ಬ್ರೇಕಿಂಗ್ ನ್ಯೂಸ್
03-05-26 05:18 pm HK News Staffer ದೇಶ - ವಿದೇಶ
ನವದೆಹಲಿ, ಮೇ 3: ದೇಶದಲ್ಲಿ ಬಿರು ಬೇಸಿಗೆಯಿಂದ ಜನ ತತ್ತರಿಸಿರುವಾಗಲೇ ಭೀಕರ ಬರಗಾಲ ತಟ್ಟುವ ಆತಂಕ ಎದುರಾಗಿದೆ. ರಣ ಬಿಸಿಲಿನ ನಡುವೆಯೇ ಪ್ರಾಕೃತಿಕ ವೈಪರೀತ್ಯ ಎಲ್ ನಿನೋ ಎದುರಾಗಿದ್ದು ಈ ಸಲ ಮುಂಗಾರು ಮಳೆಗಿಂತಲೂ ಭಾರತದಲ್ಲಿ ಸುಡುವ ಬಿಸಿಲೇ ಜನರಿಗೆ ಹೆಚ್ಚು ಬಾಧಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಮಹಾಸಾಗರದಲ್ಲಿ ಮೇಲ್ಮೈ ನೀರಿನ ತಾಪಮಾನ ಹೆಚ್ಚುವುದರೊಂದಿಗೆ ಎಲ್ ನಿನೋ ಉದ್ಭವಿಸುತ್ತದೆ. ನೀರಿನ ತಾಪಮಾನ ಹೆಚ್ಚಿದೊಡನೆ ಜಗತ್ತಿನ ನಾನಾ ಭಾಗಗಳಿಗೆ ಪರೋಕ್ಷ ಪರಿಣಾಮ ಎದುರಾಗುತ್ತದೆ. ಸೂಪರ್ ಎಲ್ ನಿನೋ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟು ಮಾಡುವುದಲ್ಲದೆ, ಸಮುದ್ರದ ನೀರನ್ನು ತೀವ್ರವಾಗಿ ಬಿಸಿ ಏರಿಸುತ್ತದೆ.
ಸಾಮಾನ್ಯವಾಗಿ ಗಾಳಿ ಬೀಸುವುದರಿಂದ ಸಮುದ್ರದಲ್ಲಿ ನೀರಿನ ಚಲನೆ ಉಂಟಾಗುತ್ತದೆ. ಆಗ ಹವಾಮಾನ ಹಾಗೂ ಮಳೆಯ ಮೇಲೂ ಪರಿಣಾಮ ಬೀರುತ್ತದೆ. ಆದರೆ ಎಲ್ ನಿನೋ ಸಮಯದಲ್ಲಿ ಸಾಮಾನ್ಯವಾಗಿ ಒಂದೇ ಕಡೆ ಬೀಸುವ ಗಾಳಿ ದುರ್ಬಲವಾಗುತ್ತದೆ. ಉಷ್ಣಾಂಶ ಹೆಚ್ಚಿಸಬಲ್ಲ `ಸೂಪರ್ ಎಲ್‌ನಿನೋ’ ಇದೀಗ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿರುವ ಸೂಚನೆ ಲಭಿಸಿದೆ.
ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫೋರ್‌ಕಾಸ್ಟ್ ಪ್ರಕಾರ, ಈ ಬಾರಿ ಎಲ್ ನಿನೋ ಕಳೆದೊಂದು ಶತಮಾನದಲ್ಲೇ ಅತ್ಯಂತ ಪ್ರಬಲವಾಗಿ ತಟ್ಟುವ ಆತಂಕವಿದೆ. 2026ರ ಉತ್ತರಾರ್ಧದಿಂದಲೇ ಗರಿಷ್ಠ ತಾಪಮಾನ ಮುರಿದು ಹೊಸ ದಾಖಲೆ ಸೃಷ್ಟಿಸಬಹುದೆಂದು ಹೇಳಲಾಗುತ್ತಿದೆ. ವಿಜ್ಞಾನಿಗಳ ಪ್ರಕಾರ, ಭಾರತ ಸೇರಿದಂತೆ ಏಷ್ಯಾದ ದೇಶಗಳು ಇದರ ಹೊಡೆತಕ್ಕೆ ಸಿಲುಕಲಿವೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ ಕೆಲವು ಮಾಡೆಲ್‌ಗಳು ಇದನ್ನು `ಸೂಪರ್’ ಅಥವಾ `ಗಾಡ್ಜಿಲ್ಲಾ’ ಎಲ್‌ನಿನೋ ಎಂದು ವರ್ಣಿಸುತ್ತಿವೆ.
ಅಮೆರಿಕದಲ್ಲಿ ಪ್ರವಾಹ, ಭಾರತಕ್ಕೆ ಬರ
ಇದು ಪ್ರತಿ 2ರಿಂದ 7 ವರ್ಷಕ್ಕೊಮ್ಮೆ ಸಂಭವಿಸುವ ನೈಸರ್ಗಿಕ ಹವಾಮಾನ ಪ್ರಕ್ರಿಯೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಇದರ ಪರಿಣಾಮ ಜಾಗತಿಕ ಹವಾಮಾನ ವ್ಯವಸ್ಥೆಯನ್ನೇ ಬದಲಿಸುತ್ತದೆ. ಭಾರತದಲ್ಲಿ ನೈಋತ್ಯ ಮುಂಗಾರು ಮಳೆಯನ್ನು ದುರ್ಬಲಗೊಳಿಸುವುದಲ್ಲದೆ, ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿ ಭೀಕರ ಮಳೆಯನ್ನು ತಂದೊಡ್ಡಲಿದೆ. 2026ರ ಮಧ್ಯದಿಂದ ಇದು ಹೆಚ್ಚು ಸಕ್ರಿಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಸೂಚನೆ ಈಗಲೇ ಲಭ್ಯವಾಗಿದ್ದು ಭಾರತದಲ್ಲಿ ಎಲ್ಲ ಕಡೆಯೂ ಬಿಸಿಲು ಸುಡತೊಡಗಿದೆ.
ಮುಂಗಾರು ಮಳೆ ಕೊರತೆ
ಭಾರತದ ಮೇಲೆ ಶೇ.50ರಷ್ಟು ಎಲ್‌ನಿನೋ ಪರಿಣಾಮ ಬೀರುವ ಸಾಧ್ಯತೆಯಿದ್ದು ಮುಂಗಾರು ಮಳೆ ಸಾಮಾನ್ಯಕ್ಕಿಂತ 8-10% ಕಡಿಮೆಯಾಗಲಿದೆ. ಮೇನಿಂದ ಜೂನ್ ಅವಧಿಯಲ್ಲಿ ತೀವ್ರ ಬಿಸಿಲು, ಬಿಸಿಗಾಳಿ ಹೆಚ್ಚುವ ಸಾಧ್ಯತೆ ಇದೆ. ರಾತ್ರಿಯ ತಾಪಮಾನವೂ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಮುಂಗಾರು ಅವಲಂಬಿತ ಕೃಷಿ ಪ್ರದೇಶಗಳು ತೊಂದರೆಗೆ ಸಿಲುಕಲಿದ್ದು ಮಳೆ ಕೊರತೆಯಾದರೆ ಧಾನ್ಯಗಳು, ಬೆಳೆಗಳು, ತರಕಾರಿ ಉತ್ಪಾದನೆ ಕುಸಿಯುವ ಅಪಾಯ ಇದೆ. ಮುಂದಿನ ವರ್ಷ ಜಲಾಶಯಗಳು, ಕೆರೆಗಳು ಬೇಗನೇ ಖಾಲಿಯಾಗಿ ಕುಡಿಯುವ ನೀರಿಗೆ ಸವಾಲು ಎದುರಾಗಲಿದೆ.
ಈ ಹಿಂದೆ, 1982-83ರಲ್ಲಿ, 1977-78ರಲ್ಲಿ, 2015-16ರಲ್ಲಿ ಈ ಸೂಪರ್ ಎಲ್ ನಿನೋ ಜಗತ್ತಿನಲ್ಲಿ ಕಾಣಿಸಿಕೊಂಡಿತ್ತು. ಆ ವೇಳೆಗೆ, ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಂಡೋನೇಷ್ಯಾ ಹೀಗೆ ಹಲವು ದೇಶಗಳಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿತ್ತು. ಪೆರು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರಿ ಮಳೆ ಸುರಿದು ಪ್ರವಾಹ ಉಂಟಾಗಿತ್ತು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am