ಬ್ರೇಕಿಂಗ್ ನ್ಯೂಸ್
06-03-21 05:40 pm Mangalore Correspondent ಕರಾವಳಿ
ಮಂಗಳೂರು, ಮಾ.6: ಗೋವಿನ ಹೆಸರಲ್ಲಿ ರಾಜಕೀಯ ಮಾಡಿ, ಆಡಳಿತಕ್ಕೆ ಬಂದ ಬಿಜೆಪಿಯವರೇ ಈಗ ನಿಮ್ಮ ಗೋ ಪ್ರೇಮ ಎಲ್ಲಿ ಹೋಯಿತು ? ಗೋವಿನ ರಕ್ಷಣೆಗೆ ಕಾನೂನು ತಂದಿರುವ ನೀವು, ಗೋಶಾಲೆ ಒಂದನ್ನು ಒಡೆದು ಹಾಕಿದ್ದು ಸರಿಯಾ.. ನಿಮಗೆ ಗೋವಿನ ಮೇಲೆ ಕಾಳಜಿ ಇದೆಯಾ.. ನೀವು ಹಿಂದು ಸಮಾಜ, ಗೋಮಾತೆಯ ಹೆಸರು ಹೇಳುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ಕೆಂಜಾರು ಗೋಶಾಲೆಯ ಪ್ರಕಾಶ್ ಶೆಟ್ಟಿ ಕಿಡಿಕಾರಿದ್ದಾರೆ.
ನಗರದ ಆರ್ಯ ಸಮಾಜದಲ್ಲಿ ವಂದೇ ಗೋಮಾತರಂ ಗೋ ಸಂರಕ್ಷಣಾ ಸಮಿತಿ ಹೆಸರಲ್ಲಿ ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿದರು. ಸಂಸದ ನಳಿನ್ ಕುಮಾರ್ ಬಳಿ ಎಷ್ಟು ಸಾರಿ ಹೋಗಿ ಹೇಳಿದ್ದೇನೆ. ಜಿಲ್ಲಾಧಿಕಾರಿಗಳ ಬಳಿ ಎಷ್ಟು ಬಾರಿ ಹೋಗಿ ಮನವಿ ಮಾಡಿದ್ದೇನೆ. ಇವರಿಗೆ ಗೋವಿನ ಬಗ್ಗೆ ಕಾಳಜಿ, ಗೋವಿನ ಬಗ್ಗೆ ಪೂಜಾರ್ಹ ಭಾವನೆ ಇದ್ದಿದ್ದರೆ ಗೋಶಾಲೆ ಉಳಿಸುತ್ತಿದ್ದರು. ಮೇನಕಾ ಗಾಂಧಿಗೂ ಮೂರ್ನಾಲ್ಕು ಬಾರಿ ಫೋನ್ ಮಾಡಿ ವಿನಂತಿಸಿದ್ದೆ. ಅವರು ಇಲ್ಲಿನ ಜಿಲ್ಲಾಧಿಕಾರಿ ಮತ್ತು ಸಂಸದರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕವೇ ಕಟ್ಟಡ ತೆರವು ಮಾಡಿ ಎಂದಿದ್ದರು. ಆದರೆ, ಇಲ್ಲಿನ ಸಂಸದರು ಕಿವುಡರಾಗಿದ್ದಾರೆ. ತೆರವು ಮಾಡಿದ ದಿವಸ ಫೋನ್ ಸ್ವಿಚ್ ಆಫ್ ಮಾಡಿದ್ದರು. ಮೇನಕಾ ಗಾಂಧಿ ಕೂಡ ಇದೇ ಮಾತನ್ನು ಹೇಳಿದ್ದರು. ನಮ್ಮ ಕೈಲಿಲ್ಲ ಸ್ವಾಮಿ. ನಿಮ್ಮೂರಿನ ಸಂಸದರೇ ಹೀಗೆ ಮಾಡಿದರೆ ನಾವು ಏನು ಮಾಡೋಕಾಗುತ್ತೆ. ದೇವರಿಗೆ ಬಿಡಬೇಕಾಗುತ್ತದೆ ಎಂದು ಹೇಳಿದ್ದರು.
ಪ್ರಧಾನಿ ಕಚೇರಿಗೂ ದೂರು ನೀಡಿದ್ದೆ. ಅಲ್ಲಿಂದ ರಾಜ್ಯದ ಪಶು ಸಂಗೋಪನಾ ಇಲಾಖೆಗೆ ಸಮಸ್ಯೆ ಇತ್ಯರ್ಥ ಪಡಿಸಲು ಸೂಚನೆ ಬಂದಿತ್ತು. ಆದರೆ, ಇಲ್ಲಿನ ಸಂಸದರು ಮನಸ್ಸು ಮಾಡಲಿಲ್ಲ. ಅವರಿಗೆ ಗೋಶಾಲೆ ಉಳಿಸಬೇಕೆಂದಿದ್ದರೆ, ಏನಾದ್ರೂ ಮಾಡಬಹುದಿತ್ತು. ಜಿಲ್ಲಾಧಿಕಾರಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳ್ಕಂಡು ಬಂದಿದ್ದಾರೆ. ಎಲ್ಲಿ ಮಾಡ್ತಾರೆ ಸ್ವಾಮಿ ? ಎಲ್ಲೋ ಒಂದ್ಕಡೆ ಜಾಗ ಕೊಟ್ಟರೆ ಸಾಕಲು ಆಗುತ್ತದೆಯೇ.. ನಾವು ಹತ್ತು ಗೋವು ಸಾಕುವುದಲ್ಲ. 300ಕ್ಕೂ ಹೆಚ್ಚು ಗೋವುಗಳನ್ನು ಸಾಕುತ್ತಿದ್ದೇನೆ. ಸರಕಾರದಿಂದ ಬಿಡಿಗಾಸು ನೆರವು ಪಡೆಯದೆ ಇದನ್ನು ಮಾಡುತ್ತಿದ್ದೇನೆ. ದನದ ಕೊಟ್ಟಿಗೆಯಲ್ಲಿ ಬಂಧಿಸಿಡುವ ಕೆಲಸ ಮಾಡಿಲ್ಲ. ಸ್ವಚ್ಛಂದವಾಗಿ ಮೇಯ್ದುಕೊಂಡು ಬರುತ್ತವೆ. ಸಂಜೆ ಹೊತ್ತಿಗೆ ಬಂದು ಕೊಟ್ಟಿಗೆಯ ಹೊರಭಾಗದಲ್ಲಿ ಸೇರುತ್ತವೆ. ನಿಮಗೆ ಅಲ್ಲಿರುವ ಗೋವುಗಳ ಬಗ್ಗೆ ಸಂಶಯ ಇದ್ದರೆ, ಸಂಜೆ ಹೊತ್ತಿಗೆ ಬಂದು ನೋಡಿ ಎಂದು ಸವಾಲು ಹಾಕಿದರು.
ನೀವು ಜಾಗ ಕೊಡಿ ಎಂದು ಭಿಕ್ಷೆ ಬೇಡಿಯೂ ಇಲ್ಲ. ಪಕ್ಕದಲ್ಲಿ ನಮ್ಮದೇ ಜಾಗ ಇತ್ತು. ಅಲ್ಲಿ ಪರ್ಯಾಯ ಕೊಠಡಿ ವ್ಯವಸ್ಥೆ ಮಾಡಿದ ಬಳಿಕ ತೆರವು ಮಾಡುವಂತೆ ಹೇಳಿದ್ದೆ. ಆದರೆ, ಜಿಲ್ಲಾಧಿಕಾರಿ ಏಕಾಏಕಿ ಒಡೆದು ಹಾಕಿದ್ದಾರೆ. ಕೇಳಿದ್ದಕ್ಕೆ ಸಂಸದರು ಒಡೆದು ಹಾಕಲು ಹೇಳಿದ್ದಾಗಿ ತಿಳಿಸಿದ್ದರು. ಜನರ ಪರಿಸ್ಥಿತಿ ಅರ್ಥ ಮಾಡಿಕೊಳ್ಳದ ಜಿಲ್ಲಾಧಿಕಾರಿ ಯಾಕ್ರೀ.. ರಾಜಿನಾಮೆ ಕೊಟ್ಟು ಹೋಗಿ. ಈ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಗಮನಕ್ಕೂ ತಂದಿದ್ದೇನೆ. ಪ್ರಯೋಜನ ಆಗಿಲ್ಲ. ಆದರೆ, ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಜನರ ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ, ಇದನ್ನು ಖಂಡಿಸುತ್ತೇನೆ ಎಂದರು.
ಬಜರಂಗದಳದವರು ಎಲ್ಲಿದ್ದಾರೆ ಸ್ವಾಮಿ..?
ಇದೇ ವೇಳೆ, ಸಮಿತಿಯ ಸದಸ್ಯ ದಿನಕರ ಶೆಟ್ಟಿ ಮಾತನಾಡಿ, ಇವರಿಗೆ ಗೋವಿನ ಹೆಸರು ಹೇಳಲು ನೈತಿಕತೆ ಇದೆಯಾ.. ಅಲ್ಲಲ್ಲಿ ಗೋಪೂಜೆ ಮಾಡುತ್ತಾರೆ. ಗೋವಿನ ಹೆಸರೇಳಿ ಓಟು ಕೇಳುತ್ತಾರೆ. ವಂದೇ ಗೋಮಾತರಂ ಎಂದು ಮೈದಾನದಲ್ಲಿ ಘೋಷಣೆ ಕೂಗುತ್ತಾರೆ. ಈಗ ಎಲ್ಲಿ ಹೋಯ್ತು ಇವರ ಗೋವಿನ ಪ್ರೇಮ. ಬಜರಂಗದಳವರು ಎಲ್ಲಿದ್ದಾರೆ.. ನೀವು ಹಿಂದುತ್ವ, ಹಿಂದು ಸಮಾಜದ ಭಾವನೆಯ ಜೊತೆ ಆಟವಾಡುತ್ತಿದ್ದೀರಿ. ನಿಮಗೆ ಗೋವು ಕೇವಲ ರಾಜಕೀಯಕ್ಕೆ ಮಾತ್ರ. ಗೋರಕ್ಷಣೆಗೆ ಕಾನೂನು ತಂದವರಿಗೆ ಗೋಶಾಲೆ ಉಳಿಸೋಕೆ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಇವರು ಬಿಜೆಪಿ ಸರಕಾರ ಇದೆ, ಬಿಜೆಪಿಯವರು ಗೋಶಾಲೆಯನ್ನು ಒಡೆದು ಹಾಕಲಿಕ್ಕಿಲ್ಲ ಎಂದು ನಂಬಿದ್ದರು. ಆದರೆ, ನೀವು ಇವರ ಮೇಲೆಯೇ ಅಪಪ್ರಚಾರ ಮಾಡುತ್ತಿದ್ದೀರಿ. ಅವ್ಯವಹಾರ ಮಾಡುತ್ತಾರೆ, ಗೋವನ್ನು ಮುಸ್ಲಿಮರಿಗೆ ಮಾರಾಟ ಮಾಡುತ್ತಾರೆ ಎನ್ನುತ್ತೀರಲ್ಲಾ.. ನಿಮ್ಮಲ್ಲಿ ಇಂಥ ಮಾತು ಹೇಳಲು ದಾಖಲೆ ಇದೆಯೇ.. ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವುದಾಗಿ ಪ್ರಕಾಶ್ ಶೆಟ್ಟಿ ಕರೆದಿದ್ದಾರೆ. ನಿಮಗೆ ಬರುವ ಧೈರ್ಯ ಇದೆಯಾ.. ಈವರೆಗೆ ಹಿಂದು ಯುವಕರನ್ನು ತಮ್ಮ ತಾಳಕ್ಕೆ ಕುಣಿಸಿದ್ರಿ. ಕೇಸು, ಜೈಲು ಅಂತ ಯುವಕರು ಬೀದಿ ಅಲೆಯುತ್ತಿದ್ದಾರೆ. ಈಗ ಗೋವನ್ನು ಬೀದಿಗೆ ಹಾಕಿದ್ದಾರೆ. ಕೋಸ್ಟ್ ಗಾರ್ಡ್ ಗೆ ಒಂದು ಸಾವಿರ ಕೋಟಿ ಮಂಜೂರಾಗಿದೆ. ಅದನ್ನು ತುರ್ತಾಗಿ ಮಾಡಿಸಿ, ಹತ್ತು ಪರ್ಸೆಂಟ್ ಅಂದರೆ 100 ಕೋಟಿ ಬಾಚಿಕೊಳ್ಳುವ ತಂತ್ರ ಇದರಲ್ಲಿದೆ. ಗೋಶಾಲೆಯನ್ನು ಒಡೆದು ಹಾಕಿದ್ದು ಇದರ ಷಡ್ಯಂತ್ರದ ಭಾಗ ಎಂದು ದಿನಕರ ಶೆಟ್ಟಿ ಹೇಳಿದರು.
ಕೋಸ್ಟ್ ಗಾರ್ಡಿಗೆ ಬೇಕಾಗಿದ್ದು 160 ಎಕ್ರೆ ಮಾತ್ರ..
ಕೆಐಎಡಿಬಿಗೆ ಸೇರಿದ ಕೆಂಜಾರಿನ ಜಾಗದಲ್ಲಿ 960 ಎಕರೆ ಜಮೀನಿದೆ. ಇದರಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಬೇಕಾಗಿರುವುದು 160 ಎಕರೆ ಮಾತ್ರ. ಹಾಗಾದ್ರೆ, ಗೋಶಾಲೆಯನ್ನು ಕೆಡವಿಯೇ ಜಾಗ ಕೊಡಬೇಕಾಗಿತ್ತೇ.. ಇವರಿಗೆ ಗೋವಿನ ಮೇಲೆ ಕಾಳಜಿ ಇರುತ್ತಿದ್ದರೆ ಗೋಶಾಲೆಯನ್ನು ಒಂದು ಮೂಲೆಯಲ್ಲಿ ಉಳಿಸಬಹುದಿತ್ತು ಎಂದು ಹೇಳಿದ ದಿನಕರ್ ಶೆಟ್ಟಿ, ಎಲ್ಲ ಹಿಂದು ಸಮಾಜ ಜಿಲ್ಲಾಡಳಿತದ ಈ ನಡೆಯನ್ನು ಖಂಡಿಸುತ್ತದೆ. ಇದನ್ನು ವಿರೋಧಿಸಿ ಮಾ.11ರಂದು ಬೆಳಗ್ಗೆ 11 ಗಂಟೆಗೆ ಹಂಪನಕಟ್ಟೆಯ ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಲಿದ್ದೇವೆ. ರಾಷ್ಟ್ರಧ್ವಜ ಹೊರತುಪಡಿಸಿ ಇತರ ಯಾವುದೇ ಧ್ವಜ ಹಿಡಿಯಲು ಅವಕಾಶ ಇಲ್ಲ. ಎಲ್ಲ ಗೋ ಪ್ರೇಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತೇನೆ ಎಂದರು.
ಹಿಂದು ಮಹಾಸಭಾ, ಶ್ರೀರಾಮ ಸೇನೆಯ ಪ್ರದೀಪ್ ಮೂಡುಶೆಡ್ಡೆ, ಜೀವನ್ ನೀರುಮಾರ್ಗ, ಲೋಕೇಶ್ ಉಳ್ಳಾಲ, ಹರೀಶ್ ಅಮ್ಟಾಡಿ, ಶಿವಪ್ರಸಾದ್ ಕೋಡಾಜೆ, ಕಿಶೋರ್ ಸನಿಲ್ ಉಪಸ್ಥಿತರಿದ್ದರು.
Raed: ಕೆಂಜಾರಿನ ಕಪಿಲಾ ಗೋಶಾಲೆ ನೆಲಸಮ ; ಆಕ್ಷೇಪದ ಮಧ್ಯೆಯೇ ಜಿಲ್ಲಾಡಳಿತ ಕಾರ್ಯಾಚರಣೆ !
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm