ಬ್ರೇಕಿಂಗ್ ನ್ಯೂಸ್
10-05-21 02:08 pm Mangalore Correspondent ಕರಾವಳಿ
ಮಂಗಳೂರು, ಮೇ 10: 14 ದಿನಗಳ ಕಠಿಣ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ವಾಹನ ರಸ್ತೆಗೆ ತರಲು ಅವಕಾಶ ಇರಲಿಲ್ಲ. ಆದರೆ, ಮಂಗಳೂರಿನ ಬಹುತೇಕ ಜನ ಇಂದು ಅಪಾರ್ಥ ಮಾಡಿಕೊಂಡಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೆಸರಲ್ಲಿದ್ದ ಮೆಸೇಜ್ ಒಂದನ್ನು ನೋಡಿ, ಹೆಚ್ಚಿನವರು ವಾಹನ ಏರಿಕೊಂಡು ಸವಾರಿ ಹೊರಟಿದ್ದರು. ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಹೈರಾಣಾಗಿ ಹೋದರು.
ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ನೂರಾರು ವಾಹನಗಳು ಸೇರಿದ್ದವು. ಪೊಲೀಸರು ಬ್ಯಾರಿಕೇಡ್ ಹಾಕಿ ಅಡ್ಡಗಟ್ಟಿದ್ದರು. ಲಾಕ್ಡೌನಲ್ಲಿ ಕಾರು ಹಿಡ್ಕೊಂಡು ಬರೋಕೆ ಅವಕಾಶ ಇಲ್ಲವೆಂದು ಗೊತ್ತಿಲ್ವಾ ಎಂದು ಸಾರ್ವಜನಿಕರಲ್ಲಿ ಆವಾಜ್ ಹಾಕ್ತಿದ್ರು. ಆದರೆ, ಹೆಚ್ಚಿನ ಮಂದಿ ಮಾಜಿ ಎಂಎಲ್ಸಿ ಐವನ್ ಡಿಸೋಜ ಹೆಸರಲ್ಲಿ ಹಾಕಿದ್ದ ವಾಟ್ಸಪ್ ಮೆಸೇಜ್ ತೋರಿಸಿದ್ರು. ಹೀಗೆ ಪೊಲೀಸರ ಬಳಿ ವಾಗ್ವಾದ ಮಾಡಿದವರಲ್ಲಿ ಜನಸಾಮಾನ್ಯರೂ ಇದ್ದರು. ವ್ಯಾಪಾರೋದ್ಯಮ ಹೊಂದಿದ್ದ ಶ್ರೀಮಂತರೂ ಇದ್ದರು.
ಕಂಕನಾಡಿಯಲ್ಲಿ ವ್ಯಾಪಾರ ಸಂಸ್ಥೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಕುಲಶೇಖರದಿಂದ ದೊಡ್ಡ ಕಾರಿನಲ್ಲಿ ಬಂದಿದ್ದರು. ಪೊಲೀಸರು ಕೇಳಿದ್ದಕ್ಕೆ ಈರುಳ್ಳಿ ಆಗಬೇಕಿತ್ತು, ಹಾಗೆ ಬಂದಿದ್ದೇನೆ ಎಂದ್ರು. ನಿಮ್ಗೆ ಈರುಳ್ಳಿ ಕುಲಶೇಖರದಲ್ಲಿ ಸಿಕ್ಕಿಲ್ವಾ ಎಂದು ಪೊಲೀಸರು ಕೇಳಿದ್ರು. ಸೆಂಟ್ರಲ್ ಮಾರ್ಕೆಟಿಗೆಂದು ಬಂದಿದ್ದೇನೆ. ಐವಾನ್ ಡಿಸೋಜರ ಮೆಸೇಜ್ ನೋಡಿ ಬಂದಿದ್ದೀವಿ. ಸಾಮಗ್ರಿ ತರಲು ಹೋಗಬಹುದೆಂದು ಹೇಳಿದ್ದರು. ವಿಧಾನ ಪರಿಷತ್ ಸದಸ್ಯರ ಮಾತಿಗೆ ಬೆಲೆ ಇಲ್ವಾ.. ಬೇಕಿದ್ದರೆ ಅವರಲ್ಲೇ ಕೇಳಿ ಎಂದು ಫೋನಾಯಿಸಿ ಪೊಲೀಸರ ಕೈಗೆ ಕೊಡಲು ಯತ್ನಿಸಿದರು.
ಆದರೆ, ಪೊಲೀಸರು ಯಾರ ಫೋನೂ ಬೇಡ. ಸರಕಾರದ ಗೈಡ್ ಲೈನ್ಸ್ ಏನಿದೆ, ಅದನ್ನು ಪಾಲನೆ ಮಾಡೋದು ಅಷ್ಟೇ ನಮ್ಮ ಕೆಲಸ. ಎಲ್ಲ ವಾಹನ ಸೀಜ್ ಮಾಡ್ತೀವಿ ಎಂದು ಹೇಳಿ ಗಾಡಿಯಿಂದ ಇಳಿದು ನಡೆದು ಹೋಗುವಂತೆ ಹೇಳಿದ್ರು. ಇದೇ ವೇಳೆ, ಸ್ಕೂಟರಿನಲ್ಲಿ ಯುವತಿಯೊಬ್ಬರು ಬಂದರು. ಏನ್ರೀ ಲಾಕ್ಡೌನ್ ಇರೋವಾಗ, ಏಕ್ರೀ ಬಂದಿದ್ದೀರಾ ಎಂದ್ರು ಪೊಲೀಸರು. ನಾನು ಡಾಕ್ಟರ್ ಎಂದಳಾಕೆ. ಹೋ, ಡಾಕ್ಟರಾ.. ಐಡಿ ತೋರಿಸಿ ಎಂದು ಕೇಳಿದ್ದಕ್ಕೆ ಐಡಿ ತಂದಿಲ್ಲ. ನಾನು ಡಾಕ್ಟರ್, ನಂಬಿ.. ಯಾರಿಗೂ ವಂಚಿಸಿಲ್ಲ ಎಂದು ಹೇಳಿದ್ಲು. ಅದಕ್ಕೆ ನೀವು ಡಾಕ್ಟರ್ ಎಂದು ನಾವು ಹೇಗೆ ನಂಬೋದು ಮಾರ್ರೆ.. ಹೋಗ್ಲಿ ಮನೆಯಲ್ಲಿ ಐಡಿ ಇದ್ಯಲ್ಲ ಅದನ್ನು ವಾಟ್ಸಪಲ್ಲಿ ತರಿಸಿ. ಅದನ್ನಾದ್ರೂ ಮಾಡಿ ಎಂದ್ರು. ಕೊನೆಗೆ, ಐಡಿ ವಾಟ್ಸಪಲ್ಲಿ ಬಂತು. ಆಕೆ, ಆಯುರ್ವೇದಿಕ್ ಡಾಕ್ಟರ್ ಒಬ್ಬರಲ್ಲಿ ಅಸಿಸ್ಟೆಂಟ್ ಆಗಿದ್ದರು. ಲಾಕ್ಡೌನಲ್ಲಿ ಎಲ್ಲ ಬಂದ್ ಇರೋವಾಗ ನಿಮ್ಗೇನು ಕೆಲ್ಸ ಎಂದು ಹೇಳಿ ಹೋಗಿ ಮನೆಗೆ ಅಂತ ಆಕೆಯನ್ನು ಕಳಿಸಿಕೊಟ್ಟರು ಪೊಲೀಸರು.
ಇಷ್ಟೆಲ್ಲಾ ಆಗ್ತಿರೋವಾಗ್ಲೇ ಕ್ಲಾಕ್ ಟವರ್, ಹಂಪನಕಟ್ಟೆಯಲ್ಲಿ ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದವು. ಎಲ್ಲವನ್ನೂ ಸೀಜ್ ಮಾಡುವುದಾಗಿ ಪೊಲೀಸರು ಹೇಳ್ತಾ ಇದ್ದರು. ಕಾರು, ಬೈಕಲ್ಲಿದ್ದವರೆಲ್ಲ ಕ್ಲಾಕ್ ಟವರ್ ಬಳಿ ಸೇರಿ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದಿದ್ದರು. ವಾಹನ ತರಬಾರ್ದು ಅಂತ ನಮ್ಗೆ ಗೊತ್ತಿರ್ಲಿಲ್ಲ. ಇವತ್ತೊಂದು ಬಿಟ್ಟುಬಿಡಿ.. ಸೀಜ್ ಮಾಡಬೇಡಿ ಅಂತ ಗೋಗರೆದರು. ಇನ್ನು ಕೆಲವರು ಮಾಜಿ ಎಂಎಲ್ಸಿ ಐವಾನ್ ಡಿಸೋಜರ ಮೆಸೇಜ್ ನಂಬ್ಕೊಂಡು ಬಂದಿದ್ದು. ನೀವು ನೋಡಿದ್ರೆ ಸೀಜ್ ಮಾಡೋದಾಗಿ ಹೇಳ್ತಿದ್ದೀರಿ. ನಿಮ್ದು ಮೆಸೇಜ್ ನಮ್ಗೆ ಸಿಕ್ಕಿಲ್ಲ ಎಂದು ಪೊಲೀಸರಲ್ಲಿ ಹೇಳಿದ್ರು.
ಬೆಳಗಾವಿ ಮೂಲದ ಎಸಿಪಿ ಆಗಿರುವ ಉಪಾಸೆ, ಮಂಗಳೂರಿನ ಜನ ಬುದ್ಧಿವಂತರೆಂದು ಅನ್ಕೊಂಡಿದ್ದೆ. ಏನ್ರೀ ಇಲ್ಲಿನ ಜನಾ ಪೊಲೀಸರು ಹೇಳಿದ್ರೂ ಕೇಳ್ತಾ ಇಲ್ವಲ್ರೀ.. ಎಂದು ಮಾಧ್ಯಮದವರಲ್ಲಿ ಗೊಣಗಿದ್ರು. ಬೆಳಗಾವಿ ಕಡೆ ಪೊಲೀಸರಂದ್ರೆ, ಜನ ಭಯ ಪಡ್ತಾರೆ. ಏನಾದ್ರೂ ಎನೌನ್ಸ್ ಮಾಡ್ಕೊಂಡು ಹೋದ್ರೆ ಜನ ಹೆದರಿ ಮನೆ ಸೇರ್ತಾರೆ. ಇಲ್ಲಿನ ಜನಾ ಬೀದಿಗೆ ಬಂದಿದ್ದಾರೆ ನೋಡಿ ಎಂದ್ರು.
ಕೊನೆಗೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದ್ರು. ಅಲ್ಲಿ ಸೇರಿದ್ದ ಜನರನ್ನು ನೋಡಿ, ಪೊಲೀಸರನ್ನೇ ಗದರಿದ್ರು. ವಿಷ್ಯ ತಿಳಿದು ಏಯ್, ಎಲ್ಲ ವಾಹನ ಸೀಜ್ ಮಾಡ್ರೀ.. ಇವ್ರಿಗೆ ಲಾಠಿಚಾರ್ಜ್ ಮಾಡ್ರೀ ಎಂದ್ರು. ಲಾಠಿ ಬೀಸುವಂತೆ ಹೇಳಿದ್ದು ಕೇಳಿದ ಕೂಡಲೇ ಅಲ್ಲಿದ್ದ ಜನ ಅಲ್ಲಿಂದ ದೂರಕ್ಕೆ ಓಡಿದ್ರು. ಆದರೆ, ಎಸಿಪಿ ಉಪಾಸೆಯವರು ಇವತ್ತೊಂದಿನ ರಿಯಾಯ್ತಿ ಕೊಡೋಣ. ಕೆಲವರು ಅಮಯಾಕರು ಇದ್ದಾರೆ. ನಾಳೆಯಿಂದ ಎಲ್ಲ ವಾಹನ ಸೀಜ್ ಮಾಡೋಣ ಅಂದ್ರು.. ಕಮಿಷನರ್ ಕೂಡ ಅದಕ್ಕೆ ಒಪ್ಪಿದ್ರು.
ಇದೇ ವೇಳೆ, ಬೀದಿಯಲ್ಲಿ ಅಲೆದಾಡುವ ವ್ಯಕ್ತಿಯೊಬ್ಬ ಕಮಿಷನರ್ ಬಳಿಗೆ ಬಂದ. ನೀವು ಕಮಿಷನರ್ ಅಲ್ವಾ ಎನ್ನುತ್ತಾ ಕೈಮುಗಿದ. ಏನಪ್ಪಾ ಮಾಸ್ಕ್ ಹಾಕಿಲ್ಲ ಯಾಕೆ ಎಂದ್ರು ಕಮಿಷನರ್. ನನಗೆ ಯಾರು ಮಾಸ್ಕ್ ಕೊಡ್ತಾರೆ ಎಂದಿದ್ದಕ್ಕೆ, ಅವನಿಗೆ ಒಂದು ಮಾಸ್ಕ್ ಕೊಡ್ರೀ ಎಂದು ಹೇಳಿ ಮಾಸ್ಕ್ ಕೊಡಿಸಿದ್ರು. ಊಟ, ತಿಂಡಿ ಆಗಿದ್ಯಾ ಅಂತ ಅವನಲ್ಲಿ ಕೇಳಿದ್ರು. ಆತ ತಲೆಯಲ್ಲಾಡಿಸಿದ. ಆನಂತ್ರ ಮೂತಿಗೆ ಮಾಸ್ಕ್ ಹಾಕ್ಕೊಂಡು ಅಲ್ಲಿಯೇ ಅಡ್ಡಬಿದ್ದು ತನ್ನಷ್ಟಕ್ಕೆ ತೆರಳಿದ.
ಕ್ಲಾಕ್ ಟವರ್ ಬಳಿ ಗಂಟೆ ಹನ್ನೊಂದಾದ್ರೂ ವಾಹನಗಳನ್ನು ಪೊಲೀಸರು ಬಿಟ್ಟಿರಲಿಲ್ಲ. ನೂರಾರು ವಾಹನಗಳು ರಸ್ತೆಯ ಉದ್ದಕ್ಕೆ ನಿಂತಿದ್ದವು. ಮಾರುಕಟ್ಟೆ, ಬಂದರು, ಸ್ಟೇಟ್ ಬ್ಯಾಂಕ್ ಹೀಗೆ ಎಲ್ಲೆಲ್ಲಿಗೋ ಹೊರಟವರೆಲ್ಲ ಅಲ್ಲಿಯೇ ಉಳಿದುಕೊಂಡಿದ್ದರು. ಕೊನೆಗೆ ಒಂದೊಂದೇ ವಾಹನ ಬಿಟ್ಟು ಕಳಿಸಿದ್ರು.
Video:
Ivan Dsouza WhatsApp message on the Movement of private vehicles moment from 6 am to 10 am has landed many In trouble by the seizure of their cars and bikes at Clock Tower in Mangalore. Though there was clear guidance by the state govt on lockdown a WhatsApp message by Ivan Dsouza has created havoc.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm