ಬ್ರೇಕಿಂಗ್ ನ್ಯೂಸ್
21-04-21 05:26 pm Mangalore Correspondent ಕರಾವಳಿ
ಮಂಗಳೂರು, ಎ. 21: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಹೇರಿದ ಹಿನ್ನೆಲೆಯಲ್ಲಿ ಜನರು ಭಾರೀ ಗೊಂದಲಕ್ಕೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಎಸ್ಪಿ ಋಷಿಕುಮಾರ್ ಸೋನವಾನೆ ಹಾಗೂ ಮಂಗಳೂರು ಕಮಿಷನರ್ ಶಶಿಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಯಾವುದು ಮಾಡಬಹುದು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟವಾಗಿ ರೂಪುರೇಷೆ ಇರುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಪಾಸ್ ಇದ್ದರಷ್ಟೇ ಮದುವೆ
ಈಗಾಗ್ಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ನಿಗದಿತ ಜಾಗದಲ್ಲೇ ಮಾಡಬಹುದು. ಆದರೆ, 50 ಜನರಿಗೆ ಸೀಮಿತ ಆಗಿರಬೇಕು. ಅದಲ್ಲದೆ, ಆಯಾ ವ್ಯಾಪ್ತಿಯ ಸ್ಥಳೀಯಾಡಳಿತಗಳಿಂದ ಪರವಾನಗಿ ಮತ್ತು ಭಾಗವಹಿಸುವ 50 ಮಂದಿಯ ವಿವರ ಒದಗಿಸಿ ಪಾಸ್ ಪಡೆಯಬೇಕು. ಅದರಲ್ಲಿ ಫೋಟೋಗ್ರಾಫರ್ಸ್ ಮತ್ತು ಅರ್ಚಕರು ಕೂಡ ಸೇರುತ್ತಾರೆ. ಇದು ವೀಕೆಂಡ್ ಮತ್ತು ಇತರೇ ದಿನಗಳಿಗೂ ಅನ್ವಯ.
50 ಜನರಿಗೆ ಮೀರದೆ ಕಾರ್ಯಕ್ರಮ ನಡೆಯಬೇಕು. ಅದರಲ್ಲಿ ಯಾವುದೇ ಸಾರ್ವಜನಿಕರು ಭಾಗವಹಿಸಲು ಅವಕಾಶ ಇಲ್ಲ. ಮದುವೆಯಲ್ಲಿ ಭಾಗವಹಿಸುವ ಮಂದಿ ತಮ್ಮ ಐಡಿ ಕಾರ್ಡ್ ಮತ್ತು ಸ್ಥಳೀಯಾಡತ ನೀಡಿರುವ ಪಾಸ್ ತೋರಿಸಿ ವಾಹನಗಳಲ್ಲಿ ಸಂಚರಿಸಬಹುದು. ಮದುವೆ ನಡೆಯುವ ಜಾಗದ ವ್ಯಾಪ್ತಿಯ ಪಂಚಾಯತ್, ನಗರಸಭೆ ಅಥವಾ ಕಾರ್ಪೊರೇಶನ್ ವ್ಯಾಪ್ತಿಯಾದರೆ ಆಯಾ ಕಚೇರಿಗಳಿಂದ ಪಾಸ್ ಪಡೆಯಬೇಕು.
ವೀಕೇಂಡಲ್ಲೂ ಪಾರ್ಸೆಲ್ ಅವಕಾಶ
ಇನ್ನು ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಬೆಳಗ್ಗೆ 6ರಿಂದ 10ರ ವರೆಗೆ ಅವಕಾಶ ಇರುತ್ತದೆ. ಹೋಮ್ ಡೆಲಿವರಿ ಮಾಡುವ ಮಂದಿಗೆ ಅವಕಾಶ ನೀಡಲಾಗಿದ್ದು, ರೆಸ್ಟೋರೆಂಟ್, ಹೊಟೇಲ್ ಗಳಿಂದ ತಿಂಡಿ, ತಿನಿಸು ಒಯ್ಯುವುದಕ್ಕೆ ಆಸ್ಪದ ನೀಡಲಾಗಿದೆ. ದೂರ ಪ್ರಯಾಣದ ಬಸ್, ರೈಲು, ವಿಮಾನ ಸೇವೆಗಳಿಗೂ ಸಂಚಾರಕ್ಕೆ ಅವಕಾಶ ಇದೆ. ಸಂಚರಿಸುವ ಮಂದಿ ತಾವು ಪ್ರಯಾಣಿಸುವ ಟಿಕೆಟನ್ನು ತೋರಿಸಿ ಟ್ಯಾಕ್ಸಿ ಇನ್ನಿತರ ವಾಹನಗಳಲ್ಲಿ ಸಂಚರಿಸಬಹುದು.
ಇನ್ನು ಎಲ್ಲ ರೀತಿಯ ಧಾರ್ಮಿಕ ಆಚರಣೆಗಳು, ಉತ್ಸವಗಳನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಆಚರಣೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೂಜಾ ಸೇವೆಯಲ್ಲಿ ಒಳಗೊಳ್ಳುವ ಸಿಬಂದಿ ಮಾತ್ರ ತಮ್ಮ ಕರ್ತವ್ಯಗಳನ್ನು ಮಾಡಲು ಅವಕಾಶ ಇರುತ್ತದೆ. ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಇರುವುದಿಲ್ಲ.
ಶಾಲೆ, ಕಾಲೇಜು, ಥಿಯೇಟರ್ ಪೂರ್ತಿ ಬಂದ್
ಎ.21ರಿಂದ ಮೇ 4ರ ವರೆಗೆ ಶಾಲೆ, ಕಾಲೇಜು ಸೇರಿದಂತೆ ಟ್ರೈನಿಂಗ್ ಸೆಂಟರ್ ಗಳಿಗೆ ಪೂರ್ತಿಯಾಗಿ ಮುಚ್ಚುವಂಚೆ ರಾಜ್ಯ ಸರಕಾರ ಸೂಚನೆ ನೀಡಿದೆ. ಆದರೆ, ಆನ್ ಲೈನ್ ಮತ್ತು ದೂರ ಶಿಕ್ಷಣವನ್ನು ನೀಡಲು ಅನುಮತಿ ನೀಡಲಾಗಿದೆ. ಇದೇ ರೀತಿ ಎಲ್ಲಾ ರೀತಿಯ ಸಿನೆಮಾ ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ನಾಶಿಯಂಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜು ಕೊಳಗಳು, ಮನೋರಂಜನಾ ಉದ್ಯಾನಗಳು, ಬಾರ್ ಗಳು, ಸಭಾಂಗಣಗಳಲ್ಲಿ ಚಟುವಟಿಕೆ ನಿಷೇಧಿಸಲಾಗಿದೆ.
ಬಾರ್ ಗಳಿಂದಲೂ ಪಾರ್ಸೆಲ್ ಅವಕಾಶ
ಬಾರ್ ಗಳಲ್ಲಿ ಕುಳಿತು ಕುಡಿಯುವಂತಿಲ್ಲ. ಬದಲಿಗೆ, ಅಲ್ಲಿಂದ ಮದ್ಯ ಮತ್ತು ರೆಡಿ ಐಟಂಗಳನ್ನು ಪಾರ್ಸೆಲ್ ಒಯ್ಯುವುದಕ್ಕೆ ಅವಕಾಶ ನೀಡಲಾಗಿದೆ. ರೆಸ್ಟೋರೆಂಟ್ ಗಳಿಂದಲೂ ಪಾರ್ಸೆಲ್ ಗೆ ಅವಕಾಶ. ಲಾಡ್ಜಿಂಗ್ ಹೊಟೇಲ್ ಗಳಲ್ಲಿ ಅತಿಥಿಗಳಿಗೆ ಮಾತ್ರ ಸೇವೆಯನ್ನು ನೀಡಲು ಅವಕಾಶ ಇರುತ್ತದೆ. ಅಂತಾರಾಜ್ಯ ಸಂಚಾರಕ್ಕೆ ಪ್ರತ್ಯೇಕ ಅನುಮತಿ ಅಗತ್ಯವಿರುವುದಿಲ್ಲ. ಸರಕು, ಪ್ರಯಾಣಿಕ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ ಇತ್ಯಾದಿ ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Night curfew in Karnataka Marriage organisers must first register the name of Guests including Photographer and Videographer at the Mangalore City Corporation or Panchayath for smooth function said Dc Dr Rajendra Kumar during a Joint press meet held at the Dc office.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 12:36 pm
HK News Desk
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
27-11-24 12:31 pm
Mangalore Correspondent
Brahmavara Police Station, Udupi: ಪೊಲೀಸರ ವಶದ...
26-11-24 11:23 pm
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm