತ್ರಜ್ಞಾನ ಮೂಲಕ ಮರಳಿನ ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಹೇಳಿದರು.‌

ಮೊನ್ನೆ ಕಾರ್ಯಾಚರಣೆ ನಡೆದಾಗ ಎರಡು ಕಾರುಗಳು ಲಾರಿಗಳಿಗೆ ಎಸ್ಕಾರ್ಟ್ ಮಾಡುತ್ತಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸರು ಕಾರನ್ನು ಬೆನ್ನಟ್ಟಿದ್ದಾರೆ. ಈ ಸಂದರ್ಭ ಪೊಲೀಸರನ್ನು ದೂಡಿ ಹಾಕಿ, ಕಾರಿನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಏಳು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಮರಳು ಸಾಗಿಸುತ್ತಿದ್ದ ಲಾರಿ ಮತ್ತು ಮರಳನ್ನು ವಶಕ್ಕೆ ಪಡೆಯಲಾಗಿದೆ.

ತಲಪಾಡಿ ಗಡಿಯಲ್ಲಿ ಕಮಿಷನರ್ ಜೋಡಿಯ  ರಹಸ್ಯ ಕಾರ್ಯಾಚರಣೆ ; ಸ್ಕೂಟರಿನಲ್ಲಿ ಹೋಗಿ  ಅಕ್ರಮ ಮರಳು ಸಾಗಣೆ ಪತ್ತೆ , ಮೂವರು ವಶಕ್ಕೆ


Talapady toll gate staff involved behind illegal sand transportation states Mangalore DCP Hariram Shanker. A suo motu case has been registered by the police against 10 people over alleged illegal sand transporation after a truck was seized at Talapady.