ಬ್ರೇಕಿಂಗ್ ನ್ಯೂಸ್
03-04-21 03:45 pm Mangalore Correspondent ಕರಾವಳಿ
ಮಂಗಳೂರು, ಎ.3: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭಾರೀ ಪ್ರಮಾಣದ ಚಿನ್ನದ ಅಕ್ರಮ ಸಾಗಾಟವನ್ನು ಪತ್ತೆ ಮಾಡಿದ್ದಾರೆ. ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ಎರಡೂವರೆ ಕೇಜಿ ಚಿನ್ನವನ್ನು ವಶಕ್ಕೆ ಪಡೆದಿದ್ದು, ಅಂದಾಜು 1.20 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ.

ಎಪ್ರಿಲ್ 1 ಮತ್ತು 2ರಂದು ದುಬೈನಿಂದ ಬಂದಿದ್ದ ಕೇರಳದ ಕಾಸರಗೋಡಿನ ಅಬ್ದುಲ್ ಸಲಾಂ ಮನಿಪರಂಬು ಮತ್ತು ಮೊಹಮ್ಮದ್ ಅಶ್ರಫ್ ಎಂಬಿಬ್ಬರನ್ನು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಅಬ್ದುಲ್ ಸಲಾಂ ತನ್ನ ದೇಹದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿಟ್ಟಿದ್ದರೆ, ಮೊಹಮ್ಮದ್ ಅಶ್ರಫ್ ತಾನು ತೊಟ್ಟಿದ್ದ ಜೀನ್ಸ್ ಅಂಗಿಯಲ್ಲಿ ಬಟನ್ ರೂಪದಲ್ಲಿ ಚಿನ್ನವನ್ನು ಹಾಕ್ಕೊಂಡಿದ್ದ. ಅಲ್ಲದೆ, ತನ್ನ ಶೂ ಒಳಗೆ ಚಿನ್ನದ ಸರ ಇಟ್ಟುಕೊಂಡಿದ್ದ. ಇವರಲ್ಲಿ 26.43 ಲಕ್ಷ ಮೌಲ್ಯದ ಒಟ್ಟು 576 ಗ್ರಾಮ್ ಚಿನ್ನ ಪತ್ತೆಯಾಗಿತ್ತು.


ಎಪ್ರಿಲ್ 3ರಂದು ಬೆಳಗ್ಗೆ ಮಂಗಳೂರಿನ ಉಳ್ಳಾಲದ ನಿವಾಸಿ ಮೊಹಮ್ಮದ್ ಆಶಿಫ್ (28) ಎನ್ನುವಾತ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಬಂದಿದ್ದು ಭಾರೀ ಪ್ರಮಾಣದ ಚಿನ್ನದ ಜೊತೆ ಸಿಕ್ಕಿಬಿದ್ದಿದ್ದಾನೆ. ಪ್ಯಾಂಟ್ ಮತ್ತು ಶರ್ಟಿನಲ್ಲಿ ವಿಶೇಷವಾಗಿ ರಚಿಸಲಾಗಿದ್ದ ಪಾಕೆಟ್ ಒಳಗೆ ಚಿನ್ನದ ಗಟ್ಟಿ ಇಟ್ಟುಕೊಂಡಿದ್ದ. ಈತನ ಬಳಿ 1 ಕೇಜಿ 933 ಗ್ರಾಮ್ ಚಿನ್ನ ಪತ್ತೆಯಾಗಿದ್ದು ಅದರ ಮೌಲ್ಯ 92.27 ಲಕ್ಷ ಆಗಿರುತ್ತದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನದ ಅಂತರದಲ್ಲಿ ಎರಡೂವರೆ ಕೇಜಿ ಚಿನ್ನ ಪತ್ತೆಯಾಗಿದ್ದು ಇದೇ ಮೊದಲಾಗಿದ್ದು, ದಿನವೂ ಭಾರೀ ಪ್ರಮಾಣದ ಚಿನ್ನ ಕಳ್ಳ ಸಾಗಣೆ ಮೂಲಕ ಭಾರತಕ್ಕೆ ಬರುತ್ತಿರುವುದರ ದ್ಯೋತಕವಾಗಿದೆ.
In a Big time Haul the customs officers of Mangalore Airport have seized 2.5 Kgs of Gold worth 1.20 crores in two days.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm