ಬ್ರೇಕಿಂಗ್ ನ್ಯೂಸ್
21-04-21 02:57 pm Mangalore Correspondent ಕರಾವಳಿ
ಮಂಗಳೂರು, ಎ.21: ಒಂದೆಡೆ ರಾತ್ರಿ ಕರ್ಫ್ಯೂ, ಇನ್ನೊಂದೆಡೆ ಹಗಲು ಹೊತ್ತಿನಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿದೆ. ಇದರಂತೆ, ಹೊಟೇಲ್, ಕ್ಯಾಂಟೀನ್, ದರ್ಶಿನಿ ಕೇಂದ್ರಗಳು ಬಂದ್ ಆಗಿದ್ದು, ಊಟ, ತಿಂಡಿಯ ಅಗತ್ಯ ಇದ್ದವರು ಪಾರ್ಸೆಲ್ ಒಯ್ಯಬೇಕೆಂದು ಸೂಚನೆ ನೀಡಲಾಗಿದೆ. ಹೊಟೇಲ್ ಇಲ್ಲದೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಪೊಲೀಸರಿಗೆ ಕಮಿಷನರ್ ಕಚೇರಿ ಹಿಂಭಾಗದ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.



ಪೊಲೀಸರೇ ಸೇರಿಕೊಂಡು ಮೈದಾನದಲ್ಲಿ ಊಟ ರೆಡಿ ಮಾಡುತ್ತಿದ್ದು, ಮೊದಲ ದಿನ 300 ಮಂದಿಗೆ ಊಟ ರೆಡಿ ಮಾಡಲಾಗಿತ್ತು. ಊಟ, ನೀರು ಸಿಗದೆ ಕರ್ತವ್ಯ ನಿರತ ಸಿಬಂದಿ ಪರದಾಟ ಅನುಭವಿಸಬಾರದು ಎಂಬ ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮುತುವರ್ಜಿ ವಹಿಸ್ಕೊಂಡು ಈ ವ್ಯವಸ್ಥೆ ಮಾಡಿದ್ದಾರೆ.




ಮಧ್ಯಾಹ್ನ 11 ಗಂಟೆಯಿಂದ ಮೂರು ಗಂಟೆ ವರೆಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ನಗರ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆದವರು ತಾವೇ ಬಂದು ಊಟ ಮಾಡಿಕೊಂಡು ಹೋಗಲು ಸೂಚಿಸಲಾಗಿದೆ. ಈಗ 25 ಸಾವಿರ ರೂಪಾಯಿ ಕೈಯಿಂದಲೇ ಸುರಿದು ಊಟದ ವ್ಯವಸ್ಥೆಯನ್ನು ಆರಂಭಿಸಿದ್ದೇವೆ. ಸರಕಾರದಿಂದ ಹಣ ಕ್ಲೈಮ್ ಮಾಡಲು ಆಗುತ್ತದೆಯೇ ನೋಡಬೇಕು ಎಂದಿದ್ದಾರೆ ಕಮಿಷನರ್ ಶಶಿಕುಮಾರ್.




ಕಮಿಷನರ್ ಕಚೇರಿಗೆ ತೆರಳುವುದಕ್ಕೂ ನಿರ್ಬಂಧ
ಸಾಮಾನ್ಯವಾಗಿ ಕಮಿಷನರ್ ಕಚೇರಿಗೆ ನೂರಾರು ಮಂದಿ ಆಗಮಿಸುತ್ತಾರೆ. ವಿವಿಧ ರೀತಿಯ ಅಗತ್ಯ ಕೆಲಸಗಳನ್ನು ಮಾಡಿಸುವುದಕ್ಕಾಗಿ ಕಚೇರಿಗೆ ಅಲೆದಾಡುತ್ತಾರೆ. ಆದರೆ, ಕೋವಿಡ್ ನಿರ್ಬಂಧ ಕಾರಣದಿಂದ ಮಂಗಳೂರು ಕಮಿಷನರ್ ಕಚೇರಿಗೆ ನೇರವಾಗಿ ಹೋಗುವಂತಿಲ್ಲ. ಹೊರಭಾಗದಲ್ಲಿ ಕಿಯೋಸ್ಕ್ ಮಾಡಲಾಗಿದ್ದು, ಅಲ್ಲಿಯೇ ಅರ್ಜಿಗಳನ್ನು ಕೊಡಬೇಕು. ಅಗತ್ಯ ಇದ್ದರೆ ಮಾತ್ರ ಕಮಿಷನರ್ ಅಥವಾ ಡಿಸಿಪಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.
Night curfew in Karnataka, Mangalore Police Commissioner Shashi Kumar organises free food for Police Personnel till May 4th by his expenses. Police staff have highly appreciated commissioner for his commendable service.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
09-06-26 05:03 pm
HK News Staffer
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm
ಹೃದಯಾಘಾತ ; ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಕೊಕ್ಕ...
08-06-26 04:42 pm