ಬ್ರೇಕಿಂಗ್ ನ್ಯೂಸ್
12-03-21 09:52 pm Udupi Correspondent ಕರಾವಳಿ
ಉಡುಪಿ, ಮಾ.12: ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರಧಾರಿಯೊಬ್ಬರಿಗೆ ದೇವಿ ಆವಾಹನೆ ಆಗಿ ಬಾರೀ ಸುದ್ದಿಯಾಗಿತ್ತು. ಈ ಸುದ್ದಿ ಬೆನ್ನಲ್ಲೇ ಕರಾವಳಿಯ ಯಕ್ಷಗಾನ ಕಲಾವಿದರೊಬ್ಬರಿಗೆ ಯಕ್ಷಗಾನ ನಡೆಯುತ್ತಿದ್ದಾಗ ದೈವ ಆವಾಹನೆ ಆದ ವಿಡಿಯೋ ಬಾರೀ ವೈರಲ್ ಆಗುತ್ತಿದೆ.
ಬಡಗುತಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿರುವ ಹಟ್ಟಿಯಂಗಡಿ ಮೇಳದಿಂದ, ಕರಾವಳಿಯ ದೈವದ ಮಹಿಮೆಗೆ ಸಂಬಂಧಿಸಿದ ಯಕ್ಷಗಾನ ಪ್ರಸಂಗ ನಡೆಯುತ್ತಿತ್ತು. ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರು ದೈವದ ವೇಷ ಧರಿಸಿ, ದೀವಟಿಕೆ ಹಿಡಿದುಕೊಂಡು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶದ ಸಂದರ್ಭದಲ್ಲಿ ದೈವ ಆವಾಹನೆ ಆಗಿರುವ ಘಟನೆ ನಡೆದಿದೆ.
ರಂಗಸ್ಥಳ ಏರುವುದಕ್ಕೂ ಮುನ್ನ ದೈವ ಆವಾಹನೆ ಆದ ರೀತಿ ವೇಷಧಾರಿ ವರ್ತಿಸಿದ್ದು ಇದನ್ನು ಕಂಡ ದೀವಟಿಕೆ ಹಿಡಿದುಕೊಂಡಿದ್ದ ಸಹಾಯಕ ಕೂಡಲೇ ದೀವಟಿಕೆಯನ್ನು ಕಲಾವಿದ ಯೋಗಿಶ್ ಪೂಜಾರಿ ಅವರಿಂದ ಬಲವಂತವಾಗಿ ಎಳೆದು ತೆಗೆದುಕೊಂಡಿದ್ದಾರೆ. ದೀವಟಿಗೆ ಸೆಳೆದುಕೊಳ್ಳಲು ತೀವ್ರ ಕಸರತ್ತು ನಡೆಸಿದ ವೇಷಧಾರಿ ಎರಡು ಮೂರು ಸುತ್ತು ಹೊಡೆದಿದ್ದಾರೆ. ಬಳಿಕ ಇಬ್ಬರು ಸೇರಿ, ವೇಷಧಾರಿಯ ಕೈಯಿಂದ ಎಳೆದು ದೂರಕ್ಕೆ ದೂಡಿದ್ದಾರೆ.
ಈ ರೀತಿಯ ಬೆಳವಣಿಗೆ ಆಗಿರುವ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿದ್ದು ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ದೈವವೇ ವೇಷಧಾರಿಯಲ್ಲಿ ನಿಜಕ್ಕೂ ಆವಾಹನೆ ಆಗಿತ್ತೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ.
A Video has gone viral on social media of how Daiva arrives upon yakshagana artist during play at udupi.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm