ಬ್ರೇಕಿಂಗ್ ನ್ಯೂಸ್
02-05-26 11:18 am HK News Staffer ದೇಶ - ವಿದೇಶ
ನವದೆಹಲಿ, ಮೇ 2: ಜನ ಸಾಮಾನ್ಯರನ್ನು ಯಾಮಾರಿಸಿ ಹಣ ಕೀಳುವ ಆನ್ಲೈನ್ ಗೇಮ್ ಗಳನ್ನುಬ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಯನ್ನು ಜಾರಿಗೆ ತಂದಿದೆ.
ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆ (ಆನ್ಲೈನ್ ಗೇಮಿಂಗ್ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025 ರ ಅಡಿ) ಮೇ 1ರಿಂದ ಭಾರತದಲ್ಲಿ ಜಾರಿಗೆ ಬರಲಿದೆ. ಈ ಕಾಯ್ದೆಯಿಂದ ಗೇಮಿಂಗ್ನಲ್ಲಿ 5 ಮಹತ್ವದ ಬದಲಾವಣೆಗಳಾಗಿವೆ. ಇದರ ಪ್ರಕಾರ, ಕೇಂದ್ರದ ನ್ಯಾಷನಲ್ ಗೇಮಿಂಗ್ ಅಥಾರಿಟಿಯಿಂದ ಎಲ್ಲಾ ರೀತಿಯ ವಿಡಿಯೋ ಗೇಮ್ಗಳಿಗೆ ಲೈಸೆನ್ಸ್ ಪಡೆಯಬೇಕಿದೆ. Dream11, MPL, WinZO ಸೇರಿದಂತೆ ಹಲವಾರು ಕಂಪನಿಗಳು ಹೊಸ ಲೈಸೆನ್ಸ್ ಪಡೆಯಬೇಕಿದೆ.
ಗೇಮ್ಗಳನ್ನು ಮೂರು ರೀತಿ ವರ್ಗೀಕರಿಸಲಾಗಿದೆ. 1) ಇ-ಸ್ಪೋರ್ಟ್ಸ್ – ಸಂಪೂರ್ಣ ಕಾನೂನುಬದ್ಧ 2) ಸ್ಕಿಲ್ ಗೇಮ್ – ಲೈಸೆನ್ಸ್ ಬೇಕು 3) ಬೆಟ್ಟಿಂಗ್ ಗೇಮ್ – ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಆನ್ಲೈನ್ ಕ್ಯಾಸಿನೊ, 1XBet ಗೇಮ್ಗಳು ಬ್ಯಾನ್ ಆಗಲಿವೆ.
18 ವರ್ಷ ಕೆಳಗಿನ ಮಕ್ಕಳಿಗೆ ದಿನಕ್ಕೆ 3 ಗಂಟೆ ಮಾತ್ರ ಆಡಲು ಅವಕಾಶ, ರಾತ್ರಿ 11 ರಿಂದ ಬೆಳಗ್ಗೆ 6ರ ವರೆಗೆ ಇವರಿಗೆ ಗೇಮ್ ಆಡುವುದು ನಿಷೇಧ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಿತಿ ಇಲ್ಲ. ಇನ್ನೂ ಮಕ್ಕಳು, ಶಾಲಾ ವಿದ್ಯಾರ್ಥಿಗಳಿಗೆ ಹಣದ ಕರ್ಚಿಗೆ ಕಡಿವಾಣ ಹಾಕಲಾಗಿದೆ. ಅಲ್ಲದೇ ಎಲ್ಲಾ ಹಣದ ಗೇಮ್ಗೆ ಆಧಾರ್ KYC ಕಡ್ಡಾಯವಾಗಿದೆ.
ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತಿಂಗಳಿಗೆ 10,000 ರೂ. ಮಿತಿ ಇದೆ. ಗೇಮ್ಗೆ ಪೋಷಕರ OTP ಬೇಕಾಗುತ್ತದೆ. ಇದರಿಂದ ಪೋಷಕರಿಗೆ ಮಕ್ಕಳ ಖರ್ಚಿನ ಮೇಲೆ ನಿಯಂತ್ರಣ ಸಿಗಲಿದೆ. GST + TDS ಡೆಪಾಸಿಟ್ ಮೇಲೆ 28% GST ಮುಂದುವರಿಕೆಯಾಗಲಿದ್ದು, 10,000 ರೂ. ಕ್ಕಿಂತ ಜಾಸ್ತಿ ಹಣ ಗೆದ್ದರೆ 30% TDS ಕಟ್ ಆಗಲಿದೆ.
ಉಲ್ಲಂಘಿಸಿದರೆ ಏನು ಶಿಕ್ಷೆ?
ಕಂಪನಿಗಳು ಈ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿ 1 ಕೋಟಿ ರೂ. ದಂಡ, 2ನೇ ಬಾರಿ 5ಬ ಕೋಟಿ ರೂ. ದಂಡ ಹಾಗೂ CEO ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಜಾಹೀರಾತು ಮಾಡಿದ್ರೂ ಶಿಕ್ಷೆ
ಸೆಲೆಬ್ರಿಟಿಗಳು ಹಾಗೂ ಇನ್ಫ್ಲುಯೆನ್ಸರ್ಗಳು ಬೆಟ್ಟಿಂಗ್ ಸೇರಿದಂತೆ ಬ್ಯಾನ್ ಆದ ಗೇಮ್ಗಳ ಜಾಹಿರಾತು ಮಾಡಿದರೆ 50 ಲಕ್ಷ ರೂ. ದಂಡ ಹಾಗೂ 1 ವರ್ಷ ಬ್ಯಾನ್ ಮಾಡಲಾಗುತ್ತದೆ. ಬ್ಯಾನ್ ಆದ ಸೈಟ್ ಬಳಸಿ ಗೇಮ್ ಆಡಿದ್ರೆ ಬಳಕೆದಾರರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೇ ಇದನ್ನೇ ಮಾಡಿದ್ರೆ ಕೇಸ್ ದಾಖಲಿಸಲಾಗುತ್ತದೆ. ಬ್ಯಾನ್ ಆದ ಗೇಮ್ಗೆ ಹಣ ಕಳಿಸಿದ್ರೆ ಬ್ಯಾಂಕ್ ಖಾತೆ ಫ್ರೀಜ್ ಆಗಲಿದೆ.
ಕರ್ನಾಟಕದಲ್ಲಿ ಹಳೆಯ ಕಾಯ್ದೆ ರದ್ದು
2021ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬೆಟ್ಟಿಂಗ್ ಬ್ಯಾನ್ ಕಾಯ್ದೆಯನ್ನು ಹೈಕೋರ್ಟ್ ಈಗಾಗಲೇ ರದ್ದು ಮಾಡಿದೆ. ಈಗ ಕೇಂದ್ರ ಕಾಯ್ದೆ ಅನ್ವಯ ಆಗಲಿದೆ. MPL, Games24x7 ಸೇರಿದಂತೆ 200ಕ್ಕೂ ಹೆಚ್ಚು ಆನ್ಲೈನ್ ಗೇಮಿಂಗ್ ಕಂಪನಿಗಳು ಬೆಂಗಳೂರಿನಲ್ಲಿವೆ. ಲೈಸೆನ್ಸ್ಗೆ ಮೇ 1 ರೊಳಗೆ ಅರ್ಜಿ ಹಾಕಿರಬೇಕು. ಮೇ 1 ರಿಂದ VPN ಹಾಕಿ ಬೆಟ್ಟಿಂಗ್ ಆಡಿದ್ರೂ ಸೈಬರ್ ಕ್ರೈಂ ಪೊಲೀಸರು ಟ್ರ್ಯಾಕ್ ಮಾಡಲಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am