ಬ್ರೇಕಿಂಗ್ ನ್ಯೂಸ್
15-03-21 12:16 pm Mangalore Correspondent ಕರಾವಳಿ
ಮುಲ್ಕಿ, ಮಾ.15 : ಇತ್ತೀಚೆಗೆ ಬಳ್ಕುಂಜೆ ಪರಿಸರದಲ್ಲಿ 300 ವರ್ಷ ಹಳೆಯ ದೈವದ ಪರಿಕರಗಳು ಪತ್ತೆಯಾದ ಬೆನ್ನಲ್ಲೇ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಕೊಲಕಾಡಿ ಎಂಬಲ್ಲಿ ಪಾಳುಬಿದ್ದ ದೈವಸ್ಥಾನ ಇದ್ದ ಜಾಗದಲ್ಲಿ 600 ವರ್ಷ ಹಳೆಯದು ಎನ್ನಲಾದ ದೈವದ ಮೂರ್ತಿ, ಮೊಗ ಮತ್ತಿತರ ಪರಿಕರಗಳು ಪತ್ತೆಯಾಗಿವೆ.
ಕಳೆದ ಹಲವಾರು ವರ್ಷಗಳಿಂದ ಪರಿಸರದ ದೈವಸ್ಥಾನ ಪಾಳು ಬಿದ್ದಿದ್ದು , ಪಿಲಿಚಂಡಿ, ನಂದಿಗೋಣ ಹಾಗೂ ಇತರ ದೈವಗಳು ಪಾಳು ಬಿದ್ದ ಜಾಗದಲ್ಲಿ ನೆಲೆಸಿವೆ ಎನ್ನಲಾಗುತ್ತಿದೆ. ಊರಿಗೆ ಬಂದಿರುವ ತೊಂದರೆ, ದುರಿತ ನಿವಾರಿಸಲು ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದ ವೇಳೆ, ದೈವಸ್ಥಾನದ ಜೀರ್ಣೋದ್ಧಾರ ಆಗಬೇಕೆಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ದೈವದ ಪರಿಕರಗಳು ಪತ್ತೆಯಾಗಿವೆ.
ಈ ಬಗ್ಗೆ ಕೊಲಕಾಡಿ ಕುಂಜಾರುಗಿರಿ ದೇವಳದ ಟ್ರಸ್ಟಿ ಗುಣೇಶ್ ಶೆಟ್ಟಿ ಮಾತನಾಡಿ, ಪತ್ತೆಯಾದ ದೈವದ ಪರಿಕರಗಳಿಗೆ ಹಾಗೂ ಮುಲ್ಕಿ ಸೀಮೆಯ ಇತಿಹಾಸ ಪ್ರಸಿದ್ಧ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನಕ್ಕೂ ಸಂಬಂಧ ಇರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಹಿರಿಯರ ಪ್ರಕಾರ, ಕೆಲವು ವರ್ಷಗಳ ಹಿಂದೆ ಗುಜರಿ ವ್ಯಾಪಾರಿಯೊಬ್ಬರು ಈ ಪರಿಕರಗಳನ್ನು ಸಾಗಿಸಲು ಯತ್ನಿಸಿದ್ದು ಇದ್ದಕ್ಕಿದ್ದಂತೆಯೇ ಪರಿಕರಗಳು ಭಾರವಾಗಿದ್ದು ಒಯ್ಯಲು ಸಾಧ್ಯವಾಗದೆ ಅಲ್ಲಿಯೇ ತಂದಿಟ್ಟು ಹೋಗಿದ್ದರಂತೆ.
ದೈವದ ಪರಿಕರಗಳು ಇರುವ ಜಾಗದಲ್ಲಿ ಬೃಹದಾಕಾರದ ಆಲದ ಮರ ಇದ್ದು, ಅಲ್ಲಿಯೂ ಅನೇಕ ಅವಶೇಷಗಳು ಪತ್ತೆಯಾಗಿದೆ. ಸ್ವಲ್ಪ ಮುಂದಕ್ಕೆ ಪಿಲಿಕಟ್ಟೆ ಎನ್ನುವ ಕಟ್ಟೆ ಇದ್ದು, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ದೈವದ ನೇಮ ನಡೆಯುತ್ತಿದ್ದಾಗ ಹುಲಿ ಬಂದು ಕಟ್ಟೆಯಲ್ಲಿ ಕುಳಿತು ತನ್ನ ಪಾಡಿಗೆ ಉತ್ಸವ ನೋಡಿ ಹೋಗುತ್ತಿತ್ತು ಎನ್ನಲಾಗಿದೆ. ಹಾಗೆಯೇ ಸ್ಥಳದಲ್ಲಿ ಪುರಾತನ ಬಾವಿಯೂ ಪತ್ತೆಯಾಗಿದೆ.
ಕೆಲವು ದಿನಗಳ ಹಿಂದೆ ಮುಲ್ಕಿ ಸಮೀಪದ ಬಳಕುಂಜೆಯಲ್ಲಿ ಬಾವಿ ಒಳಗಿದ್ದ ದೈವದ ಪರಿಕರಗಳು ಪತ್ತೆಯಾಗಿದ್ದವು. ಇದೀಗ ಮುಲ್ಕಿ ಸೀಮೆಯ ಅತಿಕಾರಿಬೆಟ್ಟು ಗ್ರಾಮದಲ್ಲಿ ಅಂತಹದ್ದೇ ದೈವದ ಪರಿಕರ ಪತ್ತೆಯಾಗಿದ್ದು, ತುಳುನಾಡಿನಲ್ಲಿ ದೈವಗಳ ಗಾಢ ಇರುವಿಕೆಯನ್ನು ಮತ್ತಷ್ಟು ದೃಢಪಡಿಸಿದೆ.
Read: ಪುರಾತನ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ ಪತ್ತೆ ! ನಿಜವಾದ ದೈವದ ನುಡಿ !!
600-Year-Old Idols we're found in a Deserted area at Mulki. It is said that it was found near a old temple.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm