ಬ್ರೇಕಿಂಗ್ ನ್ಯೂಸ್
05-05-21 02:25 pm Mangalore Correspondent ಕರಾವಳಿ
ಮಂಗಳೂರು, ಮೇ 5: ದೇಶದಲ್ಲಿ ಆಮ್ಲಜನಕ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬಹರೈನ್ ದೇಶ ಸಹಾಯ ಹಸ್ತ ಚಾಚಿದೆ. 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ ಹಡಗು ಮಂಗಳೂರಿನ ಎನ್ಎಂಪಿಟಿ ಬಂದರು ತಲುಪಿದೆ.
ಭಾರತ ಮತ್ತು ಬಹರೇನ್ ನಡುವಿನ ಒಪ್ಪಂದ ಪ್ರಕಾರ ಸಮುದ್ರ ಸೇತು ಯೋಜನೆಯಡಿ ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಹಡಗು ಆಕ್ಸಿಜನ್ ಟ್ಯಾಂಕರನ್ನು ಹೊತ್ತು ತಂದಿದೆ. 20 ಮೆಟ್ರಿಕ್ ಟನ್ ತೂಕದ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರನ್ನು ಹಡಗಿನಲ್ಲಿ ತರಲಾಗಿದ್ದು ಮಧ್ಯಾಹ್ನ ಸುಮಾರಿಗೆ ಎನ್ಎಂಪಿಟಿ ಬಂದರಿನಲ್ಲಿ ತಂದಿರಿಸಲಾಗಿದೆ.
ಆಕ್ಸಿಜನ್ ಹಡಗು ಬರುವ ಹಿನ್ನೆಲೆಯಲ್ಲಿ ಎನ್ಎಂಪಿಟಿ ಬಂದರಿನಲ್ಲಿ ಇತರೇ ಹಡಗುಗಳನ್ನು ನಿರ್ಬಂಧಿಸಲಾಗಿತ್ತು. ಬಂದರಿನಲ್ಲಿ ಎಲ್ಲ ಶಿಪ್ಪಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಸರಕು ನಿರ್ವಹಣೆಯ ಕ್ರೇನ್ ಗಳನ್ನು ಆಕ್ಸಿಜನ್ ಟ್ಯಾಂಕರ್ ಇಳಿಸಲು ಬಳಸಿಕೊಳ್ಳಲಾಗಿದೆ.
ಈಗಾಗ್ಲೇ ಭಾರತದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ನೂರಾರು ಮಂದಿ ಸಾವನ್ನಪ್ಪುತ್ತಿದ್ದು ಹಲವಾರು ನೆರೆ ರಾಷ್ಟ್ರಗಳು ನೆರವು ನೀಡುತ್ತಿವೆ. ಯುಎಇ, ಸೌದಿ ಅರೇಬಿಯಾ ರಾಷ್ಟ್ರಗಳು ಈಗಾಗ್ಲೇ ನೆರವು ನೀಡಿದ್ದು ಬಹರೈನ್ ಈಗ 40 ಮೆಟ್ರಿಕ್ ಟನ್ ಆಕ್ಸಿಜನ್ ಕಳುಹಿಸಿ ಕೊಟ್ಟಿದೆ.
ಕೇಂದ್ರ ಸರಕಾರದ ಸೂಚನೆಯಂತೆ ಮಂಗಳೂರು ಮೂಲಕ ಲಿಕ್ವಿಡ್ ಆಕ್ಸಿಜನ್ ಬಂದಿದ್ದು ಅದನ್ನು ಯಾವ ಜಿಲ್ಲೆಗೆ ಪೂರೈಸಬೇಕು ಎಂಬ ಬಗ್ಗೆ ರಾಜ್ಯ ಸರಕಾರ ನಿರ್ಧರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
Navy Deployed Warship I N S Talwar brings 20 metric tonnes of Medical liquid oxygen to Mangalore NMPT Port from Bahrain as a result of skyrocketing covid-19 infections.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm