ಬ್ರೇಕಿಂಗ್ ನ್ಯೂಸ್
05-04-21 04:03 pm Mangalore Correspondent ಕರಾವಳಿ
ಮಂಗಳೂರು, ಎ.5: ಮೆಸ್ಕಾಂ ಅಧಿಕಾರಿಯೋರ್ವ ಕಚೇರಿಗೆ ಬಂದಿದ್ದ ಗ್ರಾಹಕನ ಮೇಲೆ ಸ್ಟೀಲ್ ಸ್ಕೇಲ್ ನಲ್ಲಿ ಹಿಗ್ಗಾ ಮುಗ್ಗಾ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂಲತಃ ಉಳ್ಳಾಲಬೈಲಿನ ನಿವಾಸಿ ಪ್ರವೀಣ್ ಬಂಗೇರ ಎಂಬವರು ಮಂಗಳೂರಿನ ಮೆಸ್ಕಾಂ ಅತ್ತಾವರ ವಿಭಾಗದಲ್ಲಿ ವಿಜಿಲೆನ್ಸ್ ಅಧಿಕಾರಿ ಆಗಿದ್ದು ಕಚೇರಿಗೆ ಬಂದಿದ್ದ ಗ್ರಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಟೀಲ್ ಸ್ಕೇಲ್ ನಿಂದ ಹಲ್ಲೆ ನಡೆಸಿ ರೌಡಿಸಂ ಪ್ರದರ್ಶನ ಮಾಡಿದ್ದಾರೆ. ನೀವು ಫೋನ್ ತೆಗೆದಿಲ್ಲ. ನಿಮ್ಮ ಮೇಲೆ ದೊಣ್ಣೆಯಲ್ಲಿ ಹೊಡೆಯಬೇಕು ಎಂದು ಹೇಳಿದ್ದಕ್ಕೆ ಸಿಟ್ಟಾದ ಪ್ರವೀಣ್ ತನ್ನ ಕೈಯಲ್ಲಿದ್ದ ಸ್ಟೀಲ್ ಸ್ಕೇಲ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ನೀನು ತಾಕತ್ತಿದ್ದರೆ ದೊಣ್ಣೆಯಲ್ಲಿ ಹೊಡೆದು ನೋಡು. ನಾವು ಪೊಲೀಸರು, ಬಾ ಮುಂದೆ ಎನ್ನುತ್ತಲೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಇತರ ವ್ಯಕ್ತಿಗಳು ಸಮಾಧಾನ ಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಪ್ರವೀಣ್ ಬಂಗೇರ ಈ ಮೊದಲು ಉಳ್ಳಾಲ ಮೆಸ್ಕಾಂನಲ್ಲಿ ಎಇ (ಅಸಿಸ್ಟೆಂಟ್ ಇಂಜಿನಿಯರ್) ಆಗಿದ್ದು ಆ ಸಂದರ್ಭದಲ್ಲೇ ಭ್ರಷ್ಟಾಚಾರ ನಡೆಸಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪಗಳಿದ್ದವು. ಇವರು ಪತ್ನಿಯ ಹೆಸರಲ್ಲಿ ಉಳ್ಳಾಲ ಬೈಲ್ ಪರಿಸರದಲ್ಲಿ ಕೇಬಲ್ ಟಿ.ವಿ. ನಡೆಸುತ್ತಿದ್ದಾರೆ. ಉಳ್ಳಾಲ ಬೈಲಿನಲ್ಲಿ ದೈವಸ್ಥಾನ ಒಂದರಲ್ಲಿ ಆಡಳಿತ ಕಮಿಟಿ ಅಧ್ಯಕ್ಷನಾಗಿಯೂ ಸ್ಥಾನ ಗಿಟ್ಟಿಸಿದ್ದಾನೆ.

ಹಳೆಯ ವೀಡಿಯೋ ವೈರಲ್ !
ಮೆಸ್ಕಾಂ ವಿಜೆಲೆನ್ಸ್ ಅಧಿಕಾರಿ ಪ್ರವೀಣ್ ಬಂಗೇರ ಗ್ರಾಹಕನ ಮೇಲೆ ಸ್ಕೇಲ್ ನಲ್ಲಿ ಹಲ್ಲೆ ನಡೆಸಿದ್ದ ಘಟನೆಯ ವೀಡಿಯೋ ಹಳೆಯದ್ದೆಂದು ತಿಳಿದುಬಂದಿದೆ. ಈ ಬಗ್ಗೆ ದೂರು - ಪ್ರತಿ ದೂರು ದಾಖಲಾಗಿ ಪ್ರಕರಣ ಕೋರ್ಟಲ್ಲಿ ಇದೆಯಂತೆ. ಸುನಿಲ್ ವಾಝ್ ಎಂಬ ಇಲೆಕ್ಟ್ರಿಕಲ್ ಗುತ್ತಿಗೆದಾರ ಈ ವೀಡಿಯೋ ತೆಗೆದಿದ್ದಾರೆ ಎನ್ನಲಾಗಿದ್ದು ಪ್ರವೀಣ್ ಬಂಗೇರ ಎಂಬ ಅಧಿಕಾರಿಯ ದರ್ಪವನ್ನು ರೆಕಾರ್ಡ್ ಮಾಡಿದ್ದರು. ಹಳೆಯ ವೀಡಿಯೋ ಆಗಿದ್ದರೂ ಮೆಸ್ಕಾಂ ವಿಜಿಲೆನ್ಸ್ ಅಧಿಕಾರಿಯ ರಾಕ್ಷಸೀ ಪ್ರವೃತ್ತಿ ವೈರಲ್ ವಿಡಿಯೋದಲ್ಲಿ ಬಯಲಾಗಿದೆ.
Video:
Mangalore Mescom vegeligence officer Praveen Bangera attacks customer with Steel scale by using foul words a video of this has gone viral on social media.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
02-11-25 05:13 pm
HK News Desk
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm