ಬ್ರೇಕಿಂಗ್ ನ್ಯೂಸ್
10-05-21 11:56 am Mangalore Correspondent ಕರಾವಳಿ
ಮಂಗಳೂರು, ಮೇ 10: ಲಾಕ್ಡೌನ್ ವೇಳೆ ವಾಹನ ಬಳಸುವಂತಿಲ್ಲ ಎಂದು ನಿಯಮ ಹೇರಿದ್ದರೂ, ಇಂದು ಬೆಳಗ್ಗೆ ಜನ, ವಾಹನಕ್ಕೆ ರಸ್ತೆಯಲ್ಲಿ ಜಾಗ ಇಲ್ಲದಾಗಿತ್ತು. ಅಂಗಡಿಗಳ ಮುಂದೆ ಕಿಲೋ ಮೀಟರ್ ಉದ್ದಕ್ಕೆ ಸಾಲುಗಟ್ಟಿದ್ದ ಜನರು ಕೊಳ್ಳುಬಾಕತನದ ಧಾವಂತಕ್ಕೆ ಕನ್ನಡಿ ಹಿಡಿದಿದ್ದರು.
ಮಂಗಳೂರು ನಗರ ಭಾಗದಲ್ಲಿ ಎಲ್ಲ ಕಡೆಯೂ ಒಂದೇ ಸ್ಥಿತಿ. ಜನವೋ ಜನ. ನಾಳೆಯೇ ಎಲ್ಲ ಮುಗಿದೇ ಹೋಯ್ತು ಅನ್ನುವ ರೀತಿ ಜನ ಖರೀದಿಗೆ ಬಂದಿದ್ದು ಧಾವಂತದಲ್ಲಿದ್ದರು. ಬಿಜೈ, ಕದ್ರಿ ತರಕಾರಿ ಮಾರುಕಟ್ಟೆಗಳಲ್ಲಿ ಜನರ ಭರಾಟೆ ಎಷ್ಟಿತ್ತೆಂದರೆ, ಒಂಬತ್ತು ಗಂಟೆಯ ಒಳಗೆ ನಮಗೆ ಸಿಗಲ್ಲ. ಪೊಲೀಸರು ಬಂದು ಓಡಿಸುತ್ತಾರೆಂಬ ಭಯದಲ್ಲಿ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಚೀಲಕ್ಕೆ ತುಂಬಿಸುತ್ತಿದ್ದರು. ಅಂಗಡಿಯವನು ಹೇಳಿದ ರೇಟ್ ಕೊಟ್ಟು ಹಣ್ಣು ತರಕಾರಿಯನ್ನು ಪಡೆಯುತ್ತಿದ್ದರು.



ದಿನಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪಡೆಯುತ್ತಿದ್ದುದು ಕೆಲವೇ ಜನ. ಬಹುತೇಕ ಮಂದಿ ಆಲ್ಫೋನ್ಸ್ ಮಾವಿನ ಹಣ್ಣು , ಕಿಲೋ 250 ಕೊಟ್ಟು ಏಪಲ್ ಖರೀದಿ ಮಾಡುತ್ತಿದ್ದರು. ಉರ್ವಾದಲ್ಲಿ ಒಬ್ಬ ಹಣವಂತನ ದಾಹ ಹೇಗಿತ್ತು ಅಂದ್ರೆ ಅಲ್ಲಿನ ಹಾಪ್ ಕಾಮ್ಸ್ ನಲ್ಲಿದ್ದ ಎಲ್ಲ ಹಣ್ಣುಗಳನ್ನೂ ಒಂದೇ ದೃಷ್ಟಿಯಲ್ಲಿ ಖರೀದಿಸಿ ಬಿಟ್ಟಿದ್ದ. ಕಾರಿನಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತುಂಬಿಸ್ಕೊಂಡು ಹೊರ ನಡೆದಿದ್ದು ಅಲ್ಲಿ ನೋಡುತ್ತಾ ನಿಂತಿದ್ದ ಸಾಮಾನ್ಯ ಜನರನ್ನು ಅಣಕಿಸಿದಂತಿತ್ತು.
ಆದಷ್ಟು ಸ್ಥಳೀಯ ಅಂಗಡಿಗಳಿಗೆ ನಡೆದುಕೊಂಡೇ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಪೊಲೀಸ್ ಕಮಿಷನರ್ ಮನವಿ ಮಾಡಿದ್ದರು. ಅಸಹಾಯಕರು ಮಾತ್ರ ಗ್ರೋಸರಿ ಅಂಗಡಿ ದೂರದಲ್ಲಿದ್ದರೆ, ವಾಹನದಲ್ಲಿ ಸಾಗಲು ಅವಕಾಶ ಕೊಟ್ಟಿದ್ದರು. ಆದರೆ, ಬೆಳಗ್ಗೆ ನೋಡಿದರೆ ಎಲ್ಲರೂ, ಕಾರು ಬೈಕ್ ಹಿಡಿದುಕೊಂಡು ಬಂದಿದ್ದು ನಗರ ಪೂರ್ತಿ ಬ್ಲಾಕ್ ಆಗಿತ್ತು. ಕದ್ರಿ ಪೊಲೀಸ್ ಠಾಣೆ ಮುಂದೆ ಪೊಲೀಸರು ವಾಹನ ನಿಲ್ಲಿಸಿ ಹಿಂದಿರುಗಿ ಹೋಗುವಂತೆ ಸೂಚಿಸಿ ಕಳಿಸುತ್ತಿದ್ದರು. ಅಗತ್ಯ ವಸ್ತು ಬೇಕಿದ್ದರೆ ನಿಮ್ಮಲ್ಲೇ ಇದ್ಯಲ್ಲಾ.. ನೀವ್ಯಾಕೆ ಸಿಟಿ ಒಳಗೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ಕೆಲವರು ಒಳದಾರಿಗಳಿಂದ ಬಿಜೈ, ಕದ್ರಿಗೆ ತೆರಳುತ್ತಿದ್ದರು.




ಉರ್ವಾ ಸ್ಟೋರ್ ಬಳಿಯಿರುವ ಸೂಪರ್ ಮಾರ್ಕೆಟ್ ನಲ್ಲಿ ನೂರೈವತ್ತು ಮೀಟರ್ ಉದ್ದಕ್ಕೆ ಜನರು ಕ್ಯೂ ನಿಂತಿದ್ದರು. ಅಂಗಡಿಯವರು ಸರದಿಯಲ್ಲಿ ಬರುವಂತೆ ಹೇಳಿದ್ದರಿಂದ ಒಮ್ಮೆಗೆ ಮೂರ್ನಾಲ್ಕು ಜನಕ್ಕೆ ಮಾತ್ರ ಒಳಬಿಡುತ್ತಿದ್ದರು. ಹತ್ತು ಗಂಟೆ ಕಳೆದರೂ ಅಲ್ಲಿ ಸರತಿ ಸಾಲು ಕಡಿಮೆಯಾಗಲಿಲ್ಲ.
ಕಳೆದ ಎರಡು ದಿನಗಳಲ್ಲಿ ಮಂಗಳೂರಿನಲ್ಲಿ ದಿನಸಿ ಅಂಗಡಿ ಬಂದ್ ಮಾಡಿದ್ದು ಮತ್ತು ಇನ್ನು 14 ದಿನ ಫುಲ್ ಲಾಕ್ಡೌನ್ ಆಗುತ್ತೆ ಎನ್ನುವ ಭಯದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಆದರೆ, ಈ ಪೈಕಿ ಹೆಚ್ಚಿನ ಮಂದಿ ನಗರ ಪ್ರದೇಶದ ಕೊಳ್ಳುಬಾಕರು. ಅಗತ್ಯ ಇಲ್ಲದಿದ್ದರೂ, ತಿಂಗಳಿಗೆ ಬೇಕಾಗುವಷ್ಟು ಕೂಡಿಡುವ ಹಪಹಪಿ ಅವರಲ್ಲಿತ್ತು. ಇದರಿಂದಾಗಿ ಕಾರುಗಳಲ್ಲಿ ಬರುತ್ತಿದ್ದ ಖರೀದಿದಾರರ ಧಾವಂತ ನಗರ ಪ್ರದೇಶದ ಜನರ ಮನಸ್ಥಿತಿಯನ್ನು ಬಿಚ್ಚಿಟ್ಟಿತ್ತು.
Massive crowd in Mangalore found near markets places in city where people were found to panic buying essential items violating the covid norms. The police couldn't control the crowd many cars and bikes were seized on the first day of 14 day lockdown announced in Karnataka.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm