ಬ್ರೇಕಿಂಗ್ ನ್ಯೂಸ್
09-05-21 07:00 pm Mangaluru Correspondent ಕರಾವಳಿ
ಮಂಗಳೂರು, ಮೇ 9: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೈಕಂಪಾಡಿಯ ಮಲಬಾರ್, ಲಕ್ಷ್ಮಿ ಹಾಗೂ ಕಾರ್ನಾಡ್ ಆಕ್ಸಿಜನ್ ರೀಫಿಲ್ಲಿಂಗ್ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ,ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಆಧಿಕಾರಿ ಡಾ. ಕುಮಾರ್, ಸಹಾಯಕ ಔಷಧಿ ನಿಯಂತ್ರಕರುಗಳಾದ ರಮಾಕಾಂತ್ ಕುಂಟೆ, ಶಂಕರ್ ನಾಯ್ಕ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಆಕ್ಸಿಜನ್ ಫಿಲ್ಲಿಂಗ್ ಘಟಕಗಳಿಗೆ ಯಾವ ಜಿಲ್ಲೆಯ ಆಕ್ಸಿಜನ್ ಉತ್ಪಾದನಾ ಘಟಕಗಳಿಂದ ಎಷ್ಟು ಪ್ರಮಾಣದ ಆಕ್ಸಿಜನ್ ಬರುತ್ತದೆ ಹಾಗೂ ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದಿಸುವ ಬಗ್ಗೆ ಅವುಗಳನ್ನು ರೀಫಿಲ್ಲಿಂಗ್ ಮಾಡಿ ಯಾವ ಯಾವ ತಾಲೂಕಿನ ಆಸ್ಪತ್ರೆಗಳಿಗೆ ಕಳಿಸುತ್ತಿರುವುದಾಗಿ ಮಾಹಿತಿ ಪಡೆದರು.
ಜಿಲ್ಲೆಯಲ್ಲಿನ ಮೂರು ಆಕ್ಸಿಜನ್ ಉತ್ಪಾದನೆ ಹಾಗೂ ರೀಫಿಲ್ಲಿಂಗ್ ಘಟಕಗಳಲ್ಲಿನ ಆಕ್ಸಿಜನ್ ಅನ್ನು ಆಸ್ಪತ್ರೆಗಳಲ್ಲಿನ ರೋಗಿಗಳ ಚಿಕಿತ್ಸೆಗೆ ಬೇಡಿಕೆಗನುಗುಣವಾಗಿ ಪೂರೈಕೆ ಆಗಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಯಾವುದೇ ಆಸ್ಪತ್ರೆಯಲ್ಲಿ ಆಗದಂತೆ ಮತ್ತು ಅವುಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯಕ್ಕನುಸಾರವಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಕೈಗಾರಿಕೆಗೆ ಬಳಸಲು ನೀಡುವ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಆಕ್ಸಿಜನ್ ಒದಗಿಸಬೇಕು ಎಂದು ಸೂಚಿಸಿದರಲ್ಲದೆ ಸ್ಥಳೀಯವಾಗಿ ಉತ್ಪಾದಿಸುತ್ತಿರುವ ಪ್ರಮಾಣವನ್ನು ಹೆಚ್ಚಿಸಲು ಮುಂದಾಗುವಂತೆ ಆಕ್ಸಿಜನ್ ತಯಾರಕ ಘಟಕಗಳಿಗೆ ಸೂಚನೆ ನೀಡಿದರು.
ಕರೋನಾ ತೀವ್ರಗೊಂಡ ರೋಗಿಗಳಿಗೆ ಮಾತ್ರ ಆಕ್ಸಿಜನ್ ಪೂರೈಸಲಾಗುತ್ತದೆ. ಯಾರಿಗೆ ನೀಡಬೇಕು, ಯಾರಿಗೆ ಅವಶ್ಯಕತೆ ಇದೆ ಎನ್ನುವುದು ಜಿಲ್ಲಾಡಳಿತ ತೀರ್ಮಾನಿಸುತ್ತದೆ. ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಹಾಸಿಗೆ ನೀಡಲಾಗುವುದು ಎಂದರು.
ಡ್ಯೂರೋ ಸಿಲಿಂಡರ್ ಗಳಲ್ಲಿ ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಬಹುದಾಗಿದ್ದು ಅವುಗಳನ್ನು ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್ ಗಳ ಬಳಕೆಗೆ ನೀಡಬಹುದಾಗಿದೆ. ಅವುಗಳು ಎರಡು ದಿನ ಬಳಕೆಗೆ ಬರುತ್ತವೆ. ಅವುಗಳನ್ನು ವಿದೇಶದಿಂದ ತರಿಸಲು ಯೋಜನೆ ರೂಪಿಸಲಾಗಿದೆ. ಆಕ್ಸಿಜನ್ ಘಟಕಗಳ ಮೇಲುಸ್ತುವಾರಿಗೆ ಅಧಿಕಾರಿಗಳನ್ನು ದಿನದ 24 ಗಂಟೆಗೆ ಪಾಳಿಯ ಮೇಲೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಸಚಿವರಿಗೆ ತಿಳಿಸಿದರು.
Minister Kota Srinivas Poojary, Mla Bharath Shetty and DC Dr Rajendra Kumar visited three oxygen refilling plant units loacted in Mangalore.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 09:36 pm
Mangalore Correspondent
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
Mangalore, Lokayukta Complaint: ಸರಕಾರಿ ಕೆಲಸ ವ...
27-11-24 08:16 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm