ಬ್ರೇಕಿಂಗ್ ನ್ಯೂಸ್
16-04-21 07:50 pm Mangalore Correspondent ಕರಾವಳಿ
ಮಂಗಳೂರು, ಎ.17: ಎ.8 ಮತ್ತು 9ರಂದು ಕಡಬ ತಾಲೂಕಿನ ಕುಂಜಾಡಿಯಲ್ಲಿ ನಡೆದಿದ್ದ ಭಾರೀ ಗೌಜಿಯ ಧರ್ಮನೇಮದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪುತ್ತೂರು ವಿಭಾಗಾಧಿಕಾರಿ ಬಳಿ ವರದಿ ಕೇಳಿದ್ದಾರೆ.
ಕೋವಿಡ್ ನಿರ್ಬಂಧ ಇದ್ದರೂ, ಧರ್ಮನೇಮದಲ್ಲಿ ಐದಾರು ಸಾವಿರ ಮಂದಿ ಸೇರಿದ್ದಲ್ಲದೆ ಎರಡು ದಿನ ಭಾರೀ ಗೌಜಿಯಲ್ಲಿ ನಡೆದಿತ್ತು. ರಾಜ್ಯದ ಹಲವಾರು ಕಡೆಯಿಂದ ರಾಜಕಾರಣಿಗಳು, ಸಚಿವರು, ಶಾಸಕರು ತೆರಳಿ ಧರ್ಮನೇಮದಲ್ಲಿ ಕಾಣಿಸಿಕೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ಧರ್ಮನೇಮ ನಡೆದಿದ್ದರಿಂದ ಇಡೀ ಸಮಾಜದ ಉತ್ಸವ ಎಂಬಂತೆ ಜಿಲ್ಲಾ ಬಿಜೆಪಿ ಪ್ರಮುಖರು ಅದನ್ನು ಸಂಭ್ರಮಿಸಿದ್ದರು.
ಇಡೀ ಜಿಲ್ಲೆಯಾದ್ಯಂತ ಪೋಸ್ಟರ್, ಕಟೌಟ್ ಹಾಕಿ, ಒಂದು ಕುಟುಂಬದ ವತಿಯಿಂದ ನಡೆದಿದ್ದ ಧರ್ಮನೇಮಕ್ಕೆ ಸಾರ್ವಜನಿಕ ನೆಲೆಯಲ್ಲಿ ಶುಭ ಹಾರೈಕೆಗಳಾಗಿದ್ದವು. ಗಲ್ಲಿ ಗಲ್ಲಿಯ ಬಿಜೆಪಿ ನಾಯಕರು ನಳಿನ್ ಕುಮಾರ್ ಮತ್ತು ತಮ್ಮ ಭಾವಚಿತ್ರಗಳನ್ನು ಹಾಕಿಸ್ಕೊಂಡು ಸಂಭ್ರಮಿಸಿದ್ದರು. ಧರ್ಮನೇಮ ನಡೆಯುತ್ತಿರುವಾಗಲೇ ಜಿಲ್ಲಾಧಿಕಾರಿ ರಾಜೇಂದ್ರ ಸ್ಥಳಕ್ಕೆ ತೆರಳಿದ್ದರು. ಅಲ್ಲದೆ, ಅಲ್ಲಿನ ವ್ಯವಸ್ಥೆ ಮತ್ತು ಸಾವಿರಾರು ಜನ ಸೇರಿದ್ದ ವಿಚಾರದಲ್ಲಿ ಗರಂ ಆಗಿದ್ದರು ಎನ್ನೋ ವಿಚಾರ ತಿಳಿದುಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯನ್ನೇ ಅಲ್ಲಿದ್ದ ಕೆಲವು ಬಿಜೆಪಿ ನಾಯಕರು ತರಾಟೆಗೆತ್ತಿಕೊಂಡಿದ್ದೂರು ಎಂದು ಹೇಳಲಾಗಿದೆ.
ಧರ್ಮನೇಮದಲ್ಲಿ ಜಿಲ್ಲಾಧಿಕಾರಿ ನಳಿನ್ ಕುಮಾರ್ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೋ ಇಟ್ಟುಕೊಂಡು ಜಾಲತಾಣದಲ್ಲಿ ಟೀಕೆ ಮಾಡಲಾಗಿತ್ತು. ಜಾಲತಾಣದಲ್ಲಿ ಟೀಕೆ ಮತ್ತು ಪ್ರಶ್ನೆಗಳ ಸುರಿಮಳೆ ಕೇಳಿಬಂದ ಕಾರಣಕ್ಕೋ ಏನೋ, ಧರ್ಮನೇಮದ ವಿಚಾರದಲ್ಲಿ ಪುತ್ತೂರು ವಿಭಾಗಾಧಿಕಾರಿಯಿಂದ ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆಂದು ತಿಳಿದುಬಂದಿದೆ. ಎಷ್ಟು ಜನ ಸೇರಿದ್ದರು, ಏನೆಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿತ್ತೇ ಇತ್ಯಾದಿ ವಿಚಾರದ ಬಗ್ಗೆ ಪುತ್ತೂರು ವಿಭಾಗಾಧಿಕಾರಿ ವರದಿ ಕೊಡಬೇಕಾಗಿದೆ.
Also Read: ಉಸ್ತುವಾರಿ ಸಚಿವರಿಗೆ ಪಾಸಿಟಿವ್ ; ಧರ್ಮನೇಮಕ್ಕೆ ತೆರಳಿದವರಿಗೆ ಕೋವಿಡ್ ಇರಲಿಕ್ಕಿಲ್ಲವೇ ಜಿಲ್ಲಾಧಿಕಾರಿಗಳೇ !?
Dharma Neema at Kunjady Taravadu of MP and State BJP president Nalin Kumar Kateel in Paltady of Kadaba taluk, Dakshina Kannada DC Rajendra Kumar demands report from Puttur Asst Commissioner about the details of the event.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm