ಬ್ರೇಕಿಂಗ್ ನ್ಯೂಸ್
15-03-21 12:51 pm Mangalore Correspondent ಕರಾವಳಿ
ಮಂಗಳೂರು, ಮಾ.15 : ಕುಂಪಲದ ಆಶ್ರಯ ಕಾಲನಿಯ ನಿವಾಸಿ ಪ್ರೇಕ್ಷಾ (17) ಸಾವಿನ ಪ್ರಕರಣದಲ್ಲಿ ಆಕೆಯ ಲವರ್ ಎನ್ನಲಾದ ಯತಿನ್ ರಾಜ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಪ್ರೇಕ್ಷಾ ಸಾವಿಗೆ ಪ್ರೇರಣೆ ನೀಡಿದ ಆರೋಪದಲ್ಲಿ ಯತಿನ್ ರಾಜ್ ಬಂಧನ ಆಗಿದ್ದು ಆರೋಪಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಾ.10ರಂದು ಪ್ರೇಕ್ಷಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಪೋಷಕರು ಮತ್ತು ಸ್ಥಳೀಯರು ಇದು ಕೊಲೆಯೆಂದು ಆರೋಪಿಸಿದ್ದರು. ಅಲ್ಲದೆ, ಮೂವರು ಹುಡುಗರು ಅದೇ ದಿನ ಆಕೆಯ ಮನೆಗೆ ಬಂದಿದ್ದ ಬಗ್ಗೆ ದೂರು ಹೇಳಿಕೊಂಡಿದ್ದರು. ಪೊಲೀಸರು ಯತಿನ್ ರಾಜ್ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪೊಲೀಸರು ವಿಚಾರಣೆ ಬಳಿಕ ಇಬ್ಬರನ್ನು ಮನೆಗೆ ಕಳಿಸಿಕೊಟ್ಟಿದ್ದು ಯತಿನ್ ರಾಜ್ ನನ್ನು ಬಂಧಿಸಿದ್ದರು.
ಪ್ರೇಕ್ಷಾ ರೂಪದರ್ಶಿಯಾಗಿದ್ದು ಮಾ.10 ರಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದಳು. ಅದೇ ದಿನ ಮಧ್ಯಾಹ್ನ ಆಕೆ ನಿಗೂಢ ಸಾವು ಕಂಡಿದ್ದಾಳೆ. ಈ ನಡುವೆ, ಪ್ರೇಕ್ಷಾ ಮಾಡೆಲಿಂಗ್ ಹೋಗದಂತೆ ಯತಿನ್ ರಾಜ್ ಬೆದರಿಸಿದ್ದ ಎನ್ನಲಾಗಿತ್ತು. ಅಲ್ಲದೆ, ಆಕೆಯ ಮನೆಗೆ ಅದೇ ದಿನ ಬೆಳಗ್ಗೆ ಯಾರೂ ಇಲ್ಲದ ಸಂದರ್ಭದಲ್ಲಿ ಗೆಳೆಯರ ಜೊತೆ ಬಂದಿದ್ದಾನೆ. ಇದಲ್ಲದೆ, ಮನೆಯವರು ಕೂಡ ಆಕೆ ಬೆಂಗಳೂರಿಗೆ ತೆರಳುವುದಕ್ಕೆ ಮೊದಲು ವಿರೋಧ ವ್ಯಕ್ತಪಡಿಸಿದ್ದರಂತೆ. ಬಳಿಕ ತನಗೆ ದೊಡ್ಡ ಪ್ರಚಾರ ಸಿಗತ್ತೆ ಎಂದು ಆಕೆಯೇ ಮನೆಯವರನ್ನು ಒಪ್ಪಿಸಿದ್ದಳು ಎನ್ನಲಾಗುತ್ತಿದೆ. ಅಲ್ಲದೆ, ತನ್ನ ಸಂಬಂಧಿಯಾಗಿರುವ ಸೋದರನ ಜೊತೆ ಅದೇ ದಿನ ಮಧ್ಯಾಹ್ನ ಬೆಂಗಳೂರಿಗೆ ತೆರಳಲು ರೆಡಿಯಾಗಿದ್ದಳು.
ಸಾವಿಗೆ ಕಾರಣವೇನು ? ಪತ್ತೆ ಮಾಡದ ಪೊಲೀಸರು !
ಆದರೆ, ಇದರ ಮಧ್ಯೆ ಆಕೆಯ ಸಾವು ಹೇಗಾಯ್ತು. ಆಕೆಯೇ ಗೆಳೆಯರ ಧಮ್ಕಿಗೆ ಹೆದರಿ ನೇಣಿಗೆ ಶರಣಾಗಿದ್ದಾಳೆಯೇ ? ಮನೆಗೆ ಬಂದಿದ್ದವರು ಕೊಲೆ ಮಾಡಿದ್ದಾರೆಯೇ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪೊಲೀಸರು ಒಬ್ಬನನ್ನು ಬಂಧಿಸಿ, ಕೈತೊಳೆದುಕೊಂಡಿದ್ದಾರೆ. ಪರಿಸರದಲ್ಲಿ ಗಾಂಜಾ ಗ್ಯಾಂಗ್ ಕಾರ್ಯಾಚರಿಸುತ್ತಿದ್ದು ಸ್ಥಳೀಯರ ಆಕ್ರೋಶ ಅತ್ತ ತಿರುಗುತ್ತಿದ್ದಂತೆ ಪೊಲೀಸರು ಕೂಡ ಅದರ ಹಿಂದೆ ಬಿದ್ದಿದ್ದಾರೆ. ಆಕೆಯ ಆತ್ಮಹತ್ಯೆಗೆ ಗೆಳೆಯರು ಹಾಕಿದ್ದ ಧಮ್ಕಿಯೇ ಪ್ರೇರಣೆಯಾಗಿತ್ತಾ ಅನ್ನೋದನ್ನು ಪತ್ತೆ ಮಾಡಿಲ್ಲ. ಆಕೆಯದು ಆತ್ಮಹತ್ಯೆ ಎಂಬುದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖ ಆಗುವುದು ಬಹುತೇಕ ನಿಶ್ಚಿತವಾಗಿದೆ. ಅಲ್ಲಿಗೆ ಕೇಸ್ ಕೂಡ ಕ್ಲೋಸ್ ಆಗುವ ಸಾಧ್ಯತೆಯಿದೆ.
Model Preksha boyfriend Yatin Raj has sent to 14 days judicial custody after she was found dead in a suspicious way at her house.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm