ಬೋಟ್ ದುರಂತ ; ಪಶ್ಚಿಮ ಬಂಗಾಳ ಮೂಲದ ಇಬ್ಬರ ಅಂತ್ಯಕ್ರಿಯೆ

20-04-21 11:23 am       Mangalore Correspondent   ಕರಾವಳಿ

ಬೋಟ್ ದುರಂತದಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮೂಲದ ಇಬ್ಬರು ಮೀನುಗಾರರ ಅಂತ್ಯಕ್ರಿಯೆಯನ್ನು ನಗರದ ಅತ್ತಾವರ ನಂದಿಗುಡ್ಡೆ ಸ್ಮಶಾನದಲ್ಲಿ ನಡೆಸಲಾಯಿತು.

ಮಂಗಳೂರು, ಎ.20 : ಅರಬೀ ಸಮುದ್ರದಲ್ಲಿ ನಡೆದ ಬೋಟ್ ದುರಂತದಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮೂಲದ ಇಬ್ಬರು ಮೀನುಗಾರರ ಅಂತ್ಯಕ್ರಿಯೆಯನ್ನು ನಗರದ ಅತ್ತಾವರ ನಂದಿಗುಡ್ಡೆ ಸ್ಮಶಾನದಲ್ಲಿ ನಡೆಸಲಾಯಿತು.

ಪಶ್ಚಿಮ ಬಂಗಾಳದ ಸುಬಲ್ ದಾಸ್ (45) ಮತ್ತು ಸುಬುಲ್ ದಾಸ್ (38) ಎಂಬವರ ಅಂತ್ಯಕ್ರಿಯೆಯನ್ನು ಮಂಗಳೂರಿನಲ್ಲಿ ನಡೆಸಲಾಗಿದೆ. 

ಇಬ್ಬರ ಕುಟುಂಬವು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದ್ದು, ಮೃತದೇಹವನ್ನು ಒಯ್ಯಲು ಸಾಧ್ಯವಾಗದ ಕಾರಣ ಅತ್ತಾವರ ಸಮೀಪದ ನಂದಿಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆಸಿದರು ಎನ್ನಲಾಗಿದೆ.

ಎ.10ರಂದು ಕೇರಳದಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ‘ರಬಾ’ ಹೆಸರಿನ ಬೋಟ್ ಮುಂಬೈ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆಯ ಹಡಗಿಗೆ ಎ.11ರ ತಡರಾತ್ರಿ ಸಮುದ್ರ ಮಧ್ಯೆ ಡಿಕ್ಕಿ ಹೊಡೆದಿತ್ತು. ಬೋಟ್‌ನಲ್ಲಿ ಒಟ್ಟು 14 ಮಂದಿಯಿದ್ದರು. ಇಬ್ಬರನ್ನು ರಕ್ಷಿಸಲಾಗಿದ್ದರೆ 6 ಮಂದಿ ಮೃತಪಟ್ಟು ಶವ ಪತ್ತೆಯಾಗಿದೆ. ಉಳಿದ 6 ಮಂದಿ ಕಾಣೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಸಿಂಗಾಪುರದ ಹಡಗು ಡಿಕ್ಕಿಯಾಗಿ ಬೋಟ್ ದುರಂತ ; ಇಬ್ಬರ ರಕ್ಷಣೆ, ಮೂವರ ಶವ ಪತ್ತೆ , 9 ಮಂದಿ ನಾಪತ್ತೆ

ಸರಿರಾತ್ರಿಯಲ್ಲಿ ಗಾಳಿ ಮಳೆಗೆ ಹಡಗು ಕಾಣಲೇ ಇಲ್ಲ.. ಬೋಟ್ ಡಿಕ್ಕಿಯಾಗಿ ಪಲ್ಟಿಯಾಯ್ತು.. ಮಲಗಿದ್ದವರು ಜಲ ಸಮಾಧಿಯಾದ್ರು..!!

ಬೋಟ್ ದುರಂತ ; ಮತ್ತೆ ಮೂವರು ಕಾರ್ಮಿಕರ ಮೃತದೇಹ ಪತ್ತೆ ! ಗುರುತು ಸಿಗದಷ್ಟು ವಿಕಾರವಾಗಿರುವ ಶವಗಳು !


Mangalore boat tragedy after collision with ship bodies of west Bengal fishermen cremated in Mangalore.