ಬ್ರೇಕಿಂಗ್ ನ್ಯೂಸ್
22-04-21 11:05 pm Mangaluru Crime correspondent ಕರಾವಳಿ
ಮಂಗಳೂರು, ಎ.22: ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ದೃಶ್ಯ ಸಹಿತ ಸುದ್ದಿ ಮಾಡಿದ್ದ ಹೆಡ್ ಲೈನ್ ಕರ್ನಾಟಕ ವರದಿ ಭಾರೀ ಇಂಪ್ಯಾಕ್ಟ್ ಆಗಿದೆ. ಮಂಗಳೂರು ಕಮಿಷನರ್ ಮತ್ತು ಡಿಸಿಪಿಯ ಸೂಚನೆಯಂತೆ ಸುರತ್ಕಲ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಹೆಡ್ ಲೈನಲ್ಲಿ ಸುದ್ದಿ ಪ್ರಕಟಗೊಂಡು ವೈರಲ್ ಆಗುತ್ತಿದ್ದಂತೆ ಅದನ್ನು ವಿಡಿಯೋ ಮಾಡಿದ್ದ ಸುರತ್ಕಲ್ ನಿವಾಸಿ ಜೀವನ್ ಘಟನೆಯ ವಿಡಿಯೋವನ್ನು ಮುಂಬೈನ ಅನಿಮಲ್ ಕೇರ್ ಎನ್ ಜಿಓ ಒಂದಕ್ಕೆ ಕಳುಹಿಸಿದ್ದರು. ಅದರ ಪ್ರತಿನಿಧಿಗಳು ಕರೆ ಮಾಡಿ, ಪೊಲೀಸರಿಗೆ ದೂರು ನೀಡಲು ತಿಳಿಸಿದ್ದಾರೆ. ಅದರಂತೆ, ಜೀವನ್ ಸುರತ್ಕಲ್ ಠಾಣೆಗೆ ತೆರಳಿದ್ದು ಅಲ್ಲಿನ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಏನಪ್ಪಾ.. ನಾಯಿ ವಿಚಾರ ಹಿಡ್ಕೊಂಡು ಕಂಪ್ಲೇಂಟ್ ಮಾಡಲು ಬಂದಿದ್ದೀಯಲ್ಲಾ.. ಬೇರೇನು ಕೆಲ್ಸ ಇಲ್ವಾ ನಿಂಗೆ ಎಂದು ದಬಾಯಿಸಿ ಕಳಿಸಿದ್ದಾರೆ.

ಈ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಸುಹಾನ್ ಆಳ್ವ, ಡಿಸಿಪಿ ಹರಿರಾಂಗೆ ವಿಷಯ ತಿಳಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಡಿಸಿಪಿ ಹಾಕಿದ್ದ ಮೆಸೇಜನ್ನು ಸುರತ್ಕಲ್ ಪೊಲೀಸರಿಗೆ ತಿಳಿಸಿದಾಗ, ಅಲ್ಲಿನವರು ಎಲರ್ಟ್ ಆಗಿದ್ದಾರೆ. ಕೂಡಲೇ ಎಫ್ಐಆರ್ ಮಾಡಿದ್ದಾರೆ. ಜೀವನ್ ದೂರುದಾರನಾದರೆ, ಸುಹಾನ್ ಸಾಕ್ಷಿಯಾಗಿ ಸಹಿ ಹಾಕಿದ್ದು ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳು ಕೊಪ್ಪಳ ಮೂಲದವರು ಎನ್ನಲಾಗುತ್ತಿದ್ದು ಒಬ್ಬನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನನ್ನೂ ಬಂಧಿಸುವುದಾಗಿ ಡಿಸಿಪಿ ಭರವಸೆ ವ್ಯಕ್ತಪಡಿಸಿದ್ದಾರೆ.
ಎ.15 ರಂದು ರಾತ್ರಿ 8.30 ರ ಸುಮಾರಿಗೆ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದಿದ್ದ ಘಟನೆ ನಡೆದಿತ್ತು. ಎನ್ಐಟಿಕೆ ಫ್ಲೈ ಓವರ್ ಬಳಿ ಘಟನೆ ನಡೆದಿದ್ದು ಇದನ್ನು ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದ ಮಂದಿ ವಿಡಿಯೋ ಮಾಡಿದ್ದರು.
ನಾಯಿಯನ್ನು ಬೈಕಿಗೆ ಕಟ್ಟಿ ದರ ದರನೆ ಎಳೆದೊಯ್ದ ಪಾಪಿಗಳು ! ಮಂಗಳೂರಿನಲ್ಲೇ ಮನಕಲಕುವ ಘಟನೆ !
The Surathkal Police have succeeded in arresting one Person in connection to a per dog being tied to a two-wheeler and dragged along a road at NITk, Surathkal in Mangalore.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm