ಬ್ರೇಕಿಂಗ್ ನ್ಯೂಸ್
16-04-21 04:43 pm Mangalore Correspondent ಕರಾವಳಿ
ಮಂಗಳೂರು, ಎ.17: ಹಾಸನ ಜಿಲ್ಲೆಯ ಆಲೂರು ಠಾಣೆ ವ್ಯಾಪ್ತಿಯಲ್ಲಿ ಮೊನ್ನೆ ಪೊಲೀಸರ ಕಣ್ಣು ತಪ್ಪಿಸಿ, ರೇವ್ ಪಾರ್ಟಿ ನಡೆದಿದ್ದು ಅದರಲ್ಲಿ ಮಂಗಳೂರು ಮತ್ತು ಬೆಂಗಳೂರಿನ ಯುವಕ- ಯುವತಿಯರು ಡ್ರಗ್ಸ್ ಅಮಲೇರಿಸಿಕೊಂಡು ಕುಣಿದಾಡಿದ್ದು ಬಳಿಕ ಪೊಲೀಸ್ ರೈಡ್ ಆಗಿ ಸಿಕ್ಕಿಬಿದ್ದಿದ್ದು ಆಗಿತ್ತು. ಆದರೆ, ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ, ಆ ರೇವ್ ಪಾರ್ಟಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ತಮ್ಮ ಪುತ್ರನ ಜೊತೆ ಸೇರಿ ಆಯೋಜನೆ ಮಾಡಿದ್ದಾರಂತೆ.
ರೇವ್ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಹಾಸನ ಎಸ್ಪಿ ಶ್ರೀನಿವಾಸ ಗೌಡ ಭಾನುವಾರ ನಸುಕಿನಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬಂದಿಯೊಂದಿಗೆ ದಾಳಿ ನಡೆಸಿದ್ದರು. ಆಲೂರು ಬಳಿಯ ಹೊಂಗರವಳ್ಳಿಯ ಎಸ್ಟೇಟ್ ಒಂದರಲ್ಲಿ ಪಾರ್ಟಿ ಆಯೋಜನೆಯಾಗಿತ್ತು. ಕಾಟೇಜ್ ಗಳನ್ನು ಮಾಡಿಕೊಂಡು ಓಪನ್ ಹಾಲ್ ಅರೇಂಜ್ ಮಾಡಿಸಿ, ಡ್ರಗ್ಸ್ ಮತ್ತೇರಿಸಲು ವ್ಯವಸ್ಥೆ ಮಾಡಲಾಗಿತ್ತು. ಅಂದು ನಸುಕಿನಲ್ಲಿ ಪೊಲೀಸರು ದಿಢೀರ್ ಆಗಿ ರೈಡ್ ಮಾಡಿ, ಪಾರ್ಟಿಯ ಅಮಲಿನಲ್ಲಿದ್ದ 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಅಂಡ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಕೂಡ ಒಬ್ಬರು.
ಅರೆನಗ್ನ ಸ್ಥಿತಿಯಲ್ಲಿದ್ದ ಯುವಕ- ಯುವತಿಯರು
ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ ಯುವಕ- ಯುವತಿಯರು ಡ್ರಗ್ ಅಮಲಿನಲ್ಲಿದ್ದರು. ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆ, ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ, ನಮಗೆ ಮದುವೆಯಾಗಿದೆ. ರಜೆಯಲ್ಲಿ ಉಳಿದುಕೊಳ್ಳಲು ಬಂದಿದ್ದೆವು ಎಂದು ಹೇಳಿ ಅಂಗಲಾಚಿದ್ದರು. ಆದರೆ, ಪೊಲೀಸರು ಯಾರನ್ನು ಉಳಿಸದೇ ಭಾನುವಾರ ಬೆಳಗ್ಗೆ ಎಲ್ಲರನ್ನೂ ವಶಕ್ಕೆ ಪಡೆದು ಬ್ಲಡ್ ಸ್ಯಾಂಪಲ್ ತಪಾಸಣೆಗೆ ಕಳುಹಿಸಿದ್ದರು. ಇದೇ ವೇಳೆ, ಪಾರ್ಟಿ ಆಯೋಜಿಸಿದ್ದ ಜಾಗದಲ್ಲಿ ಎಂಡಿಎಂಎ, ಎಲ್ಎಸ್ ಡಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಎಸ್ಟೇಟ್ ಮಾಲೀಕ ಎನ್ನಲಾಗಿದ್ದ ಗಗನ್ ಮತ್ತು ಪಾರ್ಟಿ ಆಯೋಜಿಸಿದ್ದಾರೆ ಎನ್ನಲಾದ ಬೆಂಗಳೂರಿನ ಸೋನಿ, ಪಂಕಜ್, ನಾಸಿರ್ ಎಂಬ ಮೂವರನ್ನು ಬಂಧಿಸಲಾಗಿತ್ತು. ಇವರನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರಿನ ಲೇಡಿ ಪೊಲೀಸ್ ಮತ್ತು ಮತ್ತಾಕೆಯ ಪುತ್ರನ ಹೆಸರು ಹೊರಬಿದ್ದಿದೆ.
ಲೇಡಿ ಪೊಲೀಸ್ ಅಂಡ್ ಸನ್ ಮತ್ತು ಡ್ರಗ್ಸ್ !
ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಶ್ರೀಲತಾ ಮೂಲತಃ ಕೇರಳದವರು. ಕರ್ನಾಟಕದಲ್ಲಿ ಪೊಲೀಸ್ ಆಗಿ ಈ ಹಿಂದೆ ಪಣಂಬೂರು, ಸುರತ್ಕಲ್, ಬಜ್ಪೆಯಲ್ಲಿ ಕೆಲಸ ಮಾಡಿದ್ದ ಶ್ರೀಲತಾ ಕಳೆದ ನಾಲ್ಕು ವರ್ಷಗಳಿಂದ ನಾರ್ಕೋಟಿಕ್ ಠಾಣೆಯಲ್ಲಿದ್ದರು. ಈ ನಡುವೆ, ಮಂಗಳೂರಿನ ಕೆಲವು ಯುವಕರ ಜೊತೆ ನಂಟು ಬೆಳೆಸಿಕೊಂಡಿದ್ದ ಈಕೆಯೇ ಇದೀಗ ಹಾಸನದಲ್ಲಿ ಪೊಲೀಸರ ಕಣ್ಣುತಪ್ಪಿಸಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾರ್ಕೋಟಿಕ್ ಠಾಣೆಯಲ್ಲಿದ್ದು ಡ್ರಗ್ ಪೆಡ್ಲರ್ ಗಳನ್ನು ಹಿಡಿಯಬೇಕಾಗಿದ್ದ ಪೊಲೀಸ್ ಪೇದೆ ತಾನೇ ಡ್ರಗ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಈಗ ಅಮಾನತ್ತಿನ ತೂಗುಗತ್ತಿ ಎದುರಿಸುತ್ತಿದ್ದಾರೆ.
ಪೊಲೀಸ್ ಮಗ ಅತುಲ್ ಡ್ರಗ್ ಪೆಡ್ಲರ್ ?!
ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸಕ್ಕಿದ್ದಾನೆ ಎನ್ನಲಾಗುತ್ತಿರುವ ಲೇಡಿ ಪೊಲೀಸ್ ಮಗ ಅತುಲ್, ಡ್ರಗ್ ಪೆಡ್ಲರ್ ಗಳ ಜೊತೆ ನಿಕಟ ನಂಟು ಇರಿಸಿಕೊಂಡಿದ್ದು ಸ್ವತಃ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಅನ್ನೋ ಇದೆ. ಸುರತ್ಕಲ್ ಬಳಿಯ ಕಾಟಿಪಳ್ಳದ ಕೃಷ್ಣಾಪುರದಲ್ಲಿ ತಾಯಿ ಜೊತೆ ಮನೆ ಮಾಡಿಕೊಂಡಿದ್ದ ಅತುಲ್, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ರಗ್ ಪ್ರಿಯರ ಗೆಳೆತನ ಸಾಧಿಸಿದ್ದ. ಇದೇ ಕಾರಣದಿಂದ ಬೆಂಗಳೂರಿನ ಹುಡುಗರ ಜೊತೆ ಸೇರಿ ಸಕಲೇಶಪುರದ ನಿಗೂಢ ಜಾಗದಲ್ಲಿ ರೇವ್ ಪಾರ್ಟಿ ಆಯೋಜಿಸಲು ಪ್ಲಾನ್ ಹಾಕಿದ್ದ. ಮೊನ್ನೆ ಪೊಲೀಸರು ದಾಳಿ ಮಾಡಿದ್ದು ಗೊತ್ತಾದ ಕೂಡಲೇ ಅತುಲ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಹಾಸನ ಪೊಲೀಸರು ಆತನಿಗಾಗಿ ಶೋಧ ಆರಂಭಿಸಿದ್ದಾರೆ.
ಆನ್ಲೈನಲ್ಲಿ ನಡೆದಿತ್ತು ಪಾರ್ಟಿ ಅರೇಂಜ್ಮೆಂಟ್
ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಕ್ಕೆ ಎಂಟ್ರಿ ಫೀಸ್ ಸೇರಿದಂತೆ ಸದಸ್ಯರ ಬರುವಿಕೆಯನ್ನು ದೃಢಪಡಿಸುವುದು ಎಲ್ಲವೂ ಆನ್ ಲೈನಲ್ಲೇ ನಡೆದಿತ್ತು. ಎಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನೋದನ್ನು ಕೂಡ ಕೊನೆಕ್ಷಣದ ವರೆಗೂ ನಿಗೂಢ ಆಗಿಯೇ ಇರಿಸಲಾಗಿತ್ತು. ಹತ್ತಾರು ಕಾರು, ದ್ವಿಚಕ್ರ ವಾಹನಗಳಲ್ಲಿ ಸದಸ್ಯರು ಬಂದಿದ್ದರು. ಅಲ್ಲಿ ಸೇರಿದ್ದವರಲ್ಲಿ ಉಡುಪಿ, ಮಣಿಪಾಲ, ಮಂಗಳೂರು ಮತ್ತು ಬೆಂಗಳೂರಿನ ಮಂದಿಯೇ ಹೆಚ್ಚಿದ್ದರು.
ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಪಾರ್ಟಿ ಕಿಂಗ್ ಪಿನ್ ಎನ್ನಲಾಗುತ್ತಿರುವ ಮಂಗಳೂರಿನ ಲೇಡಿ ಪೊಲೀಸ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದ ಇತರೇ ಯುವಕರನ್ನು ಬ್ಲಡ್ ಸ್ಯಾಂಪಲ್ ಪಡೆದು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಲೇಡಿ ಪೊಲೀಸ್ ಅರೆಸ್ಟ್ ಆಗಿರುವ ಬಗ್ಗೆ ಹಾಸನ ಎಸ್ಪಿ ಕಚೇರಿಯಿಂದ ಮಂಗಳೂರು ಪೊಲೀಸ್ ಕಮಿಷನರಿಗೆ ವರದಿ ಬರಲಿದ್ದು, ಎಫ್ಐಆರ್ ನಲ್ಲಿ ಹೆಸರು ದಾಖಲಾಗಿದ್ದರೆ ಮಂಗಳೂರಿನ ನಾರ್ಕೋಟಿಕ್ ಠಾಣೆಯಿಂದ ಸಸ್ಪೆಂಡ್ ಆಗುವುದು ಖಚಿತ.
ರೇವ್ ಪಾರ್ಟಿ ; ಸಿಸಿಬಿ ಎಎಸ್ಐ ಎಂದು ಪೋಸು ನೀಡಿದ್ದ ಲೇಡಿ ಪೊಲೀಸ್ ಸಸ್ಪೆಂಡ್ !
The Hassan Police have arrested Srilatha, police staff of Narcotics and Economic Drugs station in Mangalore for organising the party with her son Atul who is said to be absconding. Over 100 youths were arrested by the Hassan police in the wee hours of Sunday for taking part in a rave party. A police team consisting of 50 personnel had conducted a raid at a homestay in Honkaravalli village in Hassan district. The youths were reportedly from Bengaluru and Mangaluru.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm