ಬ್ರೇಕಿಂಗ್ ನ್ಯೂಸ್
14-04-21 03:35 pm Mangalore Correspondent ಕರಾವಳಿ
ಬಂಟ್ವಾಳ, ಎ.14 : ಪೊಳಲಿ ಉತ್ಸವದ ವೇಳೆ ಕಳೆದು ಹೋಗಿದ್ದ ಕ್ಷೇತ್ರದ ಗಡಿಕಾರರಾದ ಅರ್ಕುಳ ಕಂಪ ಸದಾನಂದ ಆಳ್ವರಿಗೆ ಸೇರಿದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೇವಸ್ಥಾನದ ಸಿಬ್ಬಂದಿ ಪತ್ತೆ ಮಾಡಿದ್ದಲ್ಲದೆ, ಜೋಪಾನದಿಂದ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪೊಳಲಿ ರಥೋತ್ಸವದ ಮರುದಿನ ಉಳ್ಳಾಕ್ಲು ಮೊಗ್ರಂತಾಯಿ ದೈವದ ನೇಮದಂದು ಕ್ಷೇತ್ರದ ಗಡಿಕಾರ ಅರ್ಕುಳ ಕಂಪ ಸದಾನಂದ ಆಳ್ವರು ನೇಮ ಮುಗಿದು ಬೆಳಗ್ಗೆ ದೇವಸ್ಥಾನದ ಅತಿಥಿ ಗೃಹ ಫಲ್ಗುಣಿಯಲ್ಲಿ ಸ್ನಾನಕ್ಕೆಂದು ಹೋದವರು ತಮ್ಮ ಚಿನ್ನದ ಆಭರಣಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಭಂಡಾರ ತಿರುಗಿ ತುಪ್ಪೆಕಲ್ಲು ಕ್ಷೇತ್ರಕ್ಕೆ ಬಂದ ನಂತರ ಸದಾನಂದ ಆಳ್ವರವರು ತಮ್ಮ ಮನೆಗೆ ಬಂದು ಮಧ್ಯಾಹ್ನದ ವರೆಗೂ ಈ ವಿಷಯ ಅವರ ಗಮನಕ್ಕೆ ಬಂದಿರಲಿಲ್ಲ.
ಚಿನ್ನಾಭರಣ ಗಮನಿಸಿದ ಸಿಬ್ಬಂದಿ ರವಿ ಉಗ್ರಾಣಿಯವರು ಆಡಳಿತ ಮೊಕ್ತೇಸರರಿಗೆ ತಿಳಿಸಿದ್ದು, ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅವರು ಕರೆ ಮಾಡಿ ಸದಾನಂದ ಆಳ್ವರಿಗೆ ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಸಿಬ್ಬಂದಿ ರವಿ ಉಗ್ರಾಣಿಯವರನ್ನು ಕ್ಷೇತ್ರದ ಪವಿತ್ರಪಾಣಿ ಮಾಧವ ಅಡಿಗರ ಸಮ್ಮುಖದಲ್ಲಿ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅರ್ಕುಳ ಕಂಪ ದಯಾನಂದ ಆಳ್ವ, ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು.
Bantwal Man Ravi returns seven lakhs worth gold to its owner who had lost it during the Polali Jatre 2021. His honestly has become the talk of the town.
18-07-25 03:38 pm
Bangalore Correspondent
Minister Dinesh Gundu Rao, Dharmasthala: ಧರ್ಮ...
17-07-25 07:45 pm
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Ronald Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm