ಬ್ರೇಕಿಂಗ್ ನ್ಯೂಸ್
04-05-21 05:13 pm Mangalore Correspondent ಕರಾವಳಿ
ಮಂಗಳೂರು, ಮೇ 4 : ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳಿಗೆ ಅಂತ್ಯಸಂಸ್ಕಾರ ನಡೆಸಲು ಸ್ವತಃ ರಕ್ತಸಂಬಂಧಿಗಳೇ ಹಿಂಜರಿಯುತ್ತಿದ್ದರೆ, ಇಲ್ಲೊಬ್ಬರು ಕಾರ್ಪೊರೇಟರ್ ಜನಸೇವೆಯೇ ಜನಾರ್ದನ ಸೇವೆ ಎನ್ನುತ್ತಾ ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ವಾರಸುದಾರರಿಲ್ಲದ, ಸಂಬಂಧಿಕರು ತ್ಯಜಿಸಿದ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್ ವಾರ್ಡಿನ ಕಾರ್ಪೊರೇಟರ್ ಗಣೇಶ್ ಕುಲಾಲ್, ಎರಡು ವಾರಗಳಿಂದ ತಮ್ಮ ವಿಭಿನ್ನ ಕಾರ್ಯದಿಂದ ಗಮನ ಸೆಳೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಸ್ವತಃ ಸಂಸ್ಕಾರ ನೆರವೇರಿಸಿದ್ದಾರೆ.
12 ಶವಗಳ ಪೈಕಿ 9 ಕೊರೊನಾ ಸೋಂಕಿನಿಂದ ಮೃತಪಟ್ಟದ್ದಾಗಿದ್ದು ಉಳಿದ ಮೂರು ಮಂದಿ ಇತರೇ ಕಾಯಿಲೆಯಿಂದ ಮೃತಪಟ್ಟವರು. ಇದರಲ್ಲಿ ಕೇರಳ ಹಾಗೂ ಮಡಿಕೇರಿ ಮೂಲದ ವಾರೀಸುದಾರರಿಲ್ಲದ ಶವಗಳೂ ಇದ್ದವು. ಕುಟುಂಬಸ್ಥರು ನಿರಾಕರಿಸಿದ ಎರಡು ಮೃತದೇಹಗಳಿಗೆ ಗಣೇಶ ಕುಲಾಲ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಿಶೇಷ ಅಂದ್ರೆ ಒಂಬತ್ತು ಶವಗಳು ಮಂಗಳೂರು ತಾಲೂಕಿನದ್ದೇ ಆಗಿದ್ದು ಸಂಬಂಧಿಕರಿದ್ದರೂ ಅಂತ್ಯಕ್ರಿಯೆ ಸಾಧ್ಯವಾಗದೆ ಗಣೇಶ ಕುಲಾಲರೇ ಸ್ವತಃ ಖರ್ಚಿನಲ್ಲಿ ಸಂಸ್ಕಾರ ನೆರವೇರಿಸಿದ್ದಾರೆ. ಐವರು ಮಹಿಳೆಯರಾಗಿದ್ದು, ಏಳು ಮಂದಿ ಪುರುಷರು. ಎಲ್ಲ ಶವಗಳನ್ನೂ ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ವಿಧಿವತ್ತಾಗಿ ಭಸ್ಮ ಮಾಡಿದ್ದಾರೆ.
ಗಣೇಶ ಕುಲಾಲ್ ಸಾಮಾಜಿಕವಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಇದ್ದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಜೊತೆಗೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಉಚಿತ ವ್ಯವಸ್ಥೆಯನ್ನೂ ನೆರವೇರಿಸಿದ್ದಾರೆ. ಕೊರೊನಾ ಸೋಂಕು ಸಮಾಜದಲ್ಲಿ ಭೀತಿ ಮೂಡಿಸಿರುವಾಗ, ಆಸ್ಪತ್ರೆಯಲ್ಲಿ ಶವಗಳನ್ನು ಬಿಟ್ಟು ಸ್ವಂತ ಸಂಬಂಧಿಗಳೇ ದೂರ ಹೋಗುತ್ತಿರುವಾಗ ಒಬ್ಬ ಜನಪ್ರತಿನಿಧಿಯಾಗಿ ಗಣೇಶ್ ಕುಲಾಲ್ ಉತ್ತಮ ಕಾರ್ಯ ಮಾಡುತ್ತಿದ್ದು ತಮ್ಮ ಕೆಲಸದಿಂದಲೇ ಗಮನ ಸೆಳೆದಿದ್ದಾರೆ.
Mangalore MCC Derebail Corporater Ganesh Kulal is giving dignified burial to unclaimed Covid-19 victims in the city. The Corporater has gained huge appreciation for his humanitarian work.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm