ಬ್ರೇಕಿಂಗ್ ನ್ಯೂಸ್
08-04-21 05:46 pm Mangalore Correspondent ಕರಾವಳಿ
ಉಳ್ಳಾಲ: ಎ.8; ತೊಕ್ಕೊಟ್ಟಿನ ಸ್ಮಾರ್ಟ್ ಪ್ಲಾನೆಟ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್ ಓರ್ವರಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಲಭಿಸಿದೆ.
ಮೂಲತಃ ಕೇರಳ ರಾಜ್ಯದ ಕ್ಯಾಲಿಕಟ್ ನಿವಾಸಿಯಾಗಿರುವ ಮೊಯ್ದಿನ್ ಕುಟ್ಟಿ (65) ಅವರಿಗೆ ಒಂದು ಕೋಟಿ ಬಂಪರ್ ಬಹುಮಾನ ಲಭಿಸಿದೆ. ಮೊಯ್ದಿನ್ ಕುಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿ ಸೆಕ್ಯುರಿಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರಿಗೆ ಕೇರಳದ ಲಾಟರಿ ತೆಗೆಯುವ ಹವ್ಯಾಸವಿದ್ದು ಕಳೆದ ವಾರ ಎಪ್ರಿಲ್ 4 ರಂದು ಡ್ರಾಗೊಳ್ಳುವ 100 ರೂಪಾಯಿ ಬೆಲೆಯ ಭಾಗ್ಯ ಮಿತ್ರ ಟಿಕೇಟನ್ನು ಕೇರಳದ ಉಪ್ಪಳದಲ್ಲಿ ಖರೀದಿಸಿದ್ದು ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಗಿಟ್ಟಿಸಿ ಕೋಟ್ಯಾಧೀಶರಾಗಿದ್ದಾರೆ. ಮೊಯ್ದಿನ್ ಕುಟ್ಟಿಗೆ ಪತ್ನಿ ಮೂವರು ಮಕ್ಕಳಿದ್ದಾರೆ. ಕೆಲಸ ಅರಸಿ ತೊಕ್ಕೊಟ್ಟಿಗೆ ಬಂದಿದ್ದ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
500 ರೂಪಾಯಿ ಸಾಲ ಕೊಟ್ಟಿದ್ದ ಟೈಲರ್
ಕಳೆದ ಶನಿವಾರ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿರುವ ಒಮೇಗಾ ಟೈಲರ್ ಶಾಪ್ ಮಾಲೀಕರಾದ ರವಿ ಅವರಲ್ಲಿ 500 ರೂಪಾಯಿ ಸಾಲ ಪಡೆದು ಕೇರಳದ ಭಾಗ್ಯಮಿತ್ರ ಲಾಟರಿಯನ್ನು ಖರೀದಿಸಿದ್ದರಂತೆ. ತಾನು ಸಾಲವಾಗಿ ನೀಡಿದ ಹಣದಲ್ಲಿ ಮೊಯ್ದಿನ್ ಕುಟ್ಟಿ ಅವರಂತಹ ಬಡವನಿಗೆ ಕೋಟಿ ಬಹುಮಾನ ಬಂದ ವಿಷಯ ತಿಳಿದ ರವಿ ಅವರು ಸಂಭ್ರಮಿಸಿದ್ದು ಕುಟ್ಟಿ ಅವರನ್ನ ಅಭಿನಂದಿಸಿದ್ದಾರೆ.
ಭಾಗ್ಯಮಿತ್ರ ಲಾಟರಿಯಲ್ಲಿ 5 ಜನರಿಗೆ ತಲಾ 1 ಕೋಟಿ ಬಂಪರ್ ಬಹುಮಾನ ಲಭಿಸಿದ್ದು ಅದರಲ್ಲಿ ಮೊಯ್ದಿನ್ ಕುಟ್ಟಿ ಅವರು ಓರ್ವ ಅದೃಷ್ಟಶಾಲಿಯಾಗಿದ್ದಾರೆ.
Read: ಕೋಟಿ ಲಾಟರಿ ಕತೆಯೇ ಸುಳ್ಳು ; ಯಾಮಾರಿಸಿದ ವಾಚ್ಮನ್ ಕುಟ್ಟಿ ಪರಾರಿ !
In a big-time luck a security guard from Ullal, Mangalore has won rupees one crore Kerela lottery unexpectedly. Mohiuddin Kuti is the lucky Security Guard.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm