ಬ್ರೇಕಿಂಗ್ ನ್ಯೂಸ್
04-04-21 10:57 pm Mangaluru correspondent ಕರಾವಳಿ
ಮಂಗಳೂರು, ಎ.4: ಕೆಂಜಾರಿನ ಕಪಿಲಾ ಗೋಶಾಲೆಯನ್ನು ಜಿಲ್ಲಾಡಳಿತ ಧ್ವಂಸಗೊಳಿಸಿ ಇಂದಿಗೆ 30 ದಿನವಾಗಿದ್ದು ಜನಪ್ರತಿನಿಧಿಗಳು, ಸರಕಾರ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಇಂದು ಕೆಂಜಾರಿನ ಗೋಶಾಲೆಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೋ ಭಕ್ತರಿಂದ ಪಾದಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾದ್ಯಕ್ಷ ಡಾ.ಎಲ್.ಕೆ. ಸುವರ್ಣ, ಗೋವಿನ ಹೆಸರಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದವರು ಆಡಳಿತ ನಡೆಸುತ್ತಿರುವಾಗಲೇ ಗೋಶಾಲೆಯನ್ನು ಕೆಡವಿದ್ದಾರೆ. ಯಾವ ಸರಕಾರ ರಕ್ಷಣೆ ಮಾಡಬೇಕಾಗಿತ್ತೋ ಅದೇ ಸರಕಾರ ಕುಮ್ಮಕ್ಕು ನೀಡಿ ಗೋಶಾಲೆಯನ್ನು ಧ್ವಂಸ ಮಾಡಿದೆ. ಸರಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ನಾವು ದೇವರ ಮೊರೆ ಹೋಗಲೇಬೇಕಾಯಿತು. ಈ ಸರಕಾರ ನಡೆಸುತ್ತಿರುವವರಿಗೆ ಆ ದೇವರೇ ಬುದ್ಧಿ ಕೊಡಲೆಂದು ಕೇಳಿಕೊಳ್ಳಬೇಕಾಗಿದೆ ಎಂದರು.
ಇವತ್ತು ದೈವ, ದೇವರು, ದೇವಸ್ಥಾನ, ದೈವಸ್ಥಾನಕ್ಕೆ ಅನ್ಯ ಮತೀಯರು ಪದೇ ಪದೇ ಅಪಮಾನ ಮಾಡುತ್ತಿದ್ದರೂ, ಅದನ್ನು ತಡೆಯಲು ಇವರಿಂದ ಆಗಿಲ್ಲ. ಹಿಂದುತ್ವದ ಸರಕಾರ ಎಂದು ಹೇಳಿಕೊಳ್ಳುವ ಈಗಿನ ಸರಕಾರಕ್ಕೆ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗದೇ ಆಡಳಿತ ಪಕ್ಷದ ಸದಸ್ಯರೇ ಸೇರಿ ಕೊರಗಜ್ಜನ ಬಳಿಗೆ ಪಾದಯಾತ್ರೆ ಮಾಡಿದ್ದಾರೆ. ಇದರರ್ಥ ಇವರು ತಮ್ಮ ವೈಫಲ್ಯವನ್ನು ಸಾಬೀತು ಮಾಡಿದಂತಲ್ಲವೇ ಎಂದು ಸುವರ್ಣ ಬಿಜೆಪಿ ನಾಯಕರ ಹೆಸರು ಉಲ್ಲೇಖಿಸದೆ ಪ್ರಶ್ನೆ ಮಾಡಿದರು.
ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ನಾಗಾಸಾಧುಗಳು ಆಶೀರ್ವಚನ ನೀಡಿದರು. ನ್ಯಾಯವಾದಿ ದಿನಕರ ಶೆಟ್ಟಿ, ಗೋಶಾಲೆ ಮಾಲಕರಾದ ಪ್ರಕಾಶ್ ಶೆಟ್ಟಿ , ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸುರತ್ಕಲ್, ಯಲಹಂಕ ರಾಜ್ಯ ಸಂಘಟನಾ ಕಾರ್ಯದರ್ಶಿ ಕಮಲಾಕ್ಷ ಸುವರ್ಣ , ದ.ಕ.
ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ, ಉಪಾಧ್ಯಕ್ಷರಾದ ಡಾಕ್ಟರ್ ಶ್ರೀಮತಿ ಅನುರಾಧ, ಶ್ರೀಮತಿ ರೇಣುಕಾ, ಶ್ರೀರಾಮ ಸೇನೆಯ ಮುಖಂಡರಾದ ಪ್ರದೀಪ್, ರಾಮಸೇನೆ ಮುಖಂಡರಾದ ಸೂರಜ್ ಕಟೀಲ್, ಆರ್ಯ ಸಮಾಜ ಕಾರ್ಯದರ್ಶಿ ದೀಪಕ್, ವಿದ್ಯಾರ್ಥಿ ಮುಖಂಡ ಶ್ರೀಪಾಲ್, ಕುಮಾರ್ ಮಾಲೆಮಾರ್, ಸುನೀಲ್ ಬಜಿಲಕೇರಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮುಂತಾದವರು ಪಾದಯಾತ್ರೆಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಪುಟಾಣಿ ಮಕ್ಕಳ ಕುಣಿತ ಭಜನಾ ತಂಡ, ಚೆಂಡೆ, ಗೋ ಮಾತೆಯ ಸ್ತಬ್ಧ ಚಿತ್ರ ಪಾದಯಾತ್ರೆಗೆ ಮೆರುಗು ನೀಡಿತು. ನಂತರ ದುಷ್ಟರಿಗೆ ನೀವೇ ಬುದ್ಧಿ ನೀಡಿ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
Mangalore Goshala destroyed in mangalore Devotees of cow march praying for justice.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm