ಬ್ರೇಕಿಂಗ್ ನ್ಯೂಸ್
10-05-21 10:30 pm Mangaluru Correspondent ಕರಾವಳಿ
ಮಂಗಳೂರು, ಮೇ 10: ನಗರದಲ್ಲಿ ಅನಾಥರಿಗೆ, ಭಿಕ್ಷುಕರಿಗೆ ಹಲವಾರು ಸಂಘಟನೆ - ಸಂಸ್ಥೆಗಳು ಊಟ ನೀಡುತ್ತಿವೆ. ಆದರೆ, ಇದೇ ರೀತಿ ಅನಾಥರ ಹಸಿವು ನೀಗಿಸುವ ಕಾರ್ಯವನ್ನು ಇಬ್ಬರು ಪೊಲೀಸ್ ಸಿಬಂದಿಯೂ ಮಾಡುತ್ತಿದ್ದಾರೆ.
ಹೌದು.. ಪಾಂಡೇಶ್ವರದ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯ ಇಬ್ಬರು ಸಿಬಂದಿ ಸೇರಿಕೊಂಡು ಭಿಕ್ಷಕರು, ನಿರಾಶ್ರಿತರಿಗೆ ಅನ್ನ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ಶಿವಕುಮಾರ್ ರಾವ್ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ಸುನಿಲ್ ಕುಮಾರ್ ತಮ್ಮ ಕೈಲಾದ ರೀತಿ ಮಾನವೀಯ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕರ್ಫ್ಯೂ ಜಾರಿಯಾದ ಒಂಬತ್ತು ದಿನಗಳಿಂದ ಉರ್ವಾಸ್ಟೋರ್, ಹಳೆ ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣ ರಸ್ತೆ, ಪಂಪ್ವೆಲ್, ಕಂಕನಾಡಿ ಬಳಿ ಅನಾಥರಿಗೆ ಊಟ ನೀಡುತ್ತಿದ್ದಾರೆ. ಅಲ್ಲಲ್ಲಿ ಉಳಿದುಕೊಂಡಿರುವ ಕಾರ್ಮಿಕರು, ರೈಲ್ವೆ ನಿಲ್ದಾಣದಲ್ಲಿ ಊಟ ಸಿಗದೆ ಪರದಾಡುತ್ತಿರುವ ಮಂದಿ, ಪಾಳುಬಿದ್ದ ಕಟ್ಟಡಗಳಲ್ಲಿ ಬದುಕುತ್ತಿರುವ ಕಾರ್ಮಿಕರಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ತಮ್ಮ ವೈಯಕ್ತಿಕ ಹಣದಲ್ಲಿ ಊಟ ತಯಾರಿಸಿ ನೀಡುತ್ತಿದ್ದಾರೆ. ಊಟಕ್ಕೆ ಬೇಕಾಗುವ ಸಾಮಗ್ರಿ ಖರೀದಿಸಿ ತಮ್ಮ ಸ್ನೇಹಿತ ಬಳಗದ ಮೂಲಕ ಊಟ ತಯಾರಿಸಿ, ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಇವರು ಅನ್ನ, ಕೋಳಿ ಮಾಂಸದ ಸಾರು, ಪಲ್ಯ ಒಳಗೊಂಡ ಊಟವನ್ನು 150 ಮಂದಿಗೆ ಪ್ರತಿನಿತ್ಯ ನೀಡುತ್ತಿದ್ದಾರೆ. ಇದರ ಜತೆ ಬಾಟಲಿ ನೀರು ಮತ್ತು ಮಾಸ್ಕ್ ಕೂಡ ನೀಡುತ್ತಿದ್ದಾರೆ. ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ರಾಮಭವನ ಹೊಟೇಲಿನ ಸ್ನೇಹಿತರೊಬ್ಬರಿಗೆ ನೀಡುತ್ತಿದ್ದು ಅವರು ಊಟ ರೆಡಿ ಮಾಡುತ್ತಾರೆ. ಬಳಿಕ ಊಟವನ್ನು ವಿತರಿಸುವ ಕೆಲಸವನ್ನು ಮಹಾಕಾಳಿಪಡ್ಪುವಿನ ಆದಿ ಮಹೇಶ್ವರಿ ಕ್ರಿಕೆಟರ್ಸ್ ಎಂಬ ಯುವಕರ ತಂಡ ಮಾಡುತ್ತಿದೆ. ಇದುವರೆಗೆ ಸುಮಾರು 1,000 ಮಾಸ್ಕ್ ಗಳನ್ನು ವಿತರಿಸಲಾಗಿದೆ ಎಂದು ಶಿವಕುಮಾರ್ ರಾವ್ ತಿಳಿಸಿದ್ದಾರೆ.
ಕರ್ತವ್ಯದಲ್ಲಿರುವಾಗ ನಿತ್ಯ ಹಲವರು ಊಟಕ್ಕಾಗಿ ಪರದಾಡುವುದನ್ನು ನೋಡುತ್ತೇವೆ. ಮೊದಲಿಗೆ ಇಬ್ಬರು ಸೇರಿ, ಒಂದು ದಿನ ಒಬ್ಬರಂತೆ ಎರಡು ದಿನ ಊಟ ಕೊಡಲು ನಿರ್ಧರಿಸಿದೆವು. ಆದರೆ ಪ್ರತಿದಿನ ಅಸಹಾಯಕರು ಊಟಕ್ಕಾಗಿ ಕಾಯುತ್ತಿರುತ್ತಾರೆ. ಹಾಗೆ ಮುಂದುವರಿಸಿ ಇಂದು 9ನೇ ದಿನ ಕಳೆದಿದೆ. ಈಗ ಪ್ರತಿದಿನ 150 ಊಟ ಒದಗಿಸುತ್ತಿದ್ದೇವೆ. ಆದರೆ ಅದು ಸಾಕಾಗುವುದಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ನೀಡುತ್ತಿದ್ದೇವೆ. ಇಂದು ಇನ್ನೊಬ್ಬ ನಮ್ಮ ಸ್ನೇಹಿತ ನಾನೂ ನಿಮ್ಮ ಜತೆ ಕೈಜೋಡಿಸುವುದಾಗಿ ಹೇಳಿದ್ದಾನೆ. ಕಷ್ಟದ ಸಮಯದಲ್ಲಿ ಪೊಲೀಸ್ ಆಯುಕ್ತರು ನಮಗೆಲ್ಲ ಊಟದ ವ್ಯವಸ್ಥೆ ಮಾಡಿದ್ದಾರೆ. ನಾವು ಕೂಡ ಒಂಚೂರು ಅನಾಥರ ಹಸಿವು ನೀಗಿಸುವಲ್ಲಿ ತೊಡಗಿದ್ದೇವೆ ಎಂದಿದ್ದಾರೆ.
In a gesture that shows cops have hearts, too, police officers are offering free food to the poor and the needy amid lockdowm in Mangalore. Shivakumar from Pandeshwar and Sunil Kumar from Surathkal police statiom are the samaritans.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm